ಬ್ರೇಕಿಂಗ್ ನ್ಯೂಸ್
05-06-25 10:29 pm Mangalore Correspondent ಕರಾವಳಿ
ಮಂಗಳೂರು, ಜೂನ್ 5 : ನಗರ ಕೇಂದ್ರ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸುವುದು ಹಾಗೂ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಪ್ರಾರಂಭಿಸುವ ಕುರಿತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಮುಖೇನ ಒತ್ತಾಯಿಸಿದ್ದಾರೆ.
ಮಂಗಳೂರು ನಗರವು ದೇಶದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಒಂದಾಗಿದ್ದು, ಅಭಿವೃದ್ಧಿಗೆ ಪೂರಕವಾದ ವಾಣಿಜ್ಯ ಚಟುವಟಿಗಳಿಂದಾಗಿ ಕರ್ನಾಟಕದ ಬಂದರು ನಗರಿಯಾಗಿ ಹಾಗೂ ಪ್ರಮುಖ ರೇವು ಪಟ್ಟಣವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರವಾಸೋದ್ಯಮ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ದೇಶ -ವಿದೇಶಗಳಿಂದಲೂ ಸಾವಿರಾರು ಜನ ಪ್ರತಿನಿತ್ಯ ನಗರಕ್ಕೆ ಭೇಟಿ ನೀಡುತ್ತಾರೆ. ಮಂಗಳೂರು ನಗರದ ಕೇಂದ್ರ ಭಾಗದಲ್ಲಿರುವ ಬಸ್ ನಿಲ್ದಾಣವು 1980ರಲ್ಲಿ ಮಂಜೂರಾಗಿ 83ರಲ್ಲಿ ಅಂದಾಜು 60 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿರುತ್ತದೆ. ಪ್ರಸ್ತುತ ಬಸ್ ನಿಲ್ದಾಣವು 3 ಎಕರೆ 60 ಸೆಂಟ್ಸ್ ವಿಸ್ತೀರ್ಣದ ಪ್ರದೇಶವನ್ನು ಹೊಂದಿದ್ದು, 4702.94 ಚ. ಮೀ ವಿಸ್ತೀರ್ಣದ ನಿಲ್ದಾಣ ಕಟ್ಟಡ, 814.82 ಚ. ಮೀ ವಾಣಿಜ್ಯ ಪ್ರದೇಶ, 103 ಚ.ಮೀ ದ್ವಿಚಕ್ರ ವಾಹನ ಪಾರ್ಕಿಂಗ್, 608.50 ಚ. ಮೀ ಕಾರ್ ಪಾರ್ಕಿಂಗ್, 171.92 ಚ. ಮೀ ರಿಕ್ಷಾ ನಿಲ್ದಾಣ, 1564.82 ಚ.ಮೀ ವಿಶ್ರಾಂತಿ ಕೊಠಡಿಗಳ ಸಾಮರ್ಥ್ಯ ಹೊಂದಿದೆ. ಕಳೆದ 39 ವರ್ಷಗಳಲ್ಲಿ ಅಲ್ಪ ಸ್ವಲ್ಪ ಅನುದಾನದಿಂದ ನಿಲ್ದಾಣವನ್ನು ನಿರ್ವಹಣೆ ಮಾಡಲಾಗಿದೆಯೇ ಹೊರತು ಆಧುನಿಕ ಸೌಲಭ್ಯಗಳೊಂದಿಗೆ ಉನ್ನತೀಕರಿಸುವ ಯಾವುದೇ ಪ್ರಯತ್ನಗಳಾಗಿರುವುದಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ನಿಲ್ದಾಣಕ್ಕೆ ಪ್ರತಿನಿತ್ಯ ವಿವಿಧ ವಿಭಾಗಗಳಿಂದ ಅಂದಾಜು 515 ಬಸ್‌ಗಳು ಬಂದು ಹೋಗುತ್ತಿದ್ದು, ಸರಿಸುಮಾರು 25 ಸಾವಿರ ಪ್ರಯಾಣಿಕರು ನಿತ್ಯ ನಿಲ್ದಾಣವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿಸಿದ್ದಾರೆ.
ರಾಜ್ಯದ ಬೊಕ್ಕಸಕ್ಕೆ ವಿವಿಧ ಉದ್ಯಮಗಳ ಮೂಲಕ ಅತೀ ಹೆಚ್ಚು ತೆರಿಗೆ ಪಾವತಿಸುವ ಜನರು ಹಾಗೂ ಸಂಸ್ಥೆಗಳನ್ನು ಹೊಂದಿರುವ ನಗರಗಳಲ್ಲಿ ಒಂದಾಗಿರುವ ಮಂಗಳೂರಿನಲ್ಲಿ, ಕಾಲಮಾನಕ್ಕೆ ತಕ್ಕಂತೆ ನಿಲ್ದಾಣದ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಿ, ಇತರೇ ರಾಜ್ಯದಲ್ಲಿರುವಂತೆ ಹೈಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಬೇಕೆಂಬುದು ಮಂಗಳೂರಿನ ನಿವಾಸಿಗಳ ಹಾಗೂ ಪಕ್ಷದ ಮುಖಂಡರ ಆಗ್ರಹವಾಗಿದೆ. ಆದ್ದರಿಂದ ಮಂಗಳೂರು ಬಸ್ ನಿಲ್ದಾಣವನ್ನು ಇತರೇ ಜಿಲ್ಲೆಯಲ್ಲಿರುವಂತೆ, ಅಂದಾಜು 120 ಕೋಟಿ ರೂಪಾಯಿ ಅನುದಾನದಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಹೈಟೆಕ್ ಬಸ್ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವುದರ ಜೊತೆಗೆ ನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಪ್ರಾರಂಭಿಸಬೇಕಾಗಿ ಈ ಮೂಲಕ ತಮ್ಮನ್ನು ಮನವಿ ಮಾಡುವುದಾಗಿ ಭಂಡಾರಿ ಹೇಳಿದ್ದಾರೆ.
Manjunath Bhandari Urges Transport Minister to Upgrade Mangaluru Bus Stand into Hi Tech Hub and Introduce Electric Buses.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm