ಬ್ರೇಕಿಂಗ್ ನ್ಯೂಸ್
31-05-25 03:57 pm Mangalore Correspondent ಕರಾವಳಿ
ಮಂಗಳೂರು, ಮೇ 31 : ಇತ್ತೀಚೆಗೆ ಕೊಲೆಯಾದ ಅಬ್ದುಲ್ ರಹಿಮಾನ್ ಮನೆಗೆ ಆಗಮಿಸಿದ ಮಾಜಿ ವಕ್ಫ್ ಆಯೋಗದ ಅಧ್ಯಕ್ಷ, ಮುಸ್ಲಿಂ ಧರ್ಮಗುರು ಶಾಫಿ ಸಅದಿ ಕಣ್ಣೀರು ಹಾಕಿ ಗಳಗಳನೆ ಅತ್ತಿದ್ದಾರೆ. ಇವತ್ತು ಮುಖ್ಯಮಂತ್ರಿ, ಸಚಿವರು ಬರಬಹುದು. ಈ ಕುಟುಂಬಕ್ಕೆ ನಾವೆಲ್ಲ ಸೇರಿ ಎಷ್ಟು ಲಕ್ಷವನ್ನೂ ಕೊಡಬಹುದು. ಸಚಿವ ಜಮೀರ್ ಅಹ್ಮದ್ ತನ್ನ ಸ್ವಂತ ದುಡ್ಡಿನಲ್ಲಿ 50 ಲಕ್ಷ ಕೊಡುತ್ತೇನೆ ಎಂದಿದ್ದಾರೆ. ಆದರೆ ಈ ಮಕ್ಕಳಿಗೆ ತಂದೆಯನ್ನು ಕೊಡಲಿಕ್ಕೆ ಆಗುತ್ತದಾ.. ಮಗನನ್ನು ಕಳಕೊಂಡ ತಂದೆಗೆ ಮಗನನ್ನು ಮರಳಿಸೋಕೆ ಆಗುತ್ತಾ.. ನಮ್ಮ ಸಮಾಜ ಹೀಗೇಕೆ ಆಗುತ್ತಿದೆ ಎಂದು ಕಣ್ಣೀರು ಸುರಿಸಿ ಅತ್ತಿದ್ದಾರೆ.
ಕಡಿಯಲು ಬಂದಾಗ ರಹಿಮಾನ್ ಅವರು ನನ್ನನ್ನು ಯಾಕೆ ಕೊಲ್ತೀರಾ ಎಂದು ಕೇಳಿದ್ದಾರೆ. ಆದರೆ ಈ ನರ ರಾಕ್ಷಸರಿಗೆ ಮಾನವೀಯತೆ ಬಂದಿಲ್ಲ. ಕರಾವಳಿ ಜನತೆ ಯಾಕೆ ಹೀಗಾಗುತ್ತಿದ್ದಾರೆ. ಯಾರಿಗಾದ್ರೂ ಈ ಮಕ್ಕಳಿಗೆ ತಂದೆಯನ್ನು ಕೊಡಲಿಕ್ಕೆ ಆಗುತ್ತದಾ.. ಜೀವನ ಪೂರ್ತಿ ಯಾರನ್ನು ತಂದೆಯೆಂದು ಕರೆಯಲಿಕ್ಕಾಗುತ್ತದೆ. ನಮ್ಮೆಲ್ಲರನ್ನು ತಂದೆ, ತಾಯಿ ಮನೆಯಲ್ಲಿ ಕಾಯುತ್ತಿದ್ದಾರೆ. ನನಗೂ ಮೂರು ವರ್ಷದ ಮಗು ಇದೆ, ಬೆಂಗಳೂರಿನಲ್ಲಿ ಬಿಟ್ಟು ಬಂದಿದ್ದೇನೆ. ಏನು ಬೇಕಾದ್ರೂ ಮಾಡಬಹುದು. ಯಾರದ್ದೋ ದ್ವೇಷವನ್ನು ಈ ಅಮಾಯಕರ ಮೇಲೆ ಮಾಡಿದರೆ ಗತಿ ಏನಾಗಬೇಕು.
ಮುಖ್ಯಮಂತ್ರಿ, ಸಚಿವರೆಲ್ಲ ಬಂದು ಪರಿಹಾರ ಕೊಡಬಹುದು. ನಾವು ಕೋಟಿಗಟ್ಟಲೆ ಕೊಡಬಹುದು. ನಮ್ಮ ಮನುಷ್ಯತ್ವ ಎಲ್ಲಿ ಹೋಗ್ತಾ ಇದೆ.. ಯಾವ ಜಾತಿ, ಯಾವ ಧರ್ಮ ಆದ್ರೂ ಏನು ಪ್ರಯೋಜನ ಇದೆ. ದಯವಿಟ್ಟು ಈ ಕೊಲೆಗಡುಕರನ್ನು ಮಟ್ಟ ಹಾಕಬೇಕಾಗಿದೆ. ರಾಜ್ಯ ಸರಕಾರಕ್ಕೆ ನಮ್ಮ ಇಡೀ ಸಮುದಾಯದ ಬೇಡಿಕೆಯಿದು. ನಿನ್ನೆಯಿಂದ ನಮ್ಮ ಸಮುದಾಯದ ನಾಯಕರು ತಮ್ಮ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ನಮ್ಮ ಜಿಲ್ಲೆ ಕೋಮು ಹಿಂಸೆ ರಹಿತ ಜಿಲ್ಲೆಯಾಗಬೇಕು. ಶಾಶ್ವತವಾಗಿ ಇಂಥ ವ್ಯವಸ್ಥೆಯಾಗಬೇಕು. ಏಂಟಿ ಕಮ್ಯುನಲ್ ಫೋರ್ಸ್ ಅತಿ ಅಗತ್ಯವಿದೆ. ಮುಖ್ಯಮಂತ್ರಿ ಜೊತೆಗೂ ಈ ಬಗ್ಗೆ ಮಾತಾಡಿದ್ದೇನೆ.
ಪ್ರಚೋದನಕಾರಿ ಭಾಷಣ ಮಾಡೋರಿಗೆ ಮರಣ ದಂಡನೆ ಶಿಕ್ಷೆಯಾಗಬೇಕು. ಅಂಥ ಕಠಿಣ ಶಿಕ್ಷೆ ಕೊಟ್ಟರೆ ಮಾತ್ರ ಈ ವ್ಯವಸ್ಥೆ ನಿಯಂತ್ರಣಕ್ಕೆ ಬಂದೀತು. ಅಲ್ಲಾ ಕೊಟ್ಟ ಜೀವವನ್ನು ಬಲಿ ತೆಗೆಯಲು ಯಾರಿಗೂ ಅಧಿಕಾರ ಇಲ್ಲ. ಕರಾವಳಿಯಲ್ಲಿ ತಳಮಟ್ಟದ ಪೊಲೀಸ್ ವ್ಯವಸ್ಥೆ ಅಮೂಲಾಗ್ರ ಬದಲಾವಣೆ ಆಗಬೇಕು. ಕಮಿಷನರ್, ಎಸ್ಪಿಯನ್ನು ಬದಲಾವಣೆ ಮಾಡಿದರೆ ಏನೂ ಮಾಡಲಾಗಲ್ಲ. ತಳಮಟ್ಟದಲ್ಲಿ 15 ವರ್ಷಗಳಿಂದ ಠಿಕಾಣಿ ಹೂಡಿದವರನ್ನು ವರ್ಗಾವಣೆ ಮಾಡಬೇಕು. ಹೆಡ್ ಕಾನ್ಸ್ ಟೇಬಲ್ ಆಗಿದ್ದವರು ಎಸಿಪಿಗೆ ಫೋನ್ ಮಾಡಿ ಬೆದರಿಸುತ್ತಾರಂತೆ. ಇಂಥ ವ್ಯವಸ್ಥೆಯನ್ನು ಬದಲಾಯಿಸಬೇಕು. ಅವರ ಹಿಂದೆ ರಾಜಕೀಯ ನಾಯಕರು ಇದ್ದಾರೆ ಅಂತ.
ರಾಜಕಾರಣಿಗಳಿಂದ ನಮಗೆ ಭರವಸೆ ಬೇಕಿಲ್ಲ, ಕ್ಷಿಪ್ರಗತಿಯ ಕೆಲಸ ಆಗಬೇಕಾಗಿದೆ. ಕೊಲೆಯಾದ ಮುಸ್ಲಿಂ ಮನೆಯ ಒಬ್ಬ ವ್ಯಕ್ತಿಗೆ ಸರಕಾರಿ ಉದ್ಯೋಗ ಕೊಡಬೇಕು, ಜೀವನಕ್ಕೆ ಬೆನ್ನೆಲುಬಾಗಿ ಸರಕಾರ ನಿಲ್ಲಬೇಕು. ಇದರ ಜೊತೆಗೆ ಶಾಂತಿಯುತವಾಗಿ ಜೀವನ ಮಾಡೋಣ ಎಂದು ಮುಸ್ಲಿಂ ಸಮುದಾಯಕ್ಕೆ ಕರೆ ಕೊಡುತ್ತೇನೆ. ಯಾವತ್ತೂ ಮುಸ್ಲಿಮರು ಅನ್ಯಾಯವಾಗಿ ಯಾರನ್ನೂ ಕೊಲ್ಲೋದಿಲ್ಲ. ನಮ್ಮನ್ನು ಶಾಂತಿಯುತ ಬದುಕಲು ಅವಕಾಶ ಕೊಡಿ ಎಂದು ಸರಕಾರಕ್ಕೆ ಬೇಡಿಕೊಳ್ಳುತ್ತೇನೆ ಎಂದು ಶಾಫಿ ಸಅದಿ ಹೇಳಿದ್ದಾರೆ.
Bantwal Murder, You Can Give Rahim's Family Crores, But Can You Bring Back Their Father?, Shafi Saadi Breaks Down in Mangalore.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm