ಬ್ರೇಕಿಂಗ್ ನ್ಯೂಸ್
10-08-20 12:31 pm Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 10: ಕೊರೊನಾ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸೋಂಕು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದ್ವಿತೀಯ ಸ್ಥಾನಿಯಾಗಿದೆ. ಪ್ರತಿ ಬಾರಿ ಮೊದಲ ಸಾಲಿನಲ್ಲಿರುತ್ತಿದ್ದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ 7 ಮತ್ತು 12ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ವಿಶೇಷ ಅಂದರೆ ಕೊರೊನಾ ಸೋಂಕಿನ ಆತಂಕದ ಮಧ್ಯೆಯೂ ರಾಜ್ಯದಲ್ಲಿ ಆರು ಮಂದಿ ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಶಾಲೆಯ ಅನುಷ್ ಕೂಡ ಸೇರಿದ್ದಾನೆ. ಇತರೇ ಆರು ವಿದ್ಯಾರ್ಥಿಗಳ ಜೊತೆ ಅನುಷ್ ಕೂಡ 625 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಸಾಧನೆ ಮಾಡಿದ್ದಾನೆ. ಅನುಷ್, ಬಳ್ಪ ಗ್ರಾಮದ ಲೋಕೇಶ್ ಮತ್ತು ಉಷಾ ದಂಪತಿಯ ಪುತ್ರನಾಗಿದ್ದು ರಾಜ್ಯಕ್ಕೆ ಟಾಪರ್ ಆಗಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ.
ಇನ್ನು 624 ಅಂಕ ಗಳಿಸಿದವರಲ್ಲಿ 11 ಮಂದಿ ಇದ್ದಾರೆ. ವಿಟ್ಲದ ಅಳಿಕೆಯ ಸತ್ಯಸಾಯಿ ಲೋಕಸೇವಾ ಶಾಲೆಯ ಸುಮುಖ, ಮಂಗಳೂರಿನ ಕೆನರಾ ಹೈಸ್ಕೂಲಿನ ನಿಧಿ ರಾವ್, ಉಡುಪಿ ಜಿಲ್ಲೆಯ ಬೈಂದೂರಿನ ಸಾಂದೀಪನಿ ಶಾಲೆಯ ಸುರಭಿ ಎಸ್. ಶೆಟ್ಟಿ 624 ಅಂಕದ ಸಾಧನೆ ಮಾಡಿದವರಲ್ಲಿದ್ದಾರೆ.
623 ಮಂದಿ ಅಂಕ ಗಳಿಸಿದವರಲ್ಲಿ ಮೂವರಿದ್ದಾರೆ. ಇನ್ನು 622 ಅಂಕ ಗಳಿಸಿದವರಲ್ಲೂ ಮೂರು ಮಂದಿ ಇದ್ದಾರೆ. 622 ಅಂಕದ ಗಳಿಕೆಯಲ್ಲಿ ಮೂಡುಬಿದ್ರೆಯ ಆಳ್ವಾಸ್ ಪ್ರೌಢಶಾಲೆಯ ಇಬ್ಬರಿದ್ದು ಪ್ರಕೃತಿ ಪ್ರಿಯ ಮತ್ತು ಸಮ್ಮದ್ ಮಹಾವೀರ್ ಈ ಸಾಧನೆ ಮಾಡಿದ್ದಾರೆ.
03-04-26 04:14 pm
HK News Staffer
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
ತಮಿಳುನಾಡು ಚುನಾವಣೆಗೆ 44 ಮೀಸಲು ಕ್ಷೇತ್ರದಿಂದ ಕ್ರಿ...
02-04-26 08:03 pm
03-04-26 07:52 pm
HK News Staffer
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
01-04-26 02:54 pm
HK News Staffer
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm
ಜೈಲಿನಲ್ಲಿದ್ದ ಪತಿಯ ನೋಡಲು ಖಾಸಗಿ ಅಂಗದಲ್ಲಿ ಡ್ರಗ್ಸ...
31-03-26 11:11 am
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm