ಬ್ರೇಕಿಂಗ್ ನ್ಯೂಸ್
29-07-25 02:20 pm Mangalore Correspondent ಕರಾವಳಿ
ಬೆಳ್ತಂಗಡಿ, ಜುಲೈ 29 : ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣ ನಿರ್ಣಾಯಕ ಹಂತಕ್ಕೆ ಬಂದಿದ್ದು ದೂರುದಾರ ವ್ಯಕ್ತಿ ತೋರಿಸಿದ ಸಮಾಧಿ ಸ್ಥಳಗಳಲ್ಲಿ ಪೊಲೀಸರು ಅಗೆಯುವ ಕೆಲಸ ಆರಂಭಿಸಿದ್ದಾರೆ. ಎಸ್ಐಟಿ ಅಧಿಕಾರಿಗಳ ಸೂಚನೆಯಂತೆ, ಅಗೆಯುವ ಕೆಲಸಕ್ಕಾಗಿ 13 ಮಂದಿ ಕಾರ್ಮಿಕರನ್ನು ಧರ್ಮಸ್ಥಳ ಪಂಚಾಯತ್ ನಿಯೋಜಿಸಿದೆ. ಇಂದು ಬೆಳಗ್ಗೆ ಪೊಲೀಸರ ಜೊತೆಗೆ ಕಾರ್ಮಿಕರು ಹಾರೆ, ಕತ್ತಿಗಳನ್ನು ಹಿಡಿದು ಸ್ಥಳಕ್ಕೆ ಬಂದಿದ್ದಾರೆ.
ನಿನ್ನೆಯಷ್ಟೇ ದೂರುದಾರ ವ್ಯಕ್ತಿ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಹೆಣ ಹೂಳಲಾಗಿದೆ ಎಂದಿರುವ 13 ಸ್ಥಳಗಳನ್ನು ಗುರುತಿಸಿದ್ದು ಅಲ್ಲಿಗೆ ಮಾರ್ಕ್ ಹಾಕಿದ್ದ ಅಧಿಕಾರಿಗಳು ರಾತ್ರಿ ವೇಳೆ ಕಾವಲಿಗೆ ಎಎನ್ಎಫ್ ಪೊಲೀಸರನ್ನು ನಿಯೋಜಿಸಿದ್ದರು. ಇಂದು ಆ ಸ್ಥಳಗಳನ್ನು ಅಗೆಯಲು ಆರಂಭಿಸಿದ್ದು ಈ ವೇಳೆ ನಿಯಮದಂತೆ ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ಮೇರಿಸ್, ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲದೆ, ಎಫ್ಎಸ್ಎಲ್ ತಜ್ಞರು, ಮಂಗಳೂರಿನ ಕೆಎಂಸಿ ವೈದ್ಯರು ಕೂಡ ಆಗಮಿಸಿದ್ದಾರೆ.






ಮಾರ್ಕ್ ಹಾಕಿರುವ ಜಾಗದಲ್ಲಿ ಅಗೆದು ಅಲ್ಲಿ ಮಾನವ ಅವಶೇಷಗಳ ಮಾದರಿಯನ್ನು ಪತ್ತೆ ಮಾಡಲಿದ್ದಾರೆ. ಸದ್ಯಕ್ಕೆ ಆರು ಅಡಿಗಳಷ್ಟು ಆಳಕ್ಕೆ ಅಗೆಯಲು ಪೊಲೀಸರು ನಿರ್ಧರಿಸಿದ್ದಾರೆ. ದೂರುದಾರ ವ್ಯಕ್ತಿಯೇ ಹೆಣ ಹೂತಿದ್ದಾನೆ ಎಂದಿರುವುದರಿಂದ ಮತ್ತಷ್ಟು ಆಳ ಅಗತ್ಯವಿದೆಯೇ ಎನ್ನುವ ಬಗ್ಗೆ ಆತನ ಹೇಳಿಕೆ ಆಧರಿಸಿ ನಿರ್ಧಾರ ಆಗಲಿದೆ.
ಎಸ್ಐಟಿ ತಂಡದ ಎಸ್ಪಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸ್ಥಳ ತನಿಖೆ ಸಾಗಿದೆ. ಸದ್ಯಕ್ಕೆ ಗುರುತು ಹಾಕಿರುವ 13 ಸ್ಥಳಗಳು ಅರಣ್ಯ ವ್ಯಾಪ್ತಿಗೆ ಸೇರಿದ್ದು ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ವಿಭಾಗದ ಅಧಿಕಾರಿಗಳೂ ಸ್ಥಳದಲ್ಲಿದ್ದಾರೆ. ಸಮಾಧಿ ಅಗೆದ ಸ್ಥಳದಲ್ಲಿ ಯಾವುದೇ ಎಲುಬು, ಇನ್ನಿತರ ಅವಶೇಷ ಸಿಕ್ಕಿದರೂ ಅದನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.
ಅಗೆಯುವ ಸ್ಥಳಗಳು ದಟ್ಟ ಕಾಡಿನ ಒಳಗಿರುವುದರಿಂದ ಆ ಜಾಗಕ್ಕೆ ಮಾಧ್ಯಮ ಮತ್ತು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೂರುದಾರ ವ್ಯಕ್ತಿ ಮತ್ತು ಅವರ ವಕೀಲರು ಜೊತೆಗಿದ್ದಾರೆ. ಸೂಚಿತ ಸಮಾಧಿ ಪ್ರದೇಶದಲ್ಲಿ ಏನು ಸಿಗುತ್ತದೆ ಎನ್ನುವ ವಿಚಾರ ಸಾರ್ವಜನಿಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
The mysterious human burial case near Dharmasthala has reached a crucial stage, with police commencing excavation work at locations identified by the complainant. Acting on the directions of the Special Investigation Team (SIT), the Dharmasthala Gram Panchayat has deployed 13 workers for the digging operation.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 02:05 pm
HK News Staffer
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm