ಬ್ರೇಕಿಂಗ್ ನ್ಯೂಸ್
10-07-25 11:07 pm HK News Desk ದೇಶ - ವಿದೇಶ
ಲಕ್ನೋ, ಜುಲೈ 10 : ಭಾರೀ ಮತಾಂತರ ಜಾಲದಲ್ಲಿ ಸಿಕ್ಕಿಬಿದ್ದಿರುವ ಜಲಾಲುದ್ದೀನ್ ಅಲಿಯಾಸ್ ಚಾಂಗೂರ್ ಬಾಬಾ ಉತ್ತರ ಪ್ರದೇಶದಲ್ಲಿ 1500ಕ್ಕೂ ಹೆಚ್ಚು ಹಿಂದುಗಳು ಮತ್ತು ಮುಸ್ಲಿಮೇತರ ಮಹಿಳೆಯರನ್ನು ಇಸ್ಲಾಮಿಗೆ ಮತಾಂತರ ಮಾಡಿದ್ದಾನೆ ಎಂಬ ಮಾಹಿತಿಯನ್ನು ಪೊಲೀಸರನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಬಡ ಮಹಿಳೆಯರನ್ನು ಗುರಿಯಾಗಿಸಿ ಮತಾಂತರ ಜಾಲ ನಡೆಸುತ್ತಿದ್ದ ಜಲಾಲುದ್ದೀನ್, ಅವರಿಗೆ ಇಸ್ಲಾಮಿಗೆ ಮತಾಂತರ ಆದರೆ ದೊಡ್ಡ ಮೊತ್ತದ ಹಣ ನೀಡುವುದಾಗಿ ಆಮಿಷ ಒಡ್ಡುತ್ತಿದ್ದ. ಅಲ್ಲದೆ, ಪತಿಯನ್ನು ಕಳಕೊಂಡ ಮಹಿಳೆಯರಿಗೆ ಮದುವೆ ಮಾಡಿಸುವುದು ಮತ್ತು ಕುಟುಂಬ ನಿರ್ವಹಿಸಲು ಹಣದ ವ್ಯವಸ್ಥೆ ಮಾಡುವ ಬಗ್ಗೆಯೂ ಭರವಸೆ ನೀಡಿ ಮತಾಂತರ ಮಾಡುತ್ತಿದ್ದ ಎನ್ನೋದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇದಲ್ಲದೆ, ಬಡವರನ್ನು ಬಲವಂತದಿಂದಲೂ ಮತಾಂತರಕ್ಕೆ ಒಳಪಡಿಸಿದ್ದಾನೆ ಎಂಬುದನ್ನೂ ಪತ್ತೆ ಮಾಡಲಾಗಿದೆ.
ಚಾಂಗೂರ್ ಬಾಬಾನ ಬಗ್ಗೆ ಪ್ರಾಥಮಿಕ ಮಾಹಿತಿ ಆಧರಿಸಿ ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್ ತನಿಖೆಗಿಳಿದಾಗ ಭಾರೀ ದೊಡ್ಡ ಮಟ್ಟದಲ್ಲಿ ಮತಾಂತರ ಜಾಲ ಸಕ್ರಿಯವಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಸ್ವಯಂಘೋಷಿತ ಬಾಬಾನೆಂದು ಕರೆಸಿಕೊಳ್ಳುತ್ತಿದ್ದ ಜಲಾಲುದ್ದೀನ್ ವಿರುದ್ಧ ಉತ್ತರ ಪ್ರದೇಶ ಎಟಿಎಸ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಹಾರಾಷ್ಟ್ರ, ಬಿಹಾರದಲ್ಲಿಯೂ ಈತನ ಜಾಲ ಸಕ್ರಿಯವಾಗಿದ್ದು, ಇದಕ್ಕಾಗಿ ಗಲ್ಫ್ ರಾಷ್ಟ್ರಗಳಿಂದ ಫಂಡ್ ಬರುತ್ತಿದ್ದುದನ್ನೂ ಪೊಲೀಸರು ಕಂಡುಕೊಂಡಿದ್ದು ಕೋಟ್ಯಂತರ ರೂಪಾಯಿ ಹಣ ಬಂದಿರುವ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ. ಬಲರಾಂಪುರದ ಚಾಂದ್ ಔಲಿಯಾ ದರ್ಗಾದಲ್ಲಿ ನಡೆಯುತ್ತಿದ್ದ ಉರೂಸ್ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರನ್ನು ಅತಿಥಿಯಾಗಿ ಕರೆಸಿಕೊಂಡು, ಅದೇ ವೇಳೆ ಬಡವರನ್ನು ಮತಾಂತರ ಕಾರ್ಯಕ್ಕೂ ಬಾಬಾ ಒಳಪಡಿಸುತ್ತಿದ್ದ. ಇದಲ್ಲದೆ, ಆಸುಪಾಸಿನ ಜಿಲ್ಲೆಗಳಲ್ಲಿ ಇಸ್ಲಾಮಿಕ್ ದಾವಾ ಕೇಂದ್ರಗಳು ಮತ್ತು ಮತ್ತಷ್ಟು ಮದ್ರಸಾಗಳನ್ನು ಸ್ಥಾಪಿಸಲು ಯೋಜನೆ ಹಾಕಿದ್ದ.
ಸ್ಥಳೀಯ ಆಡಳಿತ, ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ತನ್ನ ವಿರೋಧಿಗಳ ವಿರುದ್ಧ ಕೇಸ್ ಆಗುವಂತೆ ನೋಡಿಕೊಳ್ಳುತ್ತಿದ್ದ. ಸ್ಥಳೀಯ ಪೊಲೀಸರು ಮತ್ತು ಗುಪ್ತಚರ ಪಡೆಯ ಸದಸ್ಯರನ್ನೂ ತನ್ನ ಮುಷ್ಟಿಯಲ್ಲಿರಿಸಿ ತನಗೆ ಆಗದವರ ಮೇಲೆ ಸುಳ್ಳು ಕೇಸು ಮಾಡಿಸುತ್ತಿದ್ದ ಎಂಬುದನ್ನು ಅಧಿಕಾರಿಗಳು ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಚಾಂಗೂರ್ ಬಾಬಾ ಮತ್ತು ಆತನ ಸಹಚರ ನಾಸ್ರೀನ್ ರನ್ನು ಏಳು ದಿನಕ್ಕೆ ಎಟಿಎಸ್ ಕಸ್ಟಡಿ ಪಡೆದಿದ್ದು, ಇಡಿ ಮತ್ತು ಎನ್ಐಎ ಕೂಡ ತನಿಖೆ ಆರಂಭಿಸಿದೆ. ಚಾಂಗೂರ್ ಬಾಬಾನ ಪುತ್ರರಾದ ನವೀನ್ ಅಲಿಯಾಸ್ ಜಮಾಲುದ್ದೀನ್ ಮತ್ತು ಮೆಹಬೂಬ್ ಎಂಬವರನ್ನು ವಿದೇಶಿ ಹಣ ರವಾನೆಯಾಗುತ್ತಿದ್ದ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ ಆರೋಪದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನವೀನ್ ಅಲಿಯಾಸ್ ಜಮಾಲುದ್ದೀನ್ ವಿದೇಶದಿಂದ ಸಿಕ್ಕಿದ ಹಣದಲ್ಲಿ ಬಲರಾಂಪುರದಲ್ಲಿ ಜಾಗ ಖರೀದಿಸಿದ್ದು, ಸ್ವಿಸ್ ಬ್ಯಾಂಕಿನಲ್ಲೂ ಖಾತೆಗಳನ್ನು ಹೊಂದಿದ್ದ ಎಂಬುದನ್ನು ಪತ್ತೆ ಮಾಡಲಾಗಿದೆ.
A massive religious conversion racket has been uncovered in Uttar Pradesh, with Jalaluddin alias Changur Baba at the center of it. According to an India Today report citing police sources, Changur Baba is accused of converting over 1,500 Hindu and non-Muslim women to Islam, using a combination of financial lures, manipulation, and coercion.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
31-08-25 01:32 pm
HK News Desk
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
31-08-25 01:56 pm
Mangaluru Correspondent
Udupi, Diksha Sets New World Record, Bharatan...
31-08-25 12:49 pm
ಬೆಂಗಳೂರಿನಲ್ಲಿ ಉಳಿದಿದ್ದು ನಿಜ, ದೆಹಲಿಗೆ ಹೋಗಿದ್ದೂ...
30-08-25 11:08 pm
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm