Mrpl leakgae, Death, Fight: ಅನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರು ಸಾವು ಪ್ರಕರಣ ; ಎಂಆರ್ ಪಿಎಲ್ ಅಧಿಕಾರಿಗಳ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್, ಉತ್ತರ ಪ್ರದೇಶಕ್ಕೆ ಶವ ಒಯ್ದ ಸಹೋದ್ಯೋಗಿಗಳಿಗೆ ದಿಗ್ಬಂಧನ ! 

14-07-25 07:56 pm       Mangalore Correspondent   ಕರಾವಳಿ

ಎಂಆರ್ ಪಿಎಲ್ ಸ್ಥಾವರದಲ್ಲಿ ಗ್ಯಾಸ್ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಸಂಬಂಧಿಸಿ ಮೃತ ದೀಪಚಂದ್ರ ಭಾರ್ತಿ ಅವರ ಪತ್ನಿ ನೀಡಿದ ದೂರಿನಂತೆ ಎಂಆರ್ ಪಿಎಲ್ ಸಂಸ್ಥೆಯ ಆರು ಅಧಿಕಾರಿಗಳ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 

ಮಂಗಳೂರು, ಜುಲೈ 14 : ಎಂಆರ್ ಪಿಎಲ್ ಸ್ಥಾವರದಲ್ಲಿ ಗ್ಯಾಸ್ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಸಂಬಂಧಿಸಿ ಮೃತ ದೀಪಚಂದ್ರ ಭಾರ್ತಿ ಅವರ ಪತ್ನಿ ನೀಡಿದ ದೂರಿನಂತೆ ಎಂಆರ್ ಪಿಎಲ್ ಸಂಸ್ಥೆಯ ಆರು ಅಧಿಕಾರಿಗಳ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. 

ಅನಿಲ ಸೋರಿಕೆ ಕುರಿತಾಗಿ ಪರಿಶೀಲಿಸಲು ತೆರಳಿದ್ದಾಗ ಉತ್ತರ ಪ್ರದೇಶದ ಪ್ರಯಾಗರಾಜ್ ಮೂಲದ ದೀಪಚಂದ್ರ ಭಾರ್ತಿ ಮತ್ತು ಕೇರಳ ಮೂಲದ ಬಿಜಿಲ್ ಪ್ರಸಾದ್ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಇನ್ನಿಬ್ಬರು ಕಾರ್ಮಿಕರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. 

ಮೃತ ದೀಪಚಂದ್ರ ಅವರ ಶವವನ್ನು ಪ್ರಯಾಗರಾಜ್ ಜಿಲ್ಲೆಯ ಅವರ ಊರಿಗೆ ಒಯ್ದ ಸಂದರ್ಭದಲ್ಲಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಎಂಆರ್ ಪಿಎಲ್ ಕಡೆಯಿಂದ ಜೊತೆಗೆ ತೆರಳಿದ್ದ ಸಹೋದ್ಯೋಗಿಗಳಿಗೆ ದಿಗ್ಬಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಆರ್ ಪಿಎಲ್ ಅಧಿಕಾರಿಗಳು ಯಾಕೆ ಬರಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಬಡ ಕಾರ್ಮಿಕರ ಸಾವು ಆಗಿದೆ. ಪರಿಹಾರದ ಬಗ್ಗೆ ಯಾಕೆ ಇನ್ನೂ ಮಾಹಿತಿ ನೀಡಿಲ್ಲ. ಸಾವಿಗೆ ಹೊಣೆ ಯಾರು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶವ ಕೊಂಡೊಯ್ದ ತಂಡದಲ್ಲಿದ್ದ ಪ್ರತಿನಿಧಿಯೊಬ್ಬರು ತಮ್ಮ ಸ್ಥಿತಿ ತೀರಾ ಸಂಕಷ್ಟದಲ್ಲಿದೆ. ನಮ್ಮನ್ನು ಇಲ್ಲಿನ ಜನರು ಕೂಡಿ ಹಾಕಿದ್ದಾರೆ. ಇವರನ್ನು ಹೇಗೆ ಮನವೊಲಿಸುವುದು, ಇಲ್ಲಿಂದ ಮರಳುವುದು ಹೇಗೆಂದು ತಿಳಿಯುತ್ತಿಲ್ಲ. ಕೂಡಲೇ ಎಂಆರ್ ಪಿಎಲ್ ಮ್ಯಾನೇಜ್ಮೆಂಟ್ ಪರಿಹಾರದ ಬಗ್ಗೆ ಘೋಷಣೆ ಮಾಡಬೇಕು. ನಮ್ಮ ರಕ್ಷಣೆಗೆ ಮಧ್ಯ ಪ್ರವೇಶ ಮಾಡಬೇಕು ಎಂದು ದುಃಖ ತೋಡಿಕೊಂಡು ವಿಡಿಯೋ ಮಾಡಿದ್ದು ಸಂಸ್ಥೆಯ ನೌಕರರಿದ್ದ ವಾಟ್ಸಪ್ ಗ್ರೂಪಿಗೆ ಹಾಕಿದ್ದಾರೆ. ನೂರಾರು ಜನರು ಇಲ್ಲಿಂದ ತೆರಳಿರುವ ಸಹೋದ್ಯೋಗಿಗಳಿಗೆ ಮುತ್ತಿಗೆ ಹಾಕಿದ್ದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. 

ಮೃತರ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸೋಮವಾರ ಎಂಆರ್ ಪಿಎಲ್ ಗೇಟ್ ಮುಂಭಾಗದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

Tensions have escalated following the tragic death of two contract workers due to a gas leak at the Mangalore Refinery and Petrochemicals Limited (MRPL). An FIR has been filed at the Surathkal police station against six MRPL officials, based on a complaint by the wife of deceased worker Deepchandra Bharti.