ಬ್ರೇಕಿಂಗ್ ನ್ಯೂಸ್
12-06-25 05:46 pm Mangalore Correspondent ಕರಾವಳಿ
ಮಂಗಳೂರು, ಜೂನ್ 12 : ನರೇಂದ್ರ ಮೋದಿ ಪ್ರಧಾನಿಯಾಗಿ 11 ವರ್ಷದಲ್ಲಿ ದೇಶ ಕ್ರಾಂತಿಕಾರಿ ಎನ್ನುವಂತೆ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಬದಲಾಗಿದ್ದು, ರಫ್ತು, ವಿನಿಮಯ, ಆರ್ಥಿಕತೆ ತೀವ್ರ ಗತಿಯಲ್ಲಿ ಪ್ರಗತಿ ಕಂಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಹೆಚ್ಚಿದೆ. ಯುಪಿಎ ಸರಕಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ವಿದೇಶಕ್ಕೆ ತೆರಳುತ್ತಿದ್ದಾಗ ಗೌರವ ಕೊಡದ ಸ್ಥಿತಿಯಿತ್ತು. ಮೋದಿ ಪ್ರಧಾನಿಯಾದ ಬಳಿಕ ವಿದೇಶದಲ್ಲಿ ಎದ್ದು ನಿಂತು ಗೌರವ ಕೊಡುತ್ತಿದ್ದಾರೆ, ಮೋದಿ ಬರುವುದನ್ನೇ ವಿದೇಶಿ ನಾಯಕರು ಕಾಯುತ್ತಿದ್ದಾರೆ. ಭಾರತೀಯರಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಹೆಚ್ಚಾಗಿದೆ, ಕೈಯೊಡ್ಡುವ ಸ್ಥಿತಿಯಲ್ಲಿದ್ದ ರಕ್ಷಣಾ ಕ್ಷೇತ್ರ ಸ್ವಾವಲಂಬಿಯಾಗುವತ್ತ ಮುನ್ನುಗ್ಗಿದೆ ಎಂದು ಕೇಂದ್ರ ಸಣ್ಣ ಉದ್ದಿಮೆಗಳ ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಮೋದಿಯವರು ಸುದೀರ್ಘ ಕಾಲ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಿ ಕಪ್ಪು ಚುಕ್ಕೆಯಿಲ್ಲದ ಆಡಳಿತ ನಡೆಸಿದ್ದಾರೆ. ಭ್ರಷ್ಟಾಚಾರ, ದೂರದೃಷ್ಟಿಯ ಯೋಜನೆ, ಗಡಿಗಳ ರಕ್ಷಣೆ ಸೇರಿ ನಾಲ್ಕು ಅಂಶಗಳನ್ನು ಮುಂದಿಟ್ಟು ಲೋಕಸಭೆ ಚುನಾವಣೆ ಎದುರಿಸಿದ್ದರು. ಮೋದಿ ಸರ್ಕಾರದಲ್ಲಿ ಸಣ್ಣ ಭ್ರಷ್ಟಾಚಾರದ ಆರೋಪವೂ ಬರದಂತೆ ಆಡಳಿತ ನಡೆಸಿದ್ದಾರೆ. ಸೈನಿಕರ ಸ್ಥಿತಿಯನ್ನು ಮೇಲೆತ್ತಿದ್ದಾರೆ. ಕಾಶ್ಮೀರದಲ್ಲಿ ಸೈನಿಕರಿಗೆ ಕಲ್ಲು ಹೊಡೆಯುವುದು, ಸೇನೆಯ ಜೀಪು ಹತ್ತಿಕೊಂಡು ಕುಳಿತುಕೊಳ್ಳುವ ಸ್ಥಿತಿ ಇತ್ತು. ಸೈನಿಕರು ಈಗ ಎದೆಯೆತ್ತಿಕೊಂಡು ಹೋಗುವಂತೆ ಮಾಡಿದ್ದಾರೆ. ಸೈನಿಕರ ಸೂಟು ಬೂಟು, ಪಿಂಚಣಿ ವ್ಯವಸ್ಥೆಯೂ ಉತ್ತಮಗೊಂಡಿದೆ.
ದೇಶದಲ್ಲಿ ಅಭಿವೃದ್ಧಿಗೆ ವಿಶೇಷ ಕೊಡುವುದು ಗುರಿಯಾಗಿತ್ತು. ಅದನ್ನು ಮೋದಿ ಸಾಧಿಸಿ ತೋರಿಸಿದ್ದಾರೆ. ಜಗತ್ತಿನಲ್ಲಿ ನಾಲ್ಕನೇ ದೊಡ್ಡ ಆರ್ಥಿಕತೆಯಾಗಿದ್ದು, ಮೂರನೇ ಅತಿದೊಡ್ಡ ಆರ್ಥಿಕತೆ ಮಾಡುವಲ್ಲಿ ಗುರಿಯಿಟ್ಟಿದ್ದಾರೆ. ದೇಶಾದ್ಯಂತ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿದ್ದು, ದಿನ ಒಂದರಲ್ಲಿ 25 ಕಿಮೀ ಹೆದ್ದಾರಿ ನಿರ್ಮಾಣ ಆಗುತ್ತಿದೆ. ರಕ್ಷಣಾ ವ್ಯವಸ್ಥೆಯನ್ನು 95 ಶೇಕಡಾ ಸ್ವಾವಲಂಬಿಯಾಗಿಸಿದ್ದಾರೆ. ವಾಜಪೇಯಿ ಪೋಖ್ರಾನ್ ಸ್ಫೋಟ ನಡೆಸಿದಾಗ, ಅಮೆರಿಕ ಆರ್ಥಿಕ ನಿರ್ಬಂಧ ಹಾಕಿತ್ತು. ಮೋದಿ ಆಡಳಿತಕ್ಕೇರಿದಾಗ, ರಕ್ಷಣಾ ವ್ಯವಸ್ಥೆ ಇನ್ನೊಬ್ಬರನ್ನು ಆಶ್ರಯಿಸಿಯೇ ಮುನ್ನಡೆಯಬೇಕಾದ ಸ್ಥಿತಿ ಇತ್ತು. 95 ಶೇಕಡಾ ರಕ್ಷಣಾ ಉಪಕರಣಗಳನ್ನು ನಮ್ಮಲ್ಲಿಯೇ ತಯಾರಿಸುವುದಲ್ಲದೆ, ಸಣ್ಣ ರಾಷ್ಟ್ರಗಳಿಗೆ ರಫ್ತನ್ನೂ ಮಾಡುತ್ತಿದ್ದೇವೆ. 23650 ಕೋಟಿ ಮೊತ್ತದ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಲಾಗಿದೆ.
ಆಂತರಿಕ ಭದ್ರತೆಯನ್ನೂ ಹೆಚ್ಚಿಸಲಾಗಿದ್ದು, ಯುಪಿಎ ಅವಧಿಯಲ್ಲಿ ದೇಶದಲ್ಲಿ 13 ಸಾವಿರ ಕೋಮು ಗಲಭೆಗಳಾಗಿದ್ದರೆ, ಹತ್ತು ವರ್ಷಗಳಲ್ಲಿ ಇದರ ಸಂಖ್ಯೆ ಮೂರು ಸಾವಿರಕ್ಕೆ ಇಳಿದಿದೆ. 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಬೇಕೆಂದು ಮೋದಿಯವರು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. ಆ ಹೊತ್ತಿಗೆ, ದೇಶದ ಯಾವುದೇ ಪ್ರದೇಶ ಹಿಂದುಳಿದಿದೆ ಎನ್ನುವ ಸ್ಥಿತಿಯಲ್ಲಿ ಇರಬಾರದು. ಇದಕ್ಕಾಗಿ ದೇಶದ ಉದ್ದಗಲದಲ್ಲಿ ಒಂದೇ ಪ್ರಕಾರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ನಾವು ಹೋದರೆ, ನೀವು ಇಂಡಿಯಾದಿಂದ ಬಂದಿದ್ದೀರಾ ಎಂದು ಕೇಳುತ್ತಿದ್ದರು. ಅವರು ಇಂಡಿಯಾದಲ್ಲೇ ಇದ್ದಾರೆಂಬ ಭಾವನೆ ಇರಲಿಲ್ಲ. ಯಾಕಂದ್ರೆ, ಸರಕಾರದ ಯಾವುದೇ ಅಭಿವೃದ್ಧಿ ಸೌಲಭ್ಯಗಳು ಅಲ್ಲಿಗೆ ತಲುಪುತ್ತಿರಲಿಲ್ಲ. ಬಾಂಗ್ಲಾ ಗಡಿಯಿಂದ ನೇರವಾಗಿ ಉಡುಪಿಯಿಂದ ಮಂಗಳೂರಿಗೆ ಬಂದಂತೆ ಜನರು ಬಂದು ಹೋಗುತ್ತಿದ್ದರು. ಭಾರತ ಸರಕಾರ ಇದೆಯೆಂಬ ಭಾವನೆ ಅಲ್ಲಿನವರಿಗೆ ಇರಲಿಲ್ಲ. ಬಾಂಗ್ಲಾ ಗಡಿಯುದ್ದಕ್ಕೂ ತಂತಿ ಬೇಲಿ ಹಾಕಿದ್ದು ದೇಶಾದ್ಯಂತ ಗಡಿಯನ್ನು ಭದ್ರಪಡಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಹಿಂದೆ ಹೇಗಿತ್ತು, ಈಗ ಹೇಗಾಗಿದೆ ಎನ್ನುವುದು ಅಂಕಿ ಅಂಶ ಸಹಿತ ನಮ್ಮ ಕೈಯಲ್ಲಿದೆ. ದೇಶದಲ್ಲಿ 74 ಏರ್ಪೋರ್ಟ್ ಇದ್ದುದು ಈಗ 162ಕ್ಕೆ ಏರಿಕೆಯಾಗಿದೆ. ರೈಲ್ವೇ ಹಳಿಯನ್ನು ಪೂರ್ತಿಯಾಗಿ ವಿದ್ಯುತ್ತೀಕರಣ ಮಾಡುವುದಕ್ಕೆ ಕೆಲಸ ಆಗುತ್ತಿದೆ. ಯುನಿವರ್ಸಿಟಿಗಳು 780 ಇದ್ದುದು ಈಗ 1365ಕ್ಕೆ ಏರಿಕೆಯಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ದೇಶ ಪ್ರಗತಿಯತ್ತ ಸಾಧಿಸುತ್ತಿದ್ದು, ಇದು ನರೇಂದ್ರ ಮೋದಿಯವರ ದೂರದೃಷ್ಟಿಯಿಂದಾಗಿ ಆಗುತ್ತಿದೆ ಎಂಬುದನ್ನು ಹೇಳಬಯಸುತ್ತೇನೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಭಾರಿ ಉದಯಕುಮಾರ್ ಶೆಟ್ಟಿ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಮತ್ತಿತರರು ಇದ್ದರು.
Union Minister Shobha Karandlaje has accused the Congress government in Karnataka of using the renewed push for a caste-based census as a diversionary tactic to shift public attention away from the recent stampede deaths in Bengaluru.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm