ಬ್ರೇಕಿಂಗ್ ನ್ಯೂಸ್
05-05-25 10:59 pm Mangalore Correspondent ಕರಾವಳಿ
ಮಂಗಳೂರು, ಮೇ 5 : ಹಿಂದು ಸಂಘಟನೆ ಮುಖಂಡ ಶರಣ್ ಪಂಪ್ವೆಲ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಕರೆ ಕೊಟ್ಟಿದ್ದರ ಪರಿಣಾಮ ಅವರ ಅನುಯಾಯಿಗಳು ಮೇ 2ರಂದು ಬೆಳಗ್ಗೆ ಬಸ್ಸಿಗೆ ಕಲ್ಲೆಸೆದು ಹಾನಿ ಮಾಡಿದ್ದು, ಇದಕ್ಕೆ ಶರಣ್ ಪಂಪ್ವೆಲ್ ಅವರು ಬಂದ್ ಕರೆ ಕೊಟ್ಟಿದ್ದೇ ಕಾರಣವೆಂದು ಕದ್ರಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ.
ಎಜೆ ಆಸ್ಪತ್ರೆಯ ಮುಂಭಾಗದಲ್ಲಿ ರಾತ್ರಿ ವೇಳೆ ಬಂದ್ ಕರೆ ಕೊಟ್ಟಿದ್ದು, ಅದರಂತೆ ಸಾರ್ವಜನಿಕರು ಬಂದ್ ಗೆ ಸಹಕರಿಸದೇ ಇದ್ದುದರಿಂದ ಅವರ ಅನುಯಾಯಿಗಳು ಬಸ್ಸಿಗೆ ಕಲ್ಲೆಸೆದು ಹಾನಿ ಮಾಡಿದ್ದರು. ಪ್ರಕ್ಷುಬ್ದ ವಾತಾವರಣ ನಿರ್ಮಾಣ ಮಾಡಿ ಸಾರ್ವಜನಿಕ ಆಸ್ತಿ ನಷ್ಟ ಉಂಟು ಮಾಡಿದ್ದರು. ಇದರಿಂದ ಎರಡು ಕೋಮುಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ಕದ್ರಿ ಠಾಣೆಯಲ್ಲಿ ಕಲಂ 353(3), 196(1) ಬಿ, 49, 324(2-4-5) ಪ್ರಕಾರ ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ.
ಇದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಸಂದೇಶಗಳನ್ನು ಹರಿಯಬಿಡುತ್ತಿರುವವರ ವಿರುದ್ಧ ಕೇಸುಗಳನ್ನು ಮುಂದುವರಿಸಿದ್ದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವಿಕಾಶ್ ಪಿ. ಎಂಬ ಫೇಸ್ಬುಕ್ ಖಾತೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಆದಿಲ್ ಕಾಂಗ್ರೆಸಿಗರ ಜೊತೆಗೆ ತನ್ನ ಮನೆಯಲ್ಲಿರುವ ಫೋಟೋವನ್ನು ತೋರಿಸಿ, ತನ್ನ ಮನೆಯಲ್ಲಿ ಕೊಲೆಗೆ ಸಂಚು ನಡೆಸುತ್ತಿರುವುದಾಗಿ ಸುಳ್ಳು ಮಾಹಿತಿ ಪೋಸ್ಟ್ ಮಾಡಿದ್ದಾರೆಂದು ಕೇಸು ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ರಾಹುಲ್ ರವಿಶಂಕರ್ ಎನ್ನುವ ಹೆಸರಿನ ಟ್ವಿಟರ್ ಖಾತೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಆದಿಲ್ ಸರಕಾರದಿಂದ ನೀಡಲ್ಪಟ್ಟ 25 ಲಕ್ಷ ಪರಿಹಾರದ ಹಣದಲ್ಲಿ 3 ಲಕ್ಷವನ್ನು ಆರೋಪಿಗಳಿಗೆ ಕೊಟ್ಟು ಕೊಲ್ಲಿಸಿದ್ದಾನೆಂದು ಪೋಸ್ಟ್ ಮಾಡಿದ್ದು, ಉರ್ವಾ ಠಾಣೆಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕೋಣಾಜೆ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಮನೀಶ್ ಎಸ್. ಎಂಬಾತ ದಕ್ಷಿಣ ಕನ್ನಡ ಜಿಲ್ಲೆಯ ಬಂದ್ ದಿವಸ ಇಂದು ನಾವು ನಮ್ಮ ಶಕ್ತಿ ತೋರಿಸದೇ ಇರಬಾರದು, ಸುಹಾಸ್ ಶೆಟ್ಟಿ ಬಲಿದಾನ ವ್ಯರ್ಥವಾಗಲು ಬಿಡಬಾರದು ಎಂದು ವಾಟ್ಸಪ್ ನಲ್ಲಿ ಪೋಸ್ಟ್ ಹಾಕಿದ್ದು, ಈ ಬಗ್ಗೆ ಕೇಸು ದಾಖಲಾಗಿದೆ. ಪ್ರಕರಣವನ್ನು ಸಿಇಎನ್ ಠಾಣೆಗೆ ವರ್ಗಾಯಿಸಲಾಗಿದೆ. ಬಂದರು ಠಾಣೆಯಲ್ಲಿ ದಾಖಲಾದ ಇನ್ನೊಂದು ಪ್ರಕರಣದಲ್ಲಿ ಎಸ್ಡಿಪಿಐ ಮುಖಂಡ ರಿಯಾಜ್ ಕಡಂಬು ಮೇಲೆ ಯೂಟ್ಯೂಬ್ ಲೈವ್ನಲ್ಲಿ ವ್ಯಕ್ತಿಯೊಬ್ಬ ಜೀವ ಬೆದರಿಕೆ ಕಮೆಂಟ್ ಪೋಸ್ಟ್ ಹಾಕಿದ ಬಗ್ಗೆಯೂ ಕೇಸು ದಾಖಲಾಗಿದೆ.
The Mangaluru East Police on Monday, May 5, booked cases of public mischief, damage to property, promoting enmity between groups and abetment to crime against Vishwa Hindu Parishad‘s south Karnataka joint secretary Sharan Pumpwell with regard to his call for Dakshina Kannada bandh on May 1, Thursday midnight.
11-07-25 06:36 pm
Bangalore Correspondent
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
Heart Attack, Belagavi, Bidar: ಹೃದಯಾಘಾತ ; ರಸ್...
11-07-25 04:22 pm
ನಾನೇ ಐದು ವರ್ಷಕ್ಕೆ ಸಿಎಂ ; ದೆಹಲಿ ಅಂಗಳದಲ್ಲೂ ಹೂಂಕ...
10-07-25 09:53 pm
12-07-25 04:21 pm
HK News Desk
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
12-07-25 01:42 pm
Mangalore Correspondent
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
12-07-25 01:32 pm
HK News Desk
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm
Rape case in Ramanagar: 14 ವರ್ಷದ ಬಾಲಕಿ ಮೇಲೆ ಆ...
10-07-25 08:09 pm