ಬ್ರೇಕಿಂಗ್ ನ್ಯೂಸ್
29-05-25 10:40 pm Mangalore Correspondent ಕರಾವಳಿ
ಮಂಗಳೂರು, ಮೇ.29: ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಕೊಲೆಯ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಎಂದು ಆರೋಪಿಸಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಸೇರಿದಂತೆ ಮುಸ್ಲಿಂ ನಾಯಕರು ರಾಜಿನಾಮೆಗೆ ಮುಂದಾಗಿದ್ದು, ಈ ಕುರಿತು ಕರೆದಿದ್ದ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು.
ನಗರದ ಶಾದಿ ಮಹಲ್ ಹಾಲ್ ನಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ನೂರಾರು ಕಾರ್ಯಕರ್ತರು, ಮುಸ್ಲಿಂ ನಾಯಕರು ಪಾಲ್ಗೊಂಡಿದ್ದರು. ಆದರೆ ಸಭೆಗೂ ಮುನ್ನ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಅವರಿಗೆ ಕರೆ ಮಾಡಿದ್ದು, ದುಡುಕಿನ ನಿರ್ಧಾರ ತಳೆಯದಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಸಾಮೂಹಿಕ ರಾಜಿನಾಮೆಯೆಂದು ಸಭೆ ಕರೆದಿದ್ದರೂ, ಶಾಹುಲ್ ಹಮೀದ್ ಮತ್ತು ಕೆಲವರು ಸದ್ಯಕ್ಕೆ ರಾಜಿನಾಮೆ ನೀಡುವುದಿಲ್ಲ. ಸರ್ಕಾರಕ್ಕೆ ಒಂದು ವಾರದ ಗಡುವು ನೀಡುವುದಾಗಿ ಹೇಳುತ್ತಿದ್ದಂತೆ ಕಾರ್ಯಕರ್ತರು ಗರಂ ಆಗಿದ್ದು, ಸಾಮೂಹಿಕ ರಾಜಿನಾಮೆಯನ್ನೇ ನೀಡುವಂತೆ ಆಗ್ರಹ ಮಾಡಿದ್ದಾರೆ.
ಕಾರ್ಯಕರ್ತರು ನ್ಯಾಯಕ್ಕಾಗಿ ಧ್ವನಿಯೆತ್ತಿ ಘೆರಾವ್ ಹಾಕುತ್ತಿದ್ದರೆ, ಮುಖಂಡರು ಕಾರ್ಯಕರ್ತರನ್ನು ಸಂತೈಸುವುದಕ್ಕಾಗಿ ವೇದಿಕೆ ಕಡೆಯಿಂದ ಮಾತನಾಡುತ್ತಿದ್ದರು. ಎರಡೂ ಕಡೆಯಿಂದ ಎಲ್ಲರೂ ಧ್ವನಿಯೆತ್ತಿ ಮಾತನಾಡುತ್ತಿದ್ದರಿಂದ ಇಡೀ ಸಭೆಯಲ್ಲಿ ಏನಾಗುತ್ತಿದೆ ಎಂದು ತಿಳಿಯದೆ ಗದ್ದಲ ಉಂಟಾಗಿತ್ತು. ಕಾರ್ಯಕರ್ತರ ಒತ್ತಾಯದಂತೆ, ಬಳಿಕ ಶಾಹುಲ್ ಹಮೀದ್ ಸೇರಿದಂತೆ ಅಲ್ಪಸಂಖ್ಯಾತ ಘಟಕದ ಎಲ್ಲ ನಾಯಕರು ತಮ್ಮ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದಾರೆ. ಆದರೆ ಕಾರ್ಯಕರ್ತರು ಇಷ್ಟಕ್ಕೇ ನಿಲ್ಲದೆ ಜಿಲ್ಲೆಯಾದ್ಯಂತ ಹೋರಾಟ ಕೈಗೆತ್ತಿಕೊಳ್ಳುವ ಬಗ್ಗೆಯೂ ಆಗ್ರಹ ಮಾಡಿದ್ದಾರೆ. ಉಳ್ಳಾಲ, ಮಂಗಳೂರು, ಸುರತ್ಕಲ್ ಹಾಗೂ ಜಿಲ್ಲೆಯ ವಿವಿಧ ಭಾಗದಿಂದ ಮುಸ್ಲಿಂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಒಬ್ಬರ ವರ್ಗಾವಣೆಯಿಂದ ಏನೂ ಆಗಲ್ಲ
ಸಭೆಯ ಕೊನೆಯಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಎಂ.ಎಸ್.ಮಹಮ್ಮದ್, ಅಹಿತಕರ ಘಟನೆಗಳಿಗೆ ಪೊಲೀಸ್ ಇಲಾಖೆಯ ವೈಫಲ್ಯ ಕಾರಣ. ಬಜ್ಪೆ ಚಲೋ ಕಾರ್ಯಕ್ರಮಕ್ಕೆ ಪರವಾನಗಿ ಇಲ್ಲದಿದ್ದರೂ ಸಭೆಯನ್ನು ಆಯೋಜಿಸಿ ಮುಸ್ಲಿಂ ಸಮುದಾಯಕ್ಕೆ ಅವಹೇಳನ ಮಾಡುವುದಕ್ಕೆ ಪೊಲೀಸರೇ ಅವಕಾಶ ನೀಡಿದ್ದಾರೆ. ಅಲ್ಲಿ ಬಹಿರಂಗ ಬೆದರಿಕೆ ಹಾಕಿದ್ದರೂ ಪೊಲೀಸರು ಕ್ರಮ ತೆಗೆದುಕೊಂಡಿರಲಿಲ್ಲ. ಅದರಿಂದಾಗಿಯೇ ಅಬ್ದುಲ್ ರಹಿಮಾನ್ ಕೊಲೆಯಾಗಿದೆ ಎಂದು ಹೇಳುತ್ತೇನೆ.
ಇವತ್ತು ಒಂದೂವರೆ ಸಾವಿರದಷ್ಟು ಕಾರ್ಯಕರ್ತರು ಸಭೆಯಲ್ಲಿ ಸೇರಿದ್ದಾರೆ. ಎಲ್ಲ ಪದಾಧಿಕಾರಿಗಳು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಕಮಿಷನರ್ ಅವರನ್ನ ವರ್ಗಾವಣೆ ಮಾಡುವ ಬಗ್ಗೆ ಮಾಹಿತಿ ಲಭಿಸಿದೆ. ಒಬ್ಬರ ವರ್ಗಾವಣೆಯಿಂದ ಪೊಲೀಸ್ ಇಲಾಖೆ ಸರಿಯಾಗುವುದಿಲ್ಲ. ಅಮೂಲಾಗ್ರ ಬದಲಾವಣೆ ಆಗಬೇಕಿದೆ. ಮುಖ್ಯಮಂತ್ರಿಗಳು ಬಿಕೆ ಹರಿಪ್ರಸಾದ್ ಮತ್ತು ದಿನೇಶ್ ಗುಂಡೂರಾವ್ ಅವರನ್ನು ಜಿಲ್ಲೆಗೆ ಕಳುಹಿಸುತ್ತಿದ್ದಾರೆ, ಅವರ ಜೊತೆ ಎಲ್ಲವನ್ನೂ ಚರ್ಚೆ ಮಾಡುತ್ತೇವೆ ಎಂದರು.
A meeting of the Congress party's minority cell in Mangaluru turned chaotic on the afternoon of May 29, as tensions flared over the decision to initiate mass resignations in protest against the state government's handling of recent incidents in Dakshina Kannada district.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm