ಬ್ರೇಕಿಂಗ್ ನ್ಯೂಸ್
19-05-25 09:41 pm Mangalore Correspondent ಕರಾವಳಿ
ಉಳ್ಳಾಲ, ಮೇ 19 : ತಲೆಯ ಕೂದಲು ನಿರಂತರ ಉದುರುತ್ತಿರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ. ನನ್ನ ಕಿಡ್ನಿಗಳನ್ನ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಬಾವನಿಗೆ ದಾನ ಮಾಡುವಂತೆ ಡೆತ್ ನೋಟ್ ಬರೆದಿಟ್ಟು ಅವಿವಾಹಿತನೋರ್ವ ಮನೆ ಸಮೀಪದ ಶಾಲೆಯ ಛಾವಣಿಯ ಕಬ್ಬಿಣದ ಸಲಾಕೆಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ನಾಡುವಿನಲ್ಲಿ ನಡೆದಿದೆ.
ಕುರ್ನಾಡು ಗ್ರಾಮದ ಹೂವಿನಕೊಪ್ಪಲ ನಿವಾಸಿ ದಿವಂಗತ ರಾಮ ಎಂಬವರ ಪುತ್ರ ಸುಧೀರ್ (32) ಆತ್ಮಹತ್ಯೆಗೈದ ಯುವಕ. ವೃತ್ತಿಯಲ್ಲಿ ಪೈಂಟರ್ ಆಗಿರುವ ಸುಧೀರ್ ಇಂದು ಬೆಳಗ್ಗೆ ಬಸ್ಸು ತಂಗುದಾಣದಲ್ಲಿ ಕುಳಿತಿರುವುದನ್ನ ಸ್ಥಳೀಯರು ಕಂಡಿದ್ದರು. ಸುಧೀರ್ ಮೊಬೈಲ್ ಹಾಗೂ ಪರ್ಸನ್ನ ಮನೆಯಲ್ಲೇ ಬಿಟ್ಟು ತೆರಳಿದ್ದನಂತೆ. ಬಳಿಕ ಕುರ್ನಾಡು ಶ್ರೀ ದತ್ತಾತ್ರೇಯ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಸುಧೀರ್ ನೇಣು ಬಿಗಿದುದನ್ನ ಅಂಗನವಾಡಿ ಶಿಕ್ಷಕಿ ನೋಡಿದ್ದಾರೆ.
ಕೊಣಾಜೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಮೃತ ಸುಧೀರ್ ಅವರ ಶರ್ಟ್ ಜೇಬಲ್ಲಿ ಡೆತ್ ನೋಟ್ ದೊರೆತಿದೆ. ನನ್ನ ತಲೆ ಕೂದಲು ನಿರಂತರವಾಗಿ ಉದುರುತ್ತಿದ್ದು, ತನ್ನ ಕಿಡ್ನಿಗಳನ್ನ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಬಾವ (ಅಕ್ಕನ ಗಂಡ)ನಿಗೆ ದಾನ ಮಾಡಿ. ಅಣ್ಣನ ಮದುವೆಯನ್ನ ಸಾಂಗವಾಗಿ ನಡೆಸಿ ಎಂದು ಡೆತ್ ನೋಟಲ್ಲಿ ಬರೆದಿರುವುದಾಗಿ ತಿಳಿದು ಬಂದಿದೆ.
ಇದೇ ಮೇ ತಿಂಗಳ 29 ರಂದು ಮೃತ ಸುಧೀರ್ ಅವರ ಅಣ್ಣನ ಮದುವೆ ಬೋಳಿಯಾರಿನ ಖಾಸಗಿ ಸಭಾಂಗಣದಲ್ಲಿ ನಿಗದಿಯಾಗಿತ್ತು. ಆದರೀಗ ಮನೆ ಮಗನ ಅಕಾಲಿಕ ಅಗಲಿಕೆಯಿಂದ ಮನೆ ಮಂದಿ ದಿಗ್ಬ್ರಾಂತರಾಗಿದ್ದಾರೆ. ಇನ್ನು ಸುಧೀರ್ ಸಾವಿಗೆ ಬೇರೆಯೇ ಕಾರಣಗಳಿವೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದತ್ತಾತ್ರೇಯ ಅನುದಾನಿತ ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಸುಧೀರ್ ಅದೇ ಶಾಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ವಿಪರ್ಯಾಸ. ಕೂದಲು ಉದುರುವ ಸಮಸ್ಯೆಗಾಗಿ ಆತ್ಮಹತ್ಯೆಗೈದಿರುವುದನ್ನ ನನ್ನ ವೃತ್ತಿ ಜೀವನದಲ್ಲೇ ಮೊದಲು ಕೇಳಿರುವುದಾಗಿ ಕೊಣಾಜೆ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Mangalore Youth Dies by Suicide After Hair Loss Struggle at Konaje, Donates Kidneys in Death Note. The deceased has been identified as Sudheer (32).
10-07-26 10:12 pm
HK News Staffer
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
10-07-26 10:46 pm
HK News Desk
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
10-07-26 05:25 pm
HK News Staffer
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
10-07-26 10:14 pm
HK News Staffer
ಷೇರು ಮಾರ್ಕೆಟ್ ಹೆಸ್ರಲ್ಲಿ 10 ಲಕ್ಷ ರೂ. ವಂಚನೆ ; ಮ...
10-07-26 08:22 pm
ರಿವರ್ಸ್ ಮಾಡುವಾಗ ನಿಯಂತ್ರಣ ತಪ್ಪಿ ತೋಡಿಗೆ ಉರುಳಿ ಬ...
10-07-26 05:29 pm
ರೆಡ್ ಅಲರ್ಟ್; ರಜೆ ಆದೇಶ ಪಾಲಿಸದ ಹತ್ತಕ್ಕೂ ಹೆಚ್ಚು...
10-07-26 03:25 pm
ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಎಂಟು ಮಂದಿ ಬಾ...
10-07-26 02:22 pm