ಬ್ರೇಕಿಂಗ್ ನ್ಯೂಸ್
17-06-25 12:43 pm Mangalore Correspondent ಕರಾವಳಿ
ಮಂಗಳೂರು, ಜೂನ್ 17 : ಅತಿ ವೇಗದಿಂದ ಕಾರು ಚಲಾಯಿಸಿ ಮಳೆಯ ನಡುವೆ ನಿಯಂತ್ರಣ ತಪ್ಪಿದ್ದ ಸ್ಕಿಡ್ ಆಗಿದ್ದರಿಂದ ಕಾರು ಡಿವೈಡರ್ ಬಡಿದು 2-3 ಪಲ್ಟಿಯಾದ ಘಟನೆ ನಗರದ ನಂತೂರಿನ ತಾರೆತೋಟ ಬಳಿಯಲ್ಲಿ ನಿನ್ನೆ ರಾತ್ರಿ ನಡೆದಿದ್ದು, ಕಾರು ಚಲಾಯಿಸುತ್ತಿದ್ದ ಖಾಸಗಿ ಆಸ್ಪತ್ರೆಯ ಫಿಸಿಯೋಥೆರಪಿ ವೈದ್ಯರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೂಲತಃ ಕೇರಳದ ಆಲಪ್ಪುಝ ನಿವಾಸಿಯಾಗಿದ್ದು, ದೇರಳಕಟ್ಟೆ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮುಗಿಸಿ ಅಲ್ಲಿಯೇ ಡ್ಯೂಟಿಗೆ ಸೇರಿದ್ದ ಡಾ.ಮೊಹಮ್ಮದ್ ಅಮಲ್ (29) ಮೃತರು. ನಿನ್ನೆ ರಾತ್ರಿ 11.45ರ ಸುಮಾರಿಗೆ ಇವರು ತನ್ನ ಗೆಳತಿ, ಕಣಚೂರು ಮೆಡಿಕಲ್ ಕಾಲೇಜಿನ ಕೇರಳ ಮೂಲದ ವಿದ್ಯಾರ್ಥಿನಿ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ನಂತೂರಿನಿಂದ ಪಂಪ್ವೆಲ್ ಕಡೆಗೆ ತನ್ನ ಸಿಯಾಝ್ ಕಾರಿನಲ್ಲಿ ತೆರಳುತ್ತಿದ್ದಾಗ ಹೆದ್ದಾರಿ ಪ್ರಾಧಿಕಾರದ ಕಚೇರಿ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದು, ಅತಿ ವೇಗದಿಂದಾಗಿ ಡಿವೈಡರ್ ತಾಗಿ ನಡುವೆ ಹಾಕಿರುವ ಗ್ರಿಲ್ಸ್ ಮೇಲೆ ಹೋಗಿದೆ. ಆನಂತರ ಗ್ರಿಲ್ಸ್ ತಾಗಿಕೊಂಡೇ 2-3 ಪಲ್ಟಿಯಾಗಿ ರಸ್ತೆಯ ಮೇಲೆ ಬಿದ್ದಿದೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಸೀರಿಯಸ್ ಆಗಿದ್ದ ಅವರನ್ನು ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.




ಹಿಂದೆ ಮುಂದಿನಿಂದ ಅತಿ ವೇಗದಲ್ಲಿ ವಾಹನಗಳು ತೆರಳುತ್ತಿದ್ದಾಗಲೇ ಹಠಾತ್ ಘಟನೆ ಸಂಭವಿಸಿದೆ. ಇದೇ ವೇಳೆ, ಹಿಂಬದಿಯಿಂದ ಬರುತ್ತಿದ್ದ ಲೋಡ್ ತುಂಬಿದ್ದ ಲಾರಿಯೊಂದು ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದಿದೆ. ಎದುರಿನಲ್ಲಿದ್ದ ವಾಹನಗಳು ಹಠಾತ್ ಬ್ರೇಕ್ ಹಾಕಿದ್ದರಿಂದ ಗಾಬರಿಗೊಂಡ ಲಾರಿ ಚಾಲಕನೂ ಬ್ರೇಕ್ ತುಳಿದಿದ್ದರಿಂದ ನಿಯಂತ್ರಣ ತಪ್ಪಿದ ಲಾರಿ ರಸ್ತೆಯಲ್ಲೇ ಅಡ್ಡ ಬಿದ್ದಿದೆ. ಘಟನೆಯಿಂದಾಗಿ ರಾತ್ರಿ ವೇಳೆ ನಂತೂರು- ಪಂಪ್ವೆಲ್ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ಟ್ರಾಫಿಕ್ ಜಾಮ್ ಆಗಿತ್ತು. ವೈದ್ಯನ ಜೊತೆಗಿದ್ದ ವಿದ್ಯಾರ್ಥಿನಿ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a tragic road accident late last night, a 29-year-old physiotherapy doctor from Privtate Medical College lost his life after his car skidded and overturned multiple times on the Nanthoor–Pumpwell stretch of the highway in Mangaluru. The victim, identified as Dr. Mohammad Amal, originally from Alappuzha, Kerala, had completed his physiotherapy course at a Medical College Hospital in Deralakatte.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm