ಬ್ರೇಕಿಂಗ್ ನ್ಯೂಸ್
30-07-25 11:40 am Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 30 : ಪಾಕಿಸ್ತಾನದ ಅಲ್ ಖೈದಾ ಉಗ್ರರ ಬೇರುಗಳು ಕರ್ನಾಟಕ ರಾಜಧಾನಿಗೂ ವ್ಯಾಪಿಸಿದ್ದು ಗುಜರಾತ್ ಭಯೋತ್ಪಾದನಾ ನಿಗ್ರಹ ಘಟಕದ (ಎಟಿಎಸ್) ಪೊಲೀಸರು ಮಂಗಳವಾರ ನಗರದಲ್ಲಿ ವಾಸಿಸುತ್ತಿದ್ದ ಜಾರ್ಖಂಡ್ ಮೂಲದ ಯುವತಿಯೊಬ್ಬಳನ್ನು ಬಂಧಿಸಿದ್ದಾರೆ.
ಜಾರ್ಖಂಡ್ ಮೂಲದ ಶಮಾ ಪರ್ವೀನ್ (33) ಬಂಧಿತೆ. ಅಲ್ ಖೈದಾ ಉಗ್ರ ಸಂಘಟನೆ ಬಲಗೊಳಿಸಲು ಶಮಾ ಪರ್ವೀನ್ ಕೆಲಸ ಮಾಡುತ್ತಿದ್ದಳು ಎಂಬ ವಿಚಾರ ಎಟಿಎಸ್ ತನಿಖೆಯಲ್ಲಿ ಬಯಲಾಗಿತ್ತು. ಇದರ ಬೆನ್ನಲ್ಲೇ ಮನೋರಾಯನಪಾಳ್ಯದಲ್ಲಿ ವಾಸಿಸುತ್ತಿದ್ದ ಪರ್ವೀನ್ ಮನೆಯ ಮೇಲೆ ದಾಳಿ ನಡೆಸಿತ್ತು. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಶಂಕಿತ ಭಯೋತ್ಪಾದಕಿ ಪರ್ವೀನ್ ಳನ್ನು ಬಂಧಿಸಲಾಗಿದೆ. ಮನೆಯಲ್ಲಿ ಹಲವು ಡಿಜಿಟಲ್ ಸಾಧನಗಳು, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪರ್ವೀನ್ ಪದವೀಧರೆಯಾಗಿದ್ದು, ಮೂರು ವರ್ಷದ ಹಿಂದೆ ನಗರಕ್ಕೆ ಆಗಮಿಸಿದ್ದರು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸಹೋದರನ ಮನೆಯಲ್ಲಿ ವಾಸವಿದ್ದರು. ಅಲ್ ಖೈದಾ ಭಾರತೀಯ ಘಟಕದ (ಎಕ್ಯೂಐಎಸ್) ಪರವಾಗಿ ಕೆಲಸ ಮಾಡುತ್ತಿದ್ದ ಪರ್ವೀನ್, ಇನ್ಸ್ ಟಾ ಗ್ರಾಂ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಅಲ್ ಖೈದಾ ವಿಚಾರಧಾರೆಯನ್ನು ಹರಿಯ ಬಿಡುತ್ತಿದ್ದಳು. ಅಲ್ ಖೈದಾ ಉಗ್ರನೊಬ್ಬನ ವಿಡಿಯೊಗಳನ್ನು ಹಂಚಿಕೊಂಡು ಭಯೋತ್ಪಾದನಾ ಕೃತ್ಯಕ್ಕೆ ಪ್ರೇರೇಪಿಸುತ್ತಿದ್ದಳು ಎಂದು ಮೂಲಗಳು ಹೇಳಿವೆ.
ಕೆಲವು ದಿನಗಳ ಹಿಂದೆ ಗುಜರಾತ್ ನಲ್ಲಿ ನಾಲ್ವರು ಅಲ್ ಖೈದಾ ಶಂಕಿತ ಉಗ್ರರನ್ನು ಎಟಿಎಸ್ ಬಂಧಿಸಿತ್ತು. ತನಿಖೆ ವೇಳೆ ನಾಲ್ವರ ಜತೆಗೂ ಪರ್ವೀನ್ ನಂಟಿರುವುದು ಪತ್ತೆಯಾಗಿದೆ. ಹೀಗಾಗಿ, ಸಾಕ್ಷಾಧಾರಗಳ ಜತೆಗೆ ಆಗಮಿಸಿದ ಎಟಿಎಸ್ ಪೊಲೀಸರು ಪರ್ವೀನ್‌ಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ ಟ್ರಾನ್ಸಿಟ್ ವಾರೆಂಟ್ ಮೇರೆಗೆ ಗುಜರಾತ್‌ಗೆ ಕೊಂಡೊಯ್ದಿದ್ದಾರೆ.
The roots of Pakistan-based terror outfit Al-Qaeda have reportedly extended into Karnataka's capital, Bengaluru. In a significant development, the Gujarat Anti-Terrorism Squad (ATS) on Tuesday arrested a 33-year-old woman residing in the city for alleged links with the banned terror group.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am