ಬ್ರೇಕಿಂಗ್ ನ್ಯೂಸ್
31-05-25 07:18 pm Mangalore Correspondent ಕರಾವಳಿ
ಉಳ್ಳಾಲ, ಮೇ 31 : ಮಂಜನಾಡಿ ಗ್ರಾಮದ ಮೊಂಟೆಪದವು ಬಳಿ ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ ಮತ್ತು ಇಬ್ಬರು ಹಸುಗೂಸು ಮೊಮ್ಮಕ್ಕಳು ಸಾವನ್ನಪ್ಪಿದ್ದು, ಇಂದು ಮಧ್ಯಾಹ್ನ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿದೆ. ಘಟನೆಯಲ್ಲಿ ಎರಡು ಪುಟ್ಟ ಕಂದಮ್ಮಗಳನ್ನ ಕಳಕೊಂಡು ಕಟ್ಟಡದ ಅವಶೇಷಗಳಡಿಯಿಂದ ರಕ್ಷಿಸಲ್ಪಟ್ಟ ತಾಯಿ ಅಶ್ವಿನಿ ಅವರ ಜರ್ಜರಿತಗೊಂಡ ಎರಡೂ ಕಾಲುಗಳನ್ನ ವೈದ್ಯರು ಕತ್ತರಿಸಿದ್ದಾರೆ.
ನಿನ್ನೆ ಮುಂಜಾನೆ ನಡೆದಿದ್ದ ದುರಂತದಲ್ಲಿ ಮನೆ ಯಜಮಾನ ಕಾಂತಪ್ಪ ಪೂಜಾರಿಯವರು ಕಾಲು ಮುರಿತಕ್ಕೊಳಗಾದರೆ, ಅವರ ಪತ್ನಿ ಪ್ರೇಮ(58) ಮತ್ತು ಮಗನ ಮಕ್ಕಳಾದ ಆರ್ಯನ್(2.5) ಮತ್ತು ಆರುಷ್(1) ಮೃತಪಟ್ಟಿದ್ದರು. ಕಾಂತಪ್ಪ ಅವರ ಪುತ್ರ ಸೀತಾರಾಮ ಅವರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು. ಕಟ್ಟಡದಡಿಯಲ್ಲಿ ಸಿಲುಕಿದ್ದ ಸೀತಾರಾಮ ಅವರ ಪತ್ನಿ ಅಶ್ವಿನಿ ಅವರನ್ನ ಹೊರಗೆಳೆದು ರಕ್ಷಿಸಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೈಮೇಲೆ ಮನೆಯ ಗೋಡೆ ಬಿದ್ದು ಬದುಕುಳಿದರೂ, ಕಾಲಿಗೆ ಬಿದ್ದ ತೀವ್ರ ಒತ್ತಡದಿಂದಾಗಿ ಅಶ್ವಿನಿ ಅವರ ಕಾಲುಗಳು ಸರಿಪಡಿಸಲಾಗದಷ್ಟು ಜರ್ಜರಿತಗೊಂಡಿದ್ದು ನಿನ್ನೆ ರಾತ್ರಿಯೇ ಎರಡೂ ಕಾಲುಗಳನ್ನ ಕತ್ತರಿಸಲಾಗಿದೆ.
ಗುಡ್ಡ ಕುಸಿತ ದುರಂತದಲ್ಲಿ ಅಶ್ವಿನಿ ಅವರು ಈಗಾಗಲೇ ತನ್ನ ಅತ್ತೆ ಮತ್ತು ಎರಡು ಪುಟ್ಟ ಕಂದಮ್ಮಗಳನ್ನ ಅಗಲಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಅಶ್ವಿನಿ ಅವರು ಚೇತರಿಸುವ ಮೊದಲೇ ಆಕೆಯ ಎರಡೂ ಕಾಲುಗಳನ್ನ ಕತ್ತರಿಸಲಾಗಿದೆ. ಏಕಕಾಲಕ್ಕೆ ಎರಡು ಪುಟ್ಟ ಮಕ್ಕಳನ್ನ ಕಳಕೊಂಡಿದ್ದಲ್ಲದೆ ತನ್ನ ಎರಡೂ ಕಾಲುಗಳನ್ನ ಕಳಕೊಂಡಿರುವ ಅಶ್ವಿನಿ ಅವರ ಮುಂದಿನ ಬದುಕು ಶೋಚನೀಯವಾಗಿದೆ.
ಘಟನೆಯಲ್ಲಿ ಮೃತಪಟ್ಟ ಅಜ್ಜಿ, ಮೊಮ್ಮಕ್ಕಳ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಹಿತ್ತಿಲು ಕೋಡಿ ಕೊಪ್ಪಲದ ಕಾಂತಪ್ಪ ಪೂಜಾರಿಯವರ ಮನೆಯಲ್ಲಿ ನಡೆದಿದೆ. ಕಂದಮ್ಮಗಳ ಮೃತದೇಹಗಳನ್ನ ಮಣ್ಣು ಮಾಡಿ, ಅಜ್ಜಿಯ ಮೃತದೇಹಕ್ಕೆ ಅಗ್ನಿ ಸ್ಪರ್ಶಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂತಪ್ಪ ಪೂಜಾರಿ ಮತ್ತು ಅಶ್ವಿನಿ ಅವರನ್ನ ಭೇಟಿ ಮಾಡಿದ್ದೇನೆ. ಅಶ್ವಿನಿಯವರ ಎರಡೂ ಕಾಲುಗಳನ್ನ ಕತ್ತರಿಸಲಾಗಿದೆ. ಆಕೆಗೆ ಪ್ರಜ್ಞೆ ಬಂದಿದ್ದು ಘಟನೆಯ ಬಗ್ಗೆ ಏನೂ ಅರಿವಿಲ್ಲದೆ ತನ್ನ ಮಕ್ಕಳನ್ನೇ ಕೇಳುತ್ತಿದ್ದಳು. ಆಕೆಯ ಮುಂದಿನ ಜೀವನ ಊಹಿಸುವಾಗಲೇ ದುಃಖ ಬರುತ್ತದೆ. ಸರಕಾರ ಘಟನೆಯಲ್ಲಿ ಮೃತರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಕೊಟ್ಟಿದ್ದು, ಅದು ಎಷ್ಟು ದಿವಸಕ್ಕೆ ಸಾಲುತ್ತೆ. ಮಾನವೀಯತೆ ದೃಷ್ಟಿಯಿಂದ ಅಶ್ವಿನಿಯವರಿಗೆ ಮಂಗಳೂರಿನಲ್ಲೇ ಸರಕಾರಿ ನೌಕರಿ ನೀಡಬೇಕೆಂದು ಸರಕಾರವನ್ನ ರವಿಕುಮಾರ್ ಒತ್ತಾಯಿಸಿದರು. ಅಲ್ಲದೆ, ಗುಡ್ಡ ಪ್ರದೇಶದಲ್ಲಿ ಅಪಾಯದಂಚಿನಲ್ಲಿರುವ ಮನೆಗಳನ್ನ ಗುರುತಿಸಿ ಅಲ್ಲಿನ ಕುಟುಂಬಸ್ಥರನ್ನ ರಕ್ಷಿಸುವ ಕೆಲಸ ಸರಕಾರ ಮಾಡಬೇಕೆಂದರು.
ದೇರಳಕಟ್ಟೆಯ ಕಾನಕೆರೆಯಲ್ಲಿ ನಿನ್ನೆ ನಡೆದ ಗುಡ್ಡ ಕುಸಿತದಿಂದ ಸಾವನ್ನಪ್ಪಿದ್ದ ಬಾಲಕಿ ನಯೀಮ (8) ಅವರ ಮನೆಗೂ ಎಮ್ಮೆಲ್ಸಿ ರವಿಕುಮಾರ್ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
A heart-wrenching tragedy struck near Montepadavu in Manjanady village when a massive landslide collapsed onto a house, claiming the lives of a grandmother and her two infant grandchildren. The incident occurred recently, and the final rites for the deceased were performed this afternoon in a somber atmosphere. The young mother, Ashwini, who miraculously survived the disaster, was pulled out from beneath the debris of the collapsed house. However, she suffered severe injuries to both legs. Despite the doctors’ best efforts, her legs were too badly damaged, and both had to be amputated.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm