Dharmasthala News, Dead bodies, Court: ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿದ್ದೇನೆಂದ ವ್ಯಕ್ತಿ ಬೆಳ್ತಂಗಡಿ ಕೋರ್ಟಿಗೆ ಹಾಜರು ; ಮುಖ ಮುಚ್ಚಿಕೊಂಡು ಬಂದು ನ್ಯಾಯಾಧೀಶರಿಗೆ ಹೇಳಿಕೆ 

11-07-25 08:55 pm       Mangalore Correspondent   ಕರಾವಳಿ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ವ್ಯಕ್ತಿ ಬೆಳ್ತಂಗಡಿ ಕೋರ್ಟಿಗೆ ಹಾಜರಾಗಿದ್ದು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. 

ಮಂಗಳೂರು, ಜುಲೈ.11: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ವ್ಯಕ್ತಿ ಬೆಳ್ತಂಗಡಿ ಕೋರ್ಟಿಗೆ ಹಾಜರಾಗಿದ್ದು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. 

ಇಬ್ಬರು ವಕೀಲರ ಜೊತೆಗೆ ಶುಕ್ರವಾರ ಸಂಜೆ 4 ಗಂಟೆಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ್ದು ಮುಖಕ್ಕೆ ಪೂರ್ತಿಯಾಗಿ ಕರಿಕೋಟು ಮುಚ್ಚಿಕೊಂಡು ಬಂದು ನ್ಯಾಯಾಧೀಶರ ಎದುರು ಹೇಳಿಕೆ ನೀಡಿದ್ದಾರೆ. ಇನ್ನೋವಾ ಕಾರಿನಲ್ಲಿ ಬಂದ ಆ ವ್ಯಕ್ತಿಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.‌

ಸೂಟ್ ಕೇಸ್ ರೀತಿಯ ಬ್ಯಾಗ್ ಜೊತೆಗೆ ನ್ಯಾಯಾಲಯಕ್ಕೆ ಬಂದ ಆ ವ್ಯಕ್ತಿ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಸಂದೇಶ್ ಕೆ. ಅವರ ಮುಂದೆ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಜುಲೈ 4ರಂದು ಬೆಂಗಳೂರಿನ ವಕೀಲರ ಜೊತೆಗೆ ಧರ್ಮಸ್ಥಳ ಠಾಣೆಗೆ ಹಾಜರಾಗಿದ್ದ ಆ ವ್ಯಕ್ತಿ ಧರ್ಮಸ್ಥಳ ಗ್ರಾಮದಲ್ಲಿ ನಡೆದ ನೂರಾರು ಕೊಲೆಗಳು ಮತ್ತು ಆ ಹೆಣಗಳನ್ನು ಹೂತು ಹಾಕಿದ್ದಕ್ಕೆ ಸಾಕ್ಷಿ ಹೇಳುತ್ತೇನೆಂದು ದೂರಿನಲ್ಲಿ ಹೇಳಿದ್ದರು. 

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಕೊಲೆಗಳಿಗೆ ಈ ವ್ಯಕ್ತಿಯ ದೂರು ಸಾಕ್ಷಿ ಎನ್ನಲಾಗುತ್ತಿದ್ದು ರಾಷ್ಟ್ರೀಯ ವಾಹಿನಿಯಲ್ಲಿ ಸುದ್ದಿಯಾದ ನಂತರ ಭಾರೀ ಸಂಚಲನ ಸೃಷ್ಟಿಯಾಗಿದೆ. ಜೊತೆಗೆ ಬಂದಿದ್ದ ವಕೀಲರು ಆ ವ್ಯಕ್ತಿಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ದ.ಕ. ಎಸ್ಪಿಗೆ ಕೇಳಿಕೊಂಡಿದ್ದು ಅದಕ್ಕೆ ಒಪ್ಪಿಗೆಯನ್ನೂ ನೀಡಿದ್ದಾರೆ.

A man who recently made shocking claims of having buried hundreds of bodies in Dharmasthala appeared before the Beltangady court on Friday. He gave a statement to the judge while keeping his face completely covered. Arriving at the court around 4 PM in an Innova vehicle, the man was accompanied by two lawyers and carried a suitcase-style bag. Tight police security was provided during his court appearance.