ಬ್ರೇಕಿಂಗ್ ನ್ಯೂಸ್
03-06-25 07:01 pm Mangalore Correspondent ಕರಾವಳಿ
ಮಂಗಳೂರು, ಜೂನ್ 3 : ಕೋಮು ದ್ವೇಷದ ಕೊಲೆಗಳ ನಿಗ್ರಹಕ್ಕಾಗಿ ಪೊಲೀಸರು ಕೈಗೊಂಡ ಕ್ರಮಗಳು ಮತ್ತು ರಾತ್ರೋರಾತ್ರಿ ಆರೆಸ್ಸೆಸ್ ಪ್ರಮುಖರ ಮನೆಗಳಿಗೆ ಪೊಲೀಸರು ಹೋಗಿ ಬಾಗಿಲು ತಟ್ಟುತ್ತಿರುವ ಬೆಳವಣಿಗೆಯ ವಿಚಾರದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಪ್ರಮುಖರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮತ್ತು ಎಸ್ಪಿ ಡಾ.ಅರುಣ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಗಡೀಪಾರಿಗೆ ಲಿಸ್ಟ್ ಮಾಡಿರುವ ಕ್ರಮ ಮತ್ತು ರಾತ್ರಿ ವೇಳೆ ಪೊಲೀಸರನ್ನು ಆರೆಸ್ಸೆಸ್ ಪ್ರಮುಖರ ಮನೆಗಳಿಗೆ ಕಳಿಸುವುದನ್ನು ಬಿಜೆಪಿ ಶಾಸಕರು ವಿರೋಧಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಸತೀಶ್ ಕುಂಪಲ, ಪೊಲೀಸರು ನಿಷ್ಪಕ್ಷಪಾತ ಕೈಗೊಳ್ಳುವ ಕ್ರಮಗಳಿಗೆ ನಮ್ಮ ಬೆಂಬಲ ಇದೆ, ಆದರೆ ರಾತ್ರಿ ವೇಳೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಆರೆಸ್ಸೆಸ್, ಪರಿವಾರ ಸಂಘಟನೆಗಳ ನಾಯಕರ ಮನೆಗಳಿಗೆ ತೆರಳಿ ಹಿಂಸೆ ನೀಡುವುದನ್ನು ವಿರೋಧಿಸುತ್ತೇವೆ. ಪೊಲೀಸ್ ಅಧಿಕಾರಿಗಳು ತುಂಬ ಒಳ್ಳೆಯದಾಗಿ ಸ್ಪಂದಿಸಿದ್ದಾರೆ. ನಿರಂಕುಶ ರೀತಿಯ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂಬ ವಿಶ್ವಾಸ ಇದೆಯೆಂದರು.
ಕಾಂಗ್ರೆಸಿಗರೇ ಗಡಿಪಾರು ಲಿಸ್ಟ್ ಮಾಡಿದ್ದಾರೆ
ಶಾಸಕ ಭರತ್ ಶೆಟ್ಟಿ ಮಾತನಾಡಿ, ಜಿಲ್ಲೆಯ ಕಾನೂನು ಸುವ್ಯವಸ್ಥೆ ಉತ್ತಮಗೊಳಿಸುವ ವಿಚಾರದಲ್ಲಿ ಚರ್ಚೆ ಮಾಡಿದ್ದೇವೆ. ಆದರೆ ಸುಮ್ಮನೆ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ, ಅಂತಹ ಕ್ರಮಗಳನ್ನು ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ರಾತ್ರಿ ವೇಳೆ ಪೊಲೀಸರನ್ನು ಕಾರ್ಯಕರ್ತರ ರೀತಿ ಬಳಸ್ಕೊಂಡು ಸಂಘ ಪರಿವಾರದ ಹಿರಿಯರ ಮನೆಗೆ ಕಳಿಸುವುದನ್ನು ಏನನ್ನು ಸೂಚಿಸುತ್ತದೆ. ಇದು ಕಾಂಗ್ರೆಸ್ ನಾಯಕರು ಹೇಳಿದ ರೀತಿಯಲ್ಲೇ ಪೊಲೀಸರು ಮಾಡುತ್ತಿರುವುದನ್ನು ಸೂಚಿಸುತ್ತದೆ. ಗಡೀಪಾರು ಮಾಡಲು ಕಾಂಗ್ರೆಸಿನವರೇ ಲಿಸ್ಟ್ ಮಾಡಿ ಕೊಟ್ಟಂತೆ ಕಾಣುತ್ತದೆ. ಇದರ ಹಿಂದೆ ದೊಡ್ಡ ಅಜೆಂಡಾ ಇದೆ, ಎರಡು ತಿಂಗಳ ಹಿಂದೆಯೇ ಈ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಹರಿಪ್ರಸಾದ್ ಬಳಿ ಹೋದಾಗಲೇ ತಿಳಿದಿತ್ತು
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಯಾವುದೇ ಪಕ್ಷದ ಒತ್ತಡಕ್ಕೆ ಮಣಿಯದೆ ಕೆಲಸ ಮಾಡುವಂತೆ ಪೊಲೀಸ್ ವರಿಷ್ಠರಿಗೆ ಹೇಳಿದ್ದೇವೆ. ಗಡೀಪಾರಿಗೆ ಮಾಡಿಕೊಂಡ ಲಿಸ್ಟ್ ಕಾಂಗ್ರೆಸಿಗರ ಮನೆಯಿಂದಲೇ ಬಂದಿರುವುದೆಂದು ಬೇರೆ ಹೇಳಬೇಕಾಗಿಲ್ಲ. ಮೊನ್ನೆ ಸಿದ್ದರಾಮಯ್ಯ ಅವರು ಬಿಕೆ ಹರಿಪ್ರಸಾದ್ ಮತ್ತು ಜಮೀರ್ ಅಹ್ಮದ್ ಜೊತೆಗೆ ಕುಳಿತು ಮಾತನಾಡಿದಾಗಲೇ ನಮಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ಅವರು ಹೇಳಿದಂತೆ, ಪೊಲೀಸರು ಮಾಡುತ್ತಿದ್ದಾರೆ. ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಸಮಾಜದ ಗಣ್ಯರ ಮನೆಗಳಿಗೆ, ಆರೆಸ್ಸೆಸ್ ಸ್ವಯಂಸೇವಕರ ಮನೆಗಳಿಗೆ ರಾತ್ರಿ ವೇಳೆ ಹೋಗಿ ಕದ ತಟ್ಟುವುದನ್ನು ನಾವು ವಿರೋಧಿಸುತ್ತೇವೆ. ಇದು ಸಮಾಜದ ಸ್ವಾಸ್ಥ್ಯ ಕದಡುವುದಕ್ಕೆ ಆಸ್ಪದ ಕೊಟ್ಟಂತೆ ಆಗುತ್ತದೆ ಎಂಬುದನ್ನು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
BJP MLAs and party leaders from Dakshina Kannada, including MLAs Bharath Shetty, Harish Poonja, and district president Satish Kumpala, met Police Commissioner Sudhir Reddy and SP Dr. Arun to protest recent police actions against RSS and Hindu organization leaders.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm