ಬ್ರೇಕಿಂಗ್ ನ್ಯೂಸ್
07-07-25 08:45 pm HK News Desk ದೇಶ - ವಿದೇಶ
ಪಾಟ್ನಾ, ಜುಲೈ 7 : ಫೇಸ್ಬುಕ್ ನಲ್ಲಿ ಪರಿಚಯವಾದ ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಹಿಂದು ಯುವತಿಯನ್ನು ಗೋಮಾಂಸ ತಿನ್ನಿಸಿ ಇಸ್ಲಾಮಿಗೆ ಮತಾಂತರವಾಗುವಂತೆ ಒತ್ತಡ ಹೇರಿದ ಘಟನೆ ಬಿಹಾರದಲ್ಲಿ ನಡೆದಿದ್ದು, ಯುವತಿ ಪೊಲೀಸ್ ದೂರು ನೀಡಿ ತನ್ನನ್ನು ತನ್ನದೇ ಊರಿಗೆ ತಲುಪಿಸುವಂತೆ ಗೋಗರೆದಿದ್ದಾಳೆ.
ಯುವತಿ ಮಧ್ಯಪ್ರದೇಶದ ಇಂದೋರ್ ಮೂಲದ ಆರತಿ ಎಂಬಾಕೆಯಾಗಿದ್ದು, ಬಿಹಾರದ ಬೆಗುಸರಾಯ್ ಜಿಲ್ಲೆಯ ನಿವಾಸಿ ಮೊಹಮ್ಮದ್ ಶಹಬಾಜ್ ಎಂಬಾತನನ್ನು ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಇದೀಗ ತನ್ನನ್ನು ಗೋಮಾಂಸ ತಿನ್ನುವಂತೆ ಹಾಗೂ ಇಸ್ಲಾಮಿಗೆ ಮತಾಂತರ ಆಗಲು ಒತ್ತಡ ಹೇರುತ್ತಿದ್ದಾನೆ. ನನ್ನ ಮೊಬೈಲಿನಲ್ಲಿದ್ದ ಹಿಂದು ದೇವರ ಫೋಟೋಗಳನ್ನು ಡಿಲೀಟ್ ಮಾಡಿದ್ದಾನೆ. ನಿರಾಕರಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
ಫೇಸ್ಬುಕ್ ನಲ್ಲಿ ಪರಿಚಯವಾದ ಸಂದರ್ಭದಲ್ಲಿ ತನ್ನನ್ನು ಚಿನ್ನ ಮತ್ತು ಬೆಳ್ಳಿಯ ವ್ಯಾಪಾರಿಯೆಂದು ಶಹಬಾಜ್ ಪರಿಚಯಿಸಿಕೊಂಡಿದ್ದ. ಆದರೆ ಇಲ್ಲಿ ಬಂದು ನೋಡಿದಾಗ ಆತ ಅಂಗಡಿ ಒಂದರಲ್ಲಿ ಮಾಲೆ ನೇಯುವ ಕೆಲಸ ಮಾಡುತ್ತಿದ್ದ. ಆದರೂ ಜೊತೆಗೆ ವಾಸ ಮಾಡಿದ್ದೆ. ಈಗ ಈ ರೀತಿ ಮಾಡುತ್ತಿರುವುದರಿಂದ ನನ್ನನ್ನು ಬದುಕಲು ಬಿಡುತ್ತಾನೆಂಬ ನಂಬಿಕೆ ಇಲ್ಲ ಎಂದು ಹೇಳಿರುವ ಯುವತಿ, ನಾನು ಆತನ ವಿರುದ್ಧ ದೂರು ಕೊಟ್ಟು ಎಫ್ಐಆರ್ ದಾಖಲಿಸಲು ಹೇಳುವುದಿಲ್ಲ. ನನ್ನನ್ನು ಮರಳಿ ಇಂದೋರ್ ತಲುಪಿಸಿ ಎಂದು ಪೊಲೀಸರಲ್ಲಿ ಕೇಳಿಕೊಂಡಿದ್ದಾಳೆ.
ಮದುವೆಯಾಗಿ ಬಂದ ನಂತರ ಹೆತ್ತವರ ಜೊತೆಗೆ ಸಂಪರ್ಕ ಇಟ್ಟುಕೊಂಡಿಲ್ಲ. ಅವರು ನಾನು ಸತ್ತಿರಬಹುದು ಎಂದು ಭಾವಿಸಿರಬಹುದು. ಆದರೆ ಮರಳಿ ನನ್ನ ಊರಿಗೆ ಹೋಗಲೇಬೇಕೆಂದು ಈಗ ಬಯಕೆಯಾಗಿದೆ ಎಂದು ಆಕೆ ತಿಳಿಸಿದ್ದಾಳೆ. ಆದರೆ ಶಹಬಾಜ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದು, ಆಕೆ ಮಕ್ಕಳಾಗದಂತೆ ಆಪರೇಶನ್ ಮಾಡಿಕೊಂಡಿದ್ದು, ಮುಂದೆಯೂ ಮಕ್ಕಳು ಆಗಲ್ಲ. ಬೇರೆ ಪುರುಷರ ಜೊತೆಗೂ ಸಂಬಂಧ ಹೊಂದಿದ್ದು, ನನ್ನ ಜೊತೆಗಿದ್ದ ಐದು ವರ್ಷದಲ್ಲಿ ಮೂರು ಬಾರಿ ಮನೆಯಿಂದ ಓಡಿ ಹೋಗಿದ್ದಾಳೆ ಎಂದು ಹೇಳಿದ್ದಾನೆ. ಎಸ್ಪಿ ಸುಬೋಧ್ ಕುಮಾರ್, ಆಕೆ ದೂರು ಕೊಡಲು ಮುಂದೆ ಬರುತ್ತಿಲ್ಲ. ತನ್ನನ್ನು ಮರಳಿ ಇಂದೋರ್ ತಲುಪಿಸುವಂತೆ ದೂರಿನಲ್ಲಿ ಕೇಳಿಕೊಂಡಿದ್ದಾಳೆ. ಸದ್ಯಕ್ಕೆ ನಿಗಾ ಕೇಂದ್ರದಲ್ಲಿ ಇರಿಸಿದ್ದು, ಇಂದೋರ್ ತಲುಪಿಸಲು ಏರ್ಪಾಡು ಮಾಡುತ್ತೇವೆ ಎಂದಿದ್ದಾರೆ.
A woman from Indore alleged that her husband from Begusarai, Bihar forced her to eat beef and change her religion after marriage. The couple met on Facebook and married five years ago.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am