ಬ್ರೇಕಿಂಗ್ ನ್ಯೂಸ್
27-07-25 08:14 pm Mangalore Correspondent ಕರಾವಳಿ
ಮಂಗಳೂರು, ಜುಲೈ.27: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಿರುವ ದೂರುದಾರ ವ್ಯಕ್ತಿಯನ್ನು ಭಾನುವಾರವೂ ಎಸ್ಐಟಿ ತನಿಖಾಧಿಕಾರಿಗಳು ಮಂಗಳೂರಿನ ಮಲ್ಲಿಕಟ್ಟೆ ಐಬಿ ಕಚೇರಿಯಲ್ಲಿ ತನಿಖೆಗೆ ಒಳಪಡಿಸಿದ್ದಾರೆ.
ದೂರುದಾರನನ್ನು ಭಾನುವಾರ ಬೆಳಗ್ಗೆ 10.30ಕ್ಕೆ ವಕೀಲರು ಖಾಸಗಿ ಕಾರಿನಲ್ಲಿ ಕರೆತಂದಿದ್ದು ವಿಚಾರಣೆಗೆ ಒಳಗಾಗಿದ್ದಾರೆ. ಆನಂತರ, ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಮಧ್ಯಾಹ್ನ 12 ಗಂಟೆಗೆ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. ಡಿಐಜಿ ಅನುಚೇತ್ ಮತ್ತು ಎಸ್ಪಿ ಜಿತೇಂದ್ರ ದಯಾಮ ಅವರು ದೂರುದಾರ ವ್ಯಕ್ತಿಯನ್ನು ಸತತ ಆರು ಗಂಟೆಗಳ ವಿಚಾರಣೆ ನಡೆಸಿದ್ದಾರೆ. ಸಂಜೆ ವೇಳೆಗೆ ದೂರುದಾರ ವ್ಯಕ್ತಿ ತನ್ನ ವಕೀಲರೊಂದಿಗೆ ಹೊರಗಡೆ ಬಂದಿದ್ದಾರೆ.
5 ಗಂಟೆ ಸುಮಾರಿಗೆ ಎಡಿಜಿಪಿ ಪ್ರಣವ್ ಮೊಹಂತಿ ಮಂಗಳೂರಿನಿಂದ ಬೆಳ್ತಂಗಡಿಗೆ ತೆರಳಿದ್ದು ಅಲ್ಲಿ ಹೊಸತಾಗಿ ಮಾಡಿರುವ ಎಸ್ಐಟಿ ಕಚೇರಿಗೆ ತೆರಳಿದ್ದಾರೆ. ಅಲ್ಲಿನ ಎಸ್ಐಟಿ ಕಚೇರಿಯನ್ನು ಪ್ರಣವ್ ಮೊಹಂತಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿಂದ 6.40ರ ಸುಮಾರಿಗೆ ಮಂಗಳೂರಿಗೆ ಮರಳಿದ್ದು 8 ಗಂಟೆಗೆ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದ್ದಾರೆ.
ಸಂಜೆ 6.30ರ ವೇಳೆಗೆ ಎಸ್ಐಟಿ ವಿಚಾರಣೆಯಲ್ಲಿದ್ದ ದೂರುದಾರ ವ್ಯಕ್ತಿ ವಕೀಲರೊಂದಿಗೆ ಖಾಸಗಿ ಕಾರಿನಲ್ಲಿ ಮಂಗಳೂರಿನ ಎಸ್ಐಟಿ ಕಚೇರಿಯಿಂದ ಅಜ್ಞಾತ ಸ್ಥಳಕ್ಕೆ ಮರಳಿದ್ದಾನೆ. ಸೋಮವಾರ ಜುಲೈ 28ರಂದು ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ತೆರಳಲಿದ್ದು ಮುಂದಿನ ಪ್ರಕ್ರಿಯೆಯನ್ನು ಅಲ್ಲಿಂದಲೇ ನಿರ್ವಹಿಸುವ ಸಾಧ್ಯತೆಯಿದೆ.
The Special Investigation Team (SIT) continued its interrogation for the second consecutive day of the man who recently filed a sensational complaint claiming to have buried hundreds of female bodies in Dharmasthala village. The questioning took place at the Mallikatte Inspection Bungalow (IB) office in Mangaluru on Sunday.
31-07-25 11:20 pm
Bangalore Correspondent
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
Pranab Mohanty, SIT, Dharmasthala; ಎಡಿಜಿಪಿ ಪ್...
30-07-25 06:28 pm
Dharmasthala Burial Site, Atm, Pan Card Found...
30-07-25 05:42 pm
Al Qaeda Arrest, Bangalore: ಕರ್ನಾಟಕ ರಾಜಧಾನಿಗೂ...
30-07-25 11:40 am
31-07-25 10:08 pm
HK News Desk
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
31-07-25 11:16 pm
Mangalore Correspondent
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
Human Skull, Multiple Bones, Dharmasthala, SI...
31-07-25 08:45 pm
31-07-25 06:04 pm
Mangalore Correspondent
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm