ಬ್ರೇಕಿಂಗ್ ನ್ಯೂಸ್
26-07-25 11:37 am Mangalore Correspondent ಕರಾವಳಿ
ಮಂಗಳೂರು, ಜುಲೈ.26: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ದೇಶದ ಅತಿದೊಡ್ಡ ಉದ್ಯೋಗ ಮೇಳ 'ಆಳ್ವಾಸ್ ಪ್ರಗತಿ -2025' ಆ.1 ಮತ್ತು 2ರಂದು విದ್ಯಾಗಿರಿ ಅಡವರల్లి ಆಯೋಜಿಸಲಾಗಿದೆ. ಈ ಬಾರಿ 300ಕ್ಕೂ ಅಧಿಕ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. 20 ಸಾವಿರಕ್ಕೂ ಹೆಚ್ಚು ಉದ್ಯೋಗ ಆಸಕ್ತರು ನೋಂದಣಿ ಮಾಡಿಕೊಂಡಿದ್ದು ಸೂಕ್ತ ಕೆಲಸ ಗಿಟ್ಟಿಸಿಕೊಳ್ಳಲು ಸಾಕಷ್ಟು ತಯಾರಿ ಮಾಡಿಕೊಂಡು ಬರುವಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದ್ದಾರೆ.
ಕರಾವಳಿ ಜಿಲ್ಲೆಗಳ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಸಿಗಬೇಕೆಂದು 2007ರಲ್ಲಿ ಉದ್ಯೋಗ ಮೇಳ ಆರಂಭಿಸಲಾಗಿತ್ತು. ಈ ಬಾರಿ 15ನೇ ವರ್ಷದ ಮೇಳ ನಡೆಯುತ್ತಿದ್ದು, ಎರಡು ತಿಂಗಳಿನಿಂದ ಇದಕ್ಕಾಗಿ ಸಿದ್ಧತೆ ನಡೆಸಲಾಗಿದೆ. ಈವರೆಗಿನ ಉದ್ಯೋಗ ಮೇಳದಲ್ಲಿ 36,151 ಮಂದಿಗೆ ಉದ್ಯೋಗ ನೀಡಲಾಗಿದ್ದು, 61,517 ಅಭ್ಯರ್ಥಿಗಳನ್ನು ನಾನಾ ಕಂಪನಿ ಗಳು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಈ ಸಲ 300ಕ್ಕು ಹೆಚ್ಚು ಕಂಪನಿಗಳು ಬರಲಿದ್ದು 15 ಸಾವಿರ ಉದ್ಯೋಗಕ್ಕೆ ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ ಇದೆ. ಬ್ಯಾಂಕಿಂಗ್, ಐಟಿ, ಐಟಿಇಎಸ್, ಹೆಲ್ತ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್ ಜಿಓಗಳನ್ನು ಪ್ರತಿನಿಧಿಸುವ ಉನ್ನತ ಮಟ್ಟದ ಕಂಪನಿಗಳು ಆಳ್ವಾಸ್ ಪ್ರಗತಿಯಲ್ಲಿ ನೋಂದಣಿ ಮಾಡಿಕೊಳ್ಳಲಿವೆ ಎಂದವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.


"ಆ.1ರಂದು ಬೆಳಗ್ಗೆ 9.30ಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ವಿವಿಯ ಕುಲಪತಿ ಡಾ.ಪಿ.ಎಲ್.ಧರ್ಮ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರು ಭಾಗವಹಿ ಸಲಿದ್ದಾರೆ. ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸುವರು.
ಸಾಧಕ ಉದ್ಯಮಿಗಳಿಗೆ ಸನ್ಮಾನ
ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಅಧ್ಯಕ್ಷ ಶಶಿಕಿರಣ್ ಶೆಟ್ಟಿ, ದುಬೈನ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ನ ವ್ಯವಸ್ಥಾಪಕ ನಿರ್ದೇಶಕ ವಕ್ವಾಡಿ ಪ್ರವೀಣ್ ಶೆಟ್ಟಿ, ಸೌದಿ ಅರೇಬಿಯದ ಎಕ್ಸ್ ಪರ್ಟೈಸ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಶೇಖ್ ಕರ್ನಿರೆ, ಬಿಗ್ ಬ್ಯಾಗ್ಸ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸ್ಥಾಪಕ ರವೀಶ್ ಕಾಮತ್, ರೋಹನ್ ಕಾರ್ಪೊರೇಶನ್ ಸ್ಥಾಪಕ ರೋಹನ್ ಮೊಂತರೋ, ನೀವಿಯಸ್ ಸೊಲ್ಯೂಷನ್ಸ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಯೋಗ್ ಶೆಟ್ಟಿ ಅವರನ್ನು ಇದೇ ವೇಳೆ ಸನ್ಮಾನಿಸಲಾಗುವುದು ಎಂದರು.
ವಿವಿಧ ಕಂಪನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್, ಎಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್ ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ, ಎಸ್ಎಸ್ಎಲ್ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲಿವೆ. ಯಾವುದೇ ಕೋರ್ಸ್ಗಳನ್ನು 2025ರ ಶೈಕ್ಷಣಿಕ ವರ್ಷದ ಮುಂಚೆ ಅಥವಾ ಒಳಗೆ ಪೂರ್ಣಗೊಳಿಸುವವರು ಹಾಗೂ ಉದ್ಯೋಗದ ಅನುಭವ ಇರುವವರೂ ಮೇಳದಲ್ಲಿ ಮುಕ್ತವಾಗಿ ಭಾಗವಹಿಸಬಹುದು ಎಂದರು.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್ ಸೈಟ್ www.alvaspragati.com ನಲ್ಲಿ ಪ್ರಕಟಿಸಲಾಗಿದೆ. ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ http://alvaspragati.com/Candidate Registration ವೆಬ್ಸೈಟ್ನಲ್ಲಿ ಉಚಿತವಾಗಿ ನೋಂದಣಿ ಮಾಡಬಹುದಾಗಿದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರನ್ನೂ ಸಂಪರ್ಕಿಸಲಾಗಿದ್ದು ಅವರಲ್ಲಿಗೆ ಉದ್ಯೋಗಕ್ಕಾಗಿ ಬರುವ ಅಭ್ಯರ್ಥಿಗಳನ್ನು ಆಳ್ವಾಸ್ ಪ್ರಗತಿಗೆ ಕರೆತರಲು ಎಲ್ಲ ವಿಧಾನಸಭೆ ಕ್ಷೇತ್ರದಿಂದ ಬಸ್ ವ್ಯವಸ್ಥೆ ಮಾಡಿದ್ದಾರೆ. ಈಗಾಗಲೇ ವೇದವ್ಯಾಸ ಕಾಮತ್, ಬಂಟ್ವಾಳ, ಪುತ್ತೂರಿನಲ್ಲಿ ಶಾಸಕರೇ ಉದ್ಯೋಗ ಮೇಳದ ಪ್ರಚಾರಕ್ಕಾಗಿ ಸಭೆ ನಡೆಸಿದ್ದಾರೆ. ಇಡೀ ದೇಶದಲ್ಲೇ ಇದೊಂದು ಅತಿ ದೊಡ್ಡ ಉದ್ಯೋಗ ಮೇಳವಾಗಿದ್ದು ಬೆಂಗಳೂರು, ಚೆನ್ನೈ, ಮಂಗಳೂರು ಹೀಗೆ ಹಲವಡೆಯ ಎಲ್ಲ ರೀತಿಯ ಕಂಪನಿಗಳು ನೇರ ಉದ್ಯೋಗ ನೇಮಕಾತಿ ಮಾಡಿಕೊಳ್ಳಲಿವೆ ಎಂದ ವಿವೇಕ್ ಆಳ್ವ, ಬೇರೆ ಜಿಲ್ಲೆಗಳ ಅಭ್ಯರ್ಥಿಗಳ ರೀತಿ ನಮ್ಮ ಕರಾವಳಿ ಜಿಲ್ಲೆಗಳ ಯುವಜನರು ಉದ್ಯೋಗಕ್ಕೆ ಆಸಕ್ತಿ ತೋರಿ ಬರುತ್ತಿಲ್ಲ. ಕಳೆದ ವರ್ಷ ಬೆಂಗಳೂರಿನ ಕಂಪನಿಯೊಂದು 31 ಜನರನ್ನು ಫೈನಲ್ ಲಿಸ್ಟ್ ಮಾಡಿತ್ತು. ಒಬ್ಬನೂ ನಮ್ಮ ಜಿಲ್ಲೆಯವರು ಇರಲಿಲ್ಲ ಎಂದರು.

ಈ ಬಾರಿ ಹತ್ತಕ್ಕೂ ಹೆಚ್ಚು ಮಾಧ್ಯಮ ಸಂಸ್ಥೆಗಳೂ ಬರಲಿದ್ದು 180 ಜಾಬ್ ಆಫರ್ ಮಾಡಿವೆ. ಫಾರ್ಮಾ ವಲಯದಲ್ಲಿ Cipla, Hetero, Jubilant pharmova, Medorganics, Meditek India ಮತ್ತಿತರ ಕಂಪನಿಗಳಿವೆ. ಹೆಲ್ತ್ ಕೇರ್ ನಲ್ಲಿ 2000ಕ್ಕೂ ಉದ್ಯೋಗ ಭರ್ತಿ ಆಗಲಿದ್ದು ನರ್ಸಿಂಗ್, ಪ್ಯಾರಾ ಮೆಡಿಕಲ್, ಫಿಸಿಯೋಥೆರಪಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ ಉದ್ಯೋಗ ಇರಲಿವೆ. ಐಟಿಇಎಸ್ ವಲಯದಲ್ಲಿ ಮೂರು ಸಾವಿರ ಉದ್ಯೋಗ ಭರ್ತಿಯಾಗಲಿದ್ದು ಇನ್ಫೋಸಿಸ್, ಅಮೆಜಾನ್ ನಂತಹ ದಿಗ್ಗಜ ಕಂಪನಿಗಳು ಪಾಲ್ಗೊಳ್ಳಲಿವೆ. ಇದಲ್ಲದೆ, ಖಾಸಗಿ ವಲಯದ ಎಲ್ಲ ಬ್ಯಾಂಕುಗಳೂ ಉದ್ಯೋಗ ನೇಮಕಾತಿ ಮಾಡಿಕೊಳ್ಳಲಿವೆ. ಇಂಜಿನಿಯರಿಂಗ್, ಡಿಪ್ಲೊಮಾ ಆದವರನ್ನು ಕಿರ್ಲೋಸ್ಕರ್, ವೋಲ್ವೋ, ಟಾಟಾ ಕಂಪನಿಗಳು ಭರ್ತಿ ಮಾಡಿಕೊಳ್ಳಲಿವೆ. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವ ಆಕಾಂಕ್ಷಿಗಳಿಗೆ ಜು.31ರಿಂದ ಉಚಿತ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಐಟಿಐ/ಡಿಪ್ಲೊಮಾ ಅಭ್ಯರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ವಿವೇಕ್ ಆಳ್ವ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ರಂಜಿತಾ ಆಚಾರ್ಯ ಇದ್ದರು.
The Alva’s Education Foundation will host the 15th edition of its mega job fair, Alva’s Pragati 2025, on August 1 and 2 at Vidyagiri, Moodbidri. The event, widely regarded as India’s largest job fair, will witness participation from over 300 reputed companies and is expected to attract more than 25,000 job seekers. This year, around 15,000 job offers are anticipated. Vivek Alva, Managing Trustee of Alva’s Education Foundation, said that meticulous preparations have been underway for the last two months.
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
25-10-25 02:28 pm
HK News Desk
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
25-10-25 02:36 pm
Mangalore Correspondent
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
25-10-25 02:14 pm
Mangaluru Correspondent
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm