ಬ್ರೇಕಿಂಗ್ ನ್ಯೂಸ್
27-07-25 08:56 pm Mangalore Correspondent ಕರಾವಳಿ
ಮಂಗಳೂರು, ಜುಲೈ.27: ಹತ್ತು ವರ್ಷಗಳ ಹಿಂದೆ ಮಂಗಳೂರಿನ ಬಿಜೈನಲ್ಲಿ ಭಾರತಿ ಬಿಲ್ಡರ್ಸ್ ಕಚೇರಿಗೆ ಭೂಗತ ಪಾತಕಿ ರವಿ ಪೂಜಾರಿ ಸೂಚನೆಯಂತೆ ಶೂಟೌಟ್ ಮಾಡಿದ್ದ ಪ್ರಕರಣದಲ್ಲಿ ಶಾರ್ಪ್ ಶೂಟರ್ ಮಹಾರಾಷ್ಟ್ರ ಮೂಲದ ಕರಾಡ್ ಗಣೇಶ್ ಲಕ್ಷ್ಮಣ್ ಸಕಟ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಿಜೈ ಭಾರತಿ ಬಿಲ್ಡರ್ಸ್ ಕಚೇರಿಗೆ ಭೂಗತ ಪಾತಕಿ ರವಿ ಪೂಜಾರಿ ಸಹಚರರು ನಡೆಸಿದ ಶೂಟ್ಔಟ್ ಗೆ ಸಂಬಂಧಿಸಿ ಉರ್ವಾ ಪೊಲೀಸ್ ಠಾಣೆಯಲ್ಲಿ 23/2014, ಕಲಂ: 447,120(b) 307 IPC & 27 Arms Act ನಂತೆ ಪ್ರಕರಣ ದಾಖಲಾಗಿತ್ತು. ಸದ್ರಿ ಪ್ರಕರಣದ ಆರೋಪಿಯಾಗಿದ್ದ, ಮಹಾರಾಷ್ಟ್ರ ಕರಾಡ್ ಗಣೇಶ್ ಲಕ್ಷ್ಮಣ್ ಸಕಟ್ ನ್ಯಾಯಾಲಯಕ್ಕೆ ಹಾಜರಾಗದೆ 2015ರಿಂದ ತಲೆ ಮರೆಸಿಕೊಂಡಿದ್ದ.
ಆರೋಪಿ ವಿರುದ್ದ ಮಂಗಳೂರಿನ ಜೆಎಂಎಫ್ ಸಿ 3ನೇ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆರೋಪಿಯನ್ನು ಮಹಾರಾಷ್ಟ್ರದ ಪಂಢರಾಪುರ ಎಂಬಲ್ಲಿಂದ ಉರ್ವಾ ಪೊಲೀಸ್ ಠಾಣಾ ನಿರೀಕ್ಷಕರ ತಂಡ ಎಎಸ್ಐ ವೇಣುಗೋಪಾಲ್, ಸಿಬ್ಬಂದಿಗಳಾದ ಹೆಚ್ ಸಿ ಪ್ರಮೋದ್, ಹೆಚ್ ಸಿ ನಾರಾಯಣ, ಹೆಚ್ ಸಿ ಗೋವಿಂದರಾಜ್ ಅವರು ದಸ್ತಗಿರಿ ಮಾಡಿದ್ದು ಜುಲೈ 27ರಂದು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ 44/2014 ಕಲಂ: 448, 507, 120(ಬಿ) ಜೊತೆಗೆ 34 IPC ಪ್ರಕರಣವಿದ್ದು, ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯ ಕರಾಡ್ ನಗರದಲ್ಲಿಯೂ ಆರ್ಮ್ಸ್ ಆ್ಯಕ್ಟ್ ಪ್ರಕರಣ ಇರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
In a major breakthrough, Mangaluru police have arrested a sharp shooter from Maharashtra in connection with a decade-old shootout case at the Bharathi Builders office in Bejai, allegedly carried out on the instructions of underworld gangster Ravi Pujari. The accused, identified as Ganesh Lakshman Sakat from Karad, Maharashtra, had been absconding since 2015. He was wanted in the 2014 shootout case registered at Urwa Police Station under IPC sections 447, 120(b), 307, and Section 27 of the Arms Act (Case No. 23/2014).
31-07-25 11:20 pm
Bangalore Correspondent
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
Pranab Mohanty, SIT, Dharmasthala; ಎಡಿಜಿಪಿ ಪ್...
30-07-25 06:28 pm
Dharmasthala Burial Site, Atm, Pan Card Found...
30-07-25 05:42 pm
Al Qaeda Arrest, Bangalore: ಕರ್ನಾಟಕ ರಾಜಧಾನಿಗೂ...
30-07-25 11:40 am
31-07-25 10:08 pm
HK News Desk
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
31-07-25 11:16 pm
Mangalore Correspondent
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
Human Skull, Multiple Bones, Dharmasthala, SI...
31-07-25 08:45 pm
31-07-25 06:04 pm
Mangalore Correspondent
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm