ಬ್ರೇಕಿಂಗ್ ನ್ಯೂಸ್
05-06-25 10:10 am Mangalore Correspondent ಕರಾವಳಿ
ಮಂಗಳೂರು, ಜೂನ್ 5: ಕೇಸರಿ ಕಟ್ಟಿಕೊಂಡು ಹೊಡೆದ್ಕೊಂಡರೆ ಹಿಂದು ಮುಖಂಡ, ಹಿಂದು ಕಾರ್ಯಕರ್ತ ಆಗುತ್ತಾನಾ.. ರೌಡಿಶೀಟರ್, ಕೊಲೆ ಮಾಡಿದವರು, ಸುಲಿಗೆ ಮಾಡಿದವರನ್ನು ಹಿಂದು ಕಾರ್ಯಕರ್ತ ಅನ್ನುತ್ತೀರಾ.. ಕಾಂಗ್ರೆಸ್ ಸರ್ಕಾರ ಇರುವಾಗ ಮಾತ್ರ ಹಿಂದುಗಳಿಗೆ ತೊಂದರೆ ಆಗಿದ್ದಾ.. ಹಿಂದು ನಾಯಕ ಅನಿಸಿಕೊಳ್ಳಲು ರೌಡಿಶೀಟರ್, ಗಾಂಜಾ, ಅನೈತಿಕ ಚಟುವಟಿಕೆ ಮಾಡಿಕೊಂಡಿದ್ದವರೇ ಆಗಬೇಕಾ.. ಹೀಗೆಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪೊಲೀಸರು ಬಿಡುಗಡೆ ಮಾಡಿರುವ ಗಡೀಪಾರು ಪಟ್ಟಿಯಲ್ಲಿ ಕೇವಲ ಹತ್ತು ಕಿಮೀ ವ್ಯಾಪ್ತಿಯವರೇ ಹೆಚ್ಚಿದ್ದಾರೆ. ಇಡೀ ಕರಾವಳಿಗೆ ಹತ್ತು ಕಿಮೀ ವ್ಯಾಪ್ತಿಯ ಕೋಮು ಹಿಂಸೆಯ ಜನರಿಂದಾಗಿ ಕೆಟ್ಟ ಹೆಸರು ಬರ್ತಾ ಇದೆ. 30 ವರ್ಷಗಳ ಹಿಂದೆ ಬಿಜೆಪಿಯವರು ಬಿತ್ತಿದ ಕೋಮು ವೈಷಮ್ಯದ ಬೀಜ ಈಗ ಹೆಮ್ಮರವಾಗಿ ಬೆಳೆದಿದೆ. ಕೋಮು ಗಲಭೆ, ಕೋಮು ಸಂಘರ್ಷ, ಕೋಮು ಹತ್ಯೆ ಬೇರೆ ಬೇರೆ. ಇಲ್ಲಿ ಆಗುತ್ತಿರುವುದು ಕೋಮು ಹತ್ಯೆ ಮಾತ್ರ. ಆದರೆ ಇಡೀ ಕರಾವಳಿಗೆ ಇದರ ನೆಪದಲ್ಲಿ ಮಸಿ ಬಳಿಯಲಾಗುತ್ತಿದೆ. ಮಾಧ್ಯಮದಲ್ಲಿ ಇಡೀ ಕರಾವಳಿಯಲ್ಲಿ ಇಂಥದ್ದು ಆಗ್ತಾ ಇದೆಯೆಂದು ಬಣ್ಣ ಹಚ್ಚಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಕಾರವಾರದಿಂದ ಕಾಸರಗೋಡು ವರೆಗೆ ನಮ್ಮ ಕರಾವಳಿಯಿದ್ದು, ಮಂಗಳೂರಿನಲ್ಲಿ ಮಾತ್ರ ಈ ರೀತಿಯ ಕೋಮು ಹಿಂಸೆಯ ಕೃತ್ಯಗಳು ನಡೆಯುತ್ತಿವೆ. ಬೆಳ್ತಂಗಡಿ, ಸುಳ್ಯ, ಉಡುಪಿ, ಕಾರವಾರ ಬೇರೆಲ್ಲಿಯೂ ನಡೀತಾ ಇಲ್ಲ. ಮಂಗಳೂರಿನಲ್ಲು ಹತ್ತು ಕಿಮೀ ರೇಡಿಯಸ್ ವ್ಯಾಪ್ತಿಯಲ್ಲಿ ಇಂತಹ ಕೃತ್ಯಗಳು ಹೆಚ್ಚಿದ್ದು, ಇದನ್ನು ಪೊಲೀಸ್ ಇಲಾಖೆ ಮೂಲಕ ಹತ್ತಿಕ್ಕಬೇಕಾಗಿದೆ. ಈ ನಡುವೆ, ನಾವೆಲ್ಲ ಹಿಂದುಗಳಲ್ವಾ ಎನ್ನುವ ಪ್ರಶ್ನೆ ಕೇಳಬೇಕಾಗಿದೆ. ಇವರ ಪರಿವಾರದಲ್ಲಿ 50-60 ದಳಗಳಿವೆ, ಅವನ್ನು ಹೇಳಿಕೊಳ್ಳಲಿ. ಅದು ಬಿಟ್ಟು ಹಿಂದು ನಾಯಕ, ಹಿಂದು ಕಾರ್ಯಕರ್ತ ಎಂದು ಹೇಳಿಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು. ಇದಕ್ಕಾಗಿ ನಾವೊಂದು ಸಮಿತಿ ಮಾಡುತ್ತಿದ್ದೇವೆ. ಪ್ರತಿ ತಾಲೂಕಿನಲ್ಲಿ ಇದರ ಕಾರ್ಯಕ್ರಮ ಮಾಡುತ್ತೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸದಾಶಿವ ಉಳ್ಳಾಲ್, ಪದ್ಮರಾಜ್ ಆರ್ ಪೂಜಾರಿ, ಜಿ.ಎ ಬಾವ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲಿಯಾನ್, ಶುಭೋದಯ ಆಳ್ವಾ, ಲಾರೆನ್ಸ್ ಡಿಸೋಜ, ಅನಿಲ್ ಪೂಜಾರಿ, ನೀರಜ್ ಪಾಲ್, ಮಹಮ್ಮದ್ ಅಲಿ ಪುತ್ತೂರು ಉಪಸ್ಥಿತರಿದ್ದರು
Mangalore Wearing Saffron Doesn’t Make One a Hindu Leader, Manjunath Bhandary Slams Rise of Criminal Elements in Coastal Communal Politics.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
26-05-26 02:43 pm
HK News Staffer
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm