ಬ್ರೇಕಿಂಗ್ ನ್ಯೂಸ್
15-06-25 12:12 pm Mangalore Correspondent ಕರಾವಳಿ
ಮಂಗಳೂರು, ಜೂನ್ 15 : ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಇಡೀ ರಾಜ್ಯದಲ್ಲೇ ಮಂಗಳೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಜೂನ್ 15ರ ಬೆಳಗ್ಗೆ 8.30ರ ವರೆಗಿನ 24 ಗಂಟೆಯಲ್ಲಿ ನೀರುಮಾರ್ಗ, ಫರಂಗಿಪೇಟೆಯ ಪುದು ಭಾಗದಲ್ಲಿ 18 ಸೆಮೀ ಮಳೆಯಾಗಿದೆ.
ಬಂಟ್ವಾಳ ತಾಲೂಕಿನ ಮೇರಮಜಲಿನಲ್ಲಿ 17.4 ಸೆಮೀ, ಸುರತ್ಕಲ್ ಬಾಳದಲ್ಲಿ 16.5 ಸೆಮೀ, ಬೆಳ್ತಂಗಡಿಯ ಪಟ್ರಮೆಯಲ್ಲಿ 16.2 ಸೆಮೀ, ಅಮ್ಟಾಡಿ 15.9 ಸೆಮೀ, ಬಡಗಬೆಳ್ಳೂರು, ಸರಪಾಡಿ, ಮಚ್ಚಿನದಲ್ಲಿ 15 ಸೆಮೀ ಮಳೆಯಾಗಿದೆ. ಎಕ್ಕಾರು, ಮರೋಡಿ, ಪಡು ಮಾರ್ನಾಡು, ಬೆಳ್ತಂಗಡಿಯ ಕಲ್ಮಂಜ, ಬಜ್ಪೆ, ಬಾಳೆಪುಣಿ ಆಸುಪಾಸಿನಲ್ಲಿ 12 ಸೆಮೀ ಮಳೆಯಾಗಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ ಇದಕ್ಕಿಂತ ಕಡಿಮೆ ಮಳೆಯಾಗಿದೆ.
ಕಂಪೌಂಡ್ ಗೋಡೆ ಕುಸಿದ ದೃಶ್ಯ ಸೆರೆ
ಇದೇ ವೇಳೆ, ಮಂಗಳೂರು ನಗರ ಭಾಗದಲ್ಲಿ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಕಂಕನಾಡಿಯ ಸುವರ್ಣ ಲೇನ್ ಬಳಿ ಆಸ್ಪತ್ರೆಯ ಆವರಣ ಗೋಡೆ ಕುಸಿದಿದ್ದು ರಸ್ತೆ ಮತ್ತು ಪಕ್ಕದ ಮನೆಯ ಆವರಣದ ಗೇಟ್ ಮತ್ತು ಗೋಡೆಗೆ ಹಾನಿಯಾಗಿದೆ. ಇದರ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ರಸ್ತೆಯ ಮೇಲೆ ಕುಸಿದು ಬಿದ್ದ ಕಾಂಪೌಂಡ್ ಗೋಡೆಯ ದೃಶ್ಯ ಭಯಾನಕ ಎನ್ನುವಂತಿದೆ. ಅದೃಷ್ಟವಶಾತ್ ಈ ಹೊತ್ತಿಗೆ ರಸ್ತೆಯಲ್ಲಿ ಜನ ಅಥವಾ ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಗೋಡೆ ಕುಸಿದು ಬಿದ್ದ ರಭಸಕ್ಕೆ ಮನೆಯ ಕಾಪೌಂಡ್ ಗೆ ಅಳವಡಿಸಿದ್ದ ಗೇಟ್ ಕಿತ್ತುಕೊಂಡು ಹೋಗಿದೆ. ಇದೇ ವೇಳೆ, ವಿದ್ಯುತ್ ಕಂಬ ಎರಡು ತುಂಡಾಗಿ ಬಿದ್ದಿದೆ.
ಇದಲ್ಲದೆ, ಮಂಗಳೂರು ನಗರದ ಕಾರ್ ಸ್ಟ್ರೀಟ್, ಕೊಡಿಯಾಲ್ ಬೈಲ್, ಕೊಟ್ಟಾರ, ಅಡ್ಯಾರಿನಲ್ಲಿ ಮನೆಗಳಿಗೂ ನೀರು ನುಗ್ಗಿದ್ದು ಜನರು ಸಂಕಷ್ಟ ಪಟ್ಟಿದ್ದಾರೆ.
Heavy rain in #Mangalore: A massive compound wall collapsed at #SuvarnaLane, #Kankandy. The wall, part of a #hospital boundary, crashed onto a nearby house compound. Shocking video shows sparks flying from a nearby transformer. #Mangalore #RainHavoc #mangalorerain pic.twitter.com/ZSvwSqhyNZ
— Headline Karnataka (@hknewsonline) June 15, 2025
Mangaluru has recorded the highest rainfall in Karnataka over the past 24 hours, leading to waterlogging, property damage, and safety concerns in various parts of the city. According to the Meteorological Department, the highest rainfall was recorded in Neermarga and Pudhu in Farangipete.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm