ಬ್ರೇಕಿಂಗ್ ನ್ಯೂಸ್
23-07-25 10:25 pm Mangalore Correspondent ಕರಾವಳಿ
ಮಂಗಳೂರು, ಜುಲೈ 23 : ಇತ್ತೀಚೆಗೆ ಜೈಲಿನಲ್ಲಿ ಸಹ ಕೈದಿಯೊಬ್ಬನಿಗೆ ಮೂವರು ಕೈದಿಗಳು ಸೇರಿ ಹೊಡೆದು ಹಲ್ಲೆ ಮಾಡಿದ್ದಲ್ಲದೆ, ಆತನಿಗೆ ಒತ್ತಡ ಹೇರಿ ಹಫ್ತಾ ವಸೂಲಿ ಮಾಡಿದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೈಲು ಒಳಗಡೆಯೇ ಹಫ್ತಾ ವಸೂಲಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಆರೋಪಿತ ನಾಲ್ವರು ಕೈದಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಉಳ್ಳಾಲ ಭಾಗದ ಕ್ರಿಮಿನಲ್ ಗಳಾದ ಧನುಷ್ ಭಂಡಾರಿ ಅಲಿಯಾಸ್ ಧನು, ದಿಲೇಶ್ ಬಂಗೇರ, ಲಾಯ್ ವೇಗಸ್, ಸಚಿನ್ ತಲಪಾಡಿ ಎಂಬ ನಾಲ್ವರು ಕೈದಿಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 308(4) ಮತ್ತು 395) ಪ್ರಕಾರ ಜೈಲಿನೊಳಗಡೆ ಹಫ್ತಾ ವಸೂಲಿ ಮಾಡಿದ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಇವರು ಹಲ್ಲೆ ಮಾಡಿದ್ದಲ್ಲದೆ, ವಿಧೇಯ ಕೈದಿಯೊಬ್ಬನಿಗೆ ಒತ್ತಡ ಹೇರಿ ಆತನ ಪತ್ನಿಯ ಮೂಲಕ 20 ಸಾವಿರ ರೂ. ವಸೂಲಿ ಮಾಡಿದ್ದರು. ಕೈದಿ ತನ್ನ ಪತ್ನಿಗೆ ಹೇಳಿ, ಆರೋಪಿತರು ಸೂಚಿಸಿದ್ದ ಗೂಗಲ್ ಪೇ ನಂಬರಿಗೆ 20 ಸಾವಿರ ರೂಪಾಯಿ ಹಾಕಿಸಿದ್ದ.
ಇತ್ತೀಚೆಗೆ ಎಸಿಪಿ ನೇತೃತ್ವದ ಪೊಲೀಸರು ಜೈಲು ತಪಾಸಣೆ ಸಂದರ್ಭದಲ್ಲಿ ಶೋಷಣೆಗೊಳಗಾದ ಕೈದಿ ಸ್ವತಃ ಈ ಬಗ್ಗೆ ದೂರು ಹೇಳಿಕೊಂಡಿದ್ದು, 20 ಸಾವಿರ ರೂ. ಮೊತ್ತವನ್ನು ಪತ್ನಿಯ ಮೂಲಕ ಹಾಕಿಸಿದ್ದಾಗಿಯೂ ತಿಳಿಸಿದ್ದ. ಈ ವಿಚಾರದಲ್ಲಿ ಬರ್ಕೆ ಠಾಣೆಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಇದಲ್ಲದೆ, ಆರೋಪಿಗಳು ಈಗಾಗಲೇ ಒಂದು ಕೇಸಿನಲ್ಲಿ ಜೈಲಿನಲ್ಲಿದ್ದು, ಒಂದಕ್ಕಿಂತ ಹೆಚ್ಚು ಕೇಸಿನಲ್ಲಿ ಭಾಗಿಯಾಗಿ ಕೂಟ ಕಟ್ಟಿಕೊಂಡು ಅಪರಾಧ ಎಸಗುತ್ತಿದ್ದರೆ ಅಂತಹವರ ಮೇಲೆ ಕೋಕಾ ಕಾಯ್ದೆ ಹೇರಬಹುದಾಗಿದೆ. ಸಂಘಟಿತ ಅಪರಾಧ ಚಟುವಟಿಕೆ, ಕಾನೂನು ವಿರೋಧಿ ಕೃತ್ಯ ನಡೆಸುತ್ತಿದ್ದಾರೆಂಬ ನೆಲೆಯಲ್ಲಿ ಕೆ.-ಕೋಕಾ ಕಾಯ್ದೆಯಡಿ ನಾಲ್ವರ ವಿರುದ್ಧವೂ ಕೇಸು ದಾಖಲಿಸಲಾಗಿದೆ.
ಕೋಕಾ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಕನಿಷ್ಠ 5 ವರ್ಷ ಅಥವಾ ಜೀವಾವಧಿ ಶಿಕ್ಷೆಗೆ ಅವಕಾಶ ಇದೆ. ಇವರ ಕೃತ್ಯದಿಂದಾಗಿ ಸಂತ್ರಸ್ತರು ಮೃತಪಟ್ಟರೆ ಆರೋಪಿಗಳಿಗೆ ಜೀವಾವಧಿ ಅಥವಾ ಗಲ್ಲು ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಸಂಘಟಿತ ಅಪರಾಧ ಕೃತ್ಯದಲ್ಲಿ ಯಾವುದೇ ವ್ಯಕ್ತಿ ಭಾಗಿಯಾಗಿದ್ದಾನೆ ಅಂದರೂ, ಆತ ಇನ್ನಾವುದೇ ಕೇಸಿನಲ್ಲಿ ಇಲ್ಲದಿದ್ದರೂ ಅವರಿಗೆ 5 ವರ್ಷ ಶಿಕ್ಷೆ ವಿಧಿಸಲು ಅವಕಾಶ ಇರುತ್ತದೆ. ಈ ಪ್ರಕರಣವನ್ನು ಡಿಎಸ್ಪಿ ದರ್ಜೆಯ ಅಧಿಕಾರಿ ತನಿಖೆ ನಡೆಸಬೇಕೆಂಬ ನಿಯಮವಿದ್ದು ಇದರಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
In a shocking incident reported from a Mangaluru prison, four inmates have been booked under the stringent Karnataka Control of Organised Crimes Act (KCOCA) for allegedly assaulting and extorting money from a fellow inmate. The accused reportedly forced the victim to make a payment of ₹20,000 through Google Pay via his wife.
05-04-26 10:45 pm
HK News Staffer
ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ್ದ ಶರಣ್ಯ ಮೂರು...
05-04-26 07:24 pm
ಟೋಲ್ ಬೂತ್ಗಳಲ್ಲಿ ಇನ್ಮುಂದೆ ಸಂಚಾರ ಸರಾಗ ; ದೇಶಾದ್...
04-04-26 07:33 pm
ಪಶ್ಚಿಮ ಏಷ್ಯಾ ಸಂಘರ್ಷ; ಭಾರತದ ರಾಜತಾಂತ್ರಿಕ ನಡೆಯನ್...
03-04-26 04:14 pm
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
05-04-26 12:37 pm
HK News Staffer
ಇರಾನ್ ಗೆ ಅಮೆರಿಕ ಮತ್ತೆ 48 ಗಂಟೆಗಳ ಗಡುವು ; ಒಂದು...
04-04-26 10:53 pm
ಅಣ್ಣಾಮಲೈ ಹೊರಗಿಟ್ಟು ಬಿಜೆಪಿ ಪಟ್ಟಿ ಬಿಡುಗಡೆ; ತಮಿಳ...
03-04-26 07:52 pm
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
05-04-26 11:03 am
HK News Staffer
ನಾಸಿಕ್ ಭೀಕರ ದುರಂತ; ನಿಯಂತ್ರಣ ತಪ್ಪಿ ಬಾವಿಗೆ ಬಿದ್...
04-04-26 05:42 pm
ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಮಹಿಳೆ...
04-04-26 05:39 pm
ಇನ್ಫೋಸಿಸ್ ಸಿಎಸ್ಆರ್ ಫಂಡ್ ತೆಗೆಸಿಕೊಡುವುದಾಗಿ ವಂಚನ...
04-04-26 04:36 pm
ಮಂಗಳೂರಿನಲ್ಲಿ ಎಪ್ರಿಲ್ 19ರಂದು ಸೀ ಬ್ರೀಜ್ ಮ್ಯಾರಥಾ...
04-04-26 11:32 am