ಬ್ರೇಕಿಂಗ್ ನ್ಯೂಸ್
17-07-25 01:51 pm Mangalore Correspondent ಕರಾವಳಿ
ಮಂಗಳೂರು, ಜುಲೈ 17 : ಸಚಿವ ಪ್ರಿಯಾಂಕ ಖರ್ಗೆ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ್ ಆಪ್ತನಾಗಿರುವ ಲಿಂಗರಾಜುನನ್ನು ಡ್ರಗ್ಸ್ ಸಾಗಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಖರ್ಗೆ ಹುಕುಂ ಇಲ್ಲದೆ ಗುಲ್ಬರ್ಗದಲ್ಲಿ ಏನೊಂದೂ ಅಲ್ಲಾಡದ ಸ್ಥಿತಿಯಿದೆ. ಆದರೆ ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷನೂ ಆಗಿರುವ ಲಿಂಗರಾಜು ಡ್ರಗ್ಸ್ ದಂಧೆಯಲ್ಲಿ ತೊಡಗಿರುವುದು ಗೊತ್ತಿರಲಿಲ್ಲವೇ.. ಮಹಾರಾಷ್ಟ್ರ ಪೊಲೀಸರು ಬಂದು ಅರೆಸ್ಟ್ ಮಾಡ್ತಾರೆ ಅಂದ್ರೆ ಕರ್ನಾಟಕ ಪೊಲೀಸರ ಕೈಕಟ್ಟಿ ಹಾಕಲಾಗಿತ್ತೇ.. ರಾಜ್ಯವನ್ನು ಉಡ್ತಾ ಪಂಜಾಬ್ ಆಗಲು ಬಿಡಲ್ಲ ಎಂದು ಹೇಳುವ ಗೃಹ ಸಚಿವರಿಗೆ ಗೊತ್ತಾಗಿಲ್ಲವೇ.. ಪ್ರಿಯಾಂಕ ಖರ್ಗೆ, ಅಲ್ಲಮಪ್ರಭು ಪಾಟೀಲ್ ಕೃಪೆಯಿಂದಲೇ ಡ್ರಗ್ಸ್ ದಂಧೆ ನಡೀತಿತ್ತಾ ಎಂದು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಯಾವುದೇ ಒಂದು ಪ್ರಕರಣ ಆದಕೂಡಲೇ ಇನ್ನೊಂದು ಪ್ರಕರಣ ಮುಂದಿಟ್ಟು ಮುಚ್ಚಿ ಹಾಕೋದನ್ನು ಕಾಂಗ್ರೆಸ್ ಸರ್ಕಾರ ಮಾಡ್ತಾ ಇದೆ. ಅದೇ ರೀತಿ ಶಾಸಕ ಬೈರತಿ ಬಸವರಾಜು ಮೇಲೆ ಎಫ್ಐಆರ್ ಮಾಡಿ ಡ್ರಗ್ಸ್ ದಂಧೆ ತಿರುಚುವ ಯತ್ನ ಮಾಡುತ್ತಿದೆ. ಯಾಕೆ ಪ್ರಿಯಾಂಕ ಖರ್ಗೆ ಇದರ ಬಗ್ಗೆ ಟ್ವೀಟ್ ಮಾಡ್ತಾ ಇಲ್ಲ. ಡ್ರಗ್ಸ್ ದಂಧೆಯ ಬಗ್ಗೆ ಯಾಕೆ ತುಟಿ ಬಿಚ್ತಾ ಇಲ್ಲ. ಡ್ರಗ್ಸ್ ದಂಧೆ ಇಡೀ ರಾಜ್ಯವನ್ನು ಕಿತ್ತು ತಿನ್ನುತ್ತಿದ್ದು ಅದರಿಂದಲೇ ಕ್ರೈಮ್ ಆಗ್ತಾ ಇದೆ. ನಾವು ಮಂಗಳೂರಿನಲ್ಲಿ ಡ್ರಗ್ಸ್ ಯಾವ ರೀತಿ ಪೆಟ್ಟು ಕೊಟ್ಟಿದೆ ಎನ್ನೋದನ್ನು ನೋಡಿದ್ದೇವೆ. ಯಾವುದೋ ಪೊಲೀಸರನ್ನು ಹಾಕಿದ ಕೂಡಲೇ ಇದನ್ನು ನಿಲ್ಸೋಕೆ ಅಗುತ್ತದೆ ಎನ್ನುವುದು ತಪ್ಪು.

ಸಚಿವ ಪ್ರಿಯಾಂಕ ಖರ್ಗೆ ಈ ಬಗ್ಗೆ ಬಹಿರಂಗವಾಗಿ ತಮ್ಮ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಖರ್ಗೆಯವರ ಇಲಾಖೆಯಲ್ಲಿ ಭ್ರಷ್ಟಾಚಾರ ಎಷ್ಟಾಗುತ್ತಿದೆ ಎಂಬುದನ್ನು ನಾವು ಹೇಳಕ್ಕೆ ಹೋಗಲ್ಲ. ಅದು ಮಾಧ್ಯಮದಲ್ಲೇ ಬರ್ತಾ ಇರೋದು ನೋಡ್ತಿದೇವೆ. ಆದರೆ ಸಚಿವ ಸ್ಥಾನದಲ್ಲಿದ್ದವರು ಕೂಡ ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದರೆ ರಾಜ್ಯದ ಜನತೆಗೆ ಬಗೆದ ದ್ರೋಹವಾಗುತ್ತದೆ. ಖರ್ಗೆಯ ರಿಪಬ್ಲಿಕ್ ಆಫ್ ಗುಲ್ವರ್ಗದಲ್ಲಿ ಡ್ರಗ್ಸ್ ಹಾವಳಿ ಮಿತಿ ಮೀರಿದ್ದನ್ನು ತುಟಿ ಬಿಚ್ಚದೆ ಸಹಿಸಿಕೊಳ್ಳುವುದು ಅಪರಾಧ. ಮಂತ್ರಿಯಾಗಿ ತನ್ನ ಆಪ್ತರು ಅರೆಸ್ಟ್ ಆಗುವಾಗ ಯಾಕೆ ಮಾತನಾಡುತ್ತಿಲ್ಲ. ಡ್ರಗ್ಸ್ ಕಿಂಗ್ ಪಿನ್ ಇವರೇನಾ ಎಂಬ ಸಂಶಯ ಜನರಲ್ಲಿ ಬರ್ತಿದ್ದು ಇದಕ್ಕೆ ಅವರೇ ಸ್ಪಷ್ಟನೆ ನೀಡಬೇಕಾಗಿದೆ.
ಬಂಧಿತ ಲಿಂಗರಾಜು ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ. ಇಲ್ಲಿ ರಾಜಕೀಯ ಒತ್ತಡ ಇಲ್ಲದೆ, ಖರ್ಗೆಯ ಕುಮ್ಮಕ್ಕಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಎರಡು ತಿಂಗಳ ಹಿಂದೆ ಪೊಲೀಸರು ಅಲ್ಲಿ ಡ್ರಗ್ಸ್ ಹಿಡಿದಿದ್ದಾರೆ, ಆದರೆ ಈ ಲಿಂಗರಾಜುವನ್ನು ಬಂಧಿಸದೆ ತಡೆದಿದ್ದು ಯಾರು ಎನ್ನುವುದು ತಿಳಿಯಬೇಕಾಗಿದೆ. ಗೃಹ ಸಚಿವರು ಉಡ್ತಾ ಪಂಜಾಬ್ ಆಗಲು ಬಿಡಲ್ಲ ಎಂದು ಹೇಳ್ತಾರಂದ್ರೆ ಅಷ್ಟರಮಟ್ಟಿಗೆ ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಇದೆಯಾ ಅನ್ನೋದನ್ನು ಅವರೇ ಹೇಳಬೇಕು. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಆಗ್ತಿದೆ ಅಂತ ಗುಪ್ತಚರ ಮಾಹಿತಿ ಇದ್ದೇ ಈ ರೀತಿ ಹೇಳಿರಬೇಕಲ್ವಾ.. ಎಂದು ಭರತ್ ಶೆಟ್ಟಿ ಪ್ರಶ್ನಿಸಿದರು.

ಕಾಂಗ್ರೆಸ್ ಶಾಸಕರೇ ಇದ್ದಾರಲ್ವಾ.. ಯಾಕೆ ಮಾಡ್ತಾ ಇಲ್ಲ..?
ಕೆಂಪು ಕಲ್ಲು, ಮರಳಿನ ವಿಚಾರದಲ್ಲಿ ಶಾಸಕರು ಬೀದಿಯಲ್ಲಿ ಪ್ರತಿಭಟನೆ ಮಾಡೋದು ಸಮಸ್ಯೆ ಸರಿಪಡಿಸುವ ಕೆಲಸವನ್ನು ಮಾಡಬೇಕೆಂದು ಕಾಂಗ್ರೆಸ್ ಮುಖಂಡ ರಮಾನಾಥ ರೈ ಟೀಕಿಸಿದ್ದಕ್ಕೆ ಉತ್ತರಿಸಿದ ಭರತ್ ಶೆಟ್ಟಿ, ಇದೊಂದು ಜೋಕ್ ರೀತಿ ಕಾಣತ್ತೆ. ಶಾಸಕರು ಟೇಬಲ್ ಕಾಯುತ್ತಾ ಕೆಲಸ ಮಾಡಿಸೋದು ಈ ಸರ್ಕಾರದಲ್ಲಿ ಸಾಧ್ಯನಾ.. ಹಿಂದಿನ ಸರ್ಕಾರ ಇದ್ದಾಗಲಾದ್ರೂ ಶಾಸಕರು ಈ ಕೆಲಸ ಮಾಡುತ್ತಿದ್ದರು. ಖಾದರ್, ಅಶೋಕ್ ರೈ, ಐವಾನ್, ಭಂಡಾರಿ ಅವರ ಪಕ್ಷದವರೇ ಇದ್ದಾರಲ್ವಾ.. ಯಾಕೆ ಮಾಡ್ತಾ ಇಲ್ಲ. ಖಾದರ್ ಜೊತೆಗೆ ತಿರುಗಾಡೋರು, ಕಾಂಗ್ರೆಸ್ ನಲ್ಲಿ ಇರೋರೇ ಮೊನ್ನೆ ನಮ್ಮ ಜೊತೆಗೆ ಪ್ರತಿಭಟನೆಗೆ ಬಂದಿದ್ದಾರೆ. ನಮ್ಮ ಸರ್ಕಾರ ಇದ್ದಾಗ 272 ಮರಳು ಬ್ಲಾಕ್ ಗುತ್ತಿಗೆಯನ್ನು ಒಂದು ವಾರದಲ್ಲಿ ಕೊಟ್ಟಿದ್ದೆವು. ಈಗೇನು ಮಾಡುತ್ತಿದ್ದಾರೆ. ಲೀಸ್ ರಿನೀವಲ್ ಅನ್ನೋದು ಇವರಿಗೆ ಹೊಸ ಪದ ಅನ್ನೋ ರೀತಿಯಾಗಿದೆ ಎಂದು ತಿರುಗೇಟು ನೀಡಿದರು. ಸುದ್ದಿಗೋಷ್ಟಿಯಲ್ಲಿ ಪ್ರೇಮಾನಂದ ಶೆಟ್ಟಿ, ವಿಕಾಸ್ ಪುತ್ತೂರು ಮತ್ತಿತರರು ಇದ್ದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮುಖಂಡ ಲಿಂಗರಾಜು ಬಂಧನ
ಮಾದಕದ್ರವ್ಯ ಸಾಗಾಣೆ ಆರೋಪದಲ್ಲಿ ಕಾಂಗ್ರೆಸ್ ಮುಖಂಡ, ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಇವರು ಕಲಬುರಗಿ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಮತ್ತು ಸಚಿವ ಪ್ರಿಯಾಂಕ ಖರ್ಗೆ ಆಪ್ತರಾಗಿದ್ದಾರೆ.
ಮಹಾರಾಷ್ಟ್ರದ ಥಾಣೆ ನಗರದಲ್ಲಿ ಮಾದಕದ್ರವ್ಯ ಮಾರಾಟ ಮಾಡುವ ವೇಳೆ ಅಲ್ಲಿನ ಕಲ್ಯಾಣ ಠಾಣೆ ಪೊಲೀಸರು ಲಿಂಗರಾಜ್ ಕಣ್ಣಿಯನ್ನು ಬಂಧಿಸಿದ್ದಾರೆ. ನಿಷೇಧಿತ 120ಕ್ಕೂ ಹೆಚ್ಚು ಎನ್ ರೆಕ್ಸ್ ಬಾಟಲ್‌ಗಳನ್ನು ಸಾಗಿಸುತ್ತಿದ್ದ ವೇಳೆ ಬಜಾರ್ ಪೇಠ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣದಲ್ಲಿ ತೌಸಿಫ್ ಆಸಿಫ್ ತುರವೇ ಪ್ರಮುಖ ಆರೋಪಿಯಾಗಿದ್ದು, ಲಿಂಗರಾಜ್ ಕಣ್ಣಿ (A2) ಮತ್ತು ಕಲಬುರಗಿಯ ಸಯ್ಯದ್ ಇರ್ಫಾನ್ (A3) ಸಹ ಬಂಧನಕ್ಕೊಳಗಾಗಿದ್ದಾರೆ. ಮುಂಬೈನ ಬಜಾರ್ ಪೇಠ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
In a sensational development, Maharashtra police have arrested Lingaraj Kanni, a close aide of Karnataka Minister Priyank Kharge and Congress MLA Allamprabhu Patil, in connection with a drug trafficking case. The arrest has triggered a political storm in Karnataka, with BJP MLA Dr. Bharath Shetty launching a scathing attack on the Congress government, questioning whether political protection enabled the illegal drug trade in the state.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm