MLA Harish Poonja, Dinesh Gundurao: ಬುರ್ಖಾಧಾರಿ ಮಹಿಳೆಯಿಂದ ರಿವರ್ಸ್ ಲವ್ ಜಿಹಾದಿಗೆ ಒಳಗಾದವರು ದಿನೇಶ್ ಗುಂಡೂರಾವ್, ಅವರಿಗೆ ಮುಸ್ಲಿಮರ ಮೇಲೆ ಪ್ರೀತಿ ಇದೆ ; ಶಾಸಕ ಹರೀಶ್ ಪೂಂಜ ಟಾಂಗ್ 

05-05-25 05:10 pm       Mangalore Correspondent   ಕರಾವಳಿ

ರಿವರ್ಸ್ ಲವ್ ಜಿಹಾದಿಗೆ ಒಳಗಾದವರು ದಿನೇಶ್ ಗುಂಡೂರಾವ್. ಒಬ್ಬ ಬುರ್ಖಾಧಾರಿ ಮಹಿಳೆಯಿಂದ ಲವ್ ಜಿಹಾದಿಗೆ ಒಳಗಾದ ಮನುಷ್ಯ. ಹಾಗಾಗಿ ಅವರಿಗೆ ಹಿಂದುಗಳ ಬಗ್ಗೆ ಶ್ರದ್ಧೆ ಇಲ್ಲ. ಮುಸ್ಲಿಮರ ಮೇಲೆ ಪ್ರೀತಿ ಇದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೆ ತಿರುಗೇಟು ನೀಡಿದ್ದಾರೆ. 

ಮಂಗಳೂರು, ಮೇ 5 : ರಿವರ್ಸ್ ಲವ್ ಜಿಹಾದಿಗೆ ಒಳಗಾದವರು ದಿನೇಶ್ ಗುಂಡೂರಾವ್. ಒಬ್ಬ ಬುರ್ಖಾಧಾರಿ ಮಹಿಳೆಯಿಂದ ಲವ್ ಜಿಹಾದಿಗೆ ಒಳಗಾದ ಮನುಷ್ಯ. ಹಾಗಾಗಿ ಅವರಿಗೆ ಹಿಂದುಗಳ ಬಗ್ಗೆ ಶ್ರದ್ಧೆ ಇಲ್ಲ. ಮುಸ್ಲಿಮರ ಮೇಲೆ ಪ್ರೀತಿ ಇದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗೆ ತಿರುಗೇಟು ನೀಡಿದ್ದಾರೆ. 

ಮಂಗಳೂರಿನಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯವಾಗಿ ಮುಸ್ಲಿಂ ಹುಡುಗರು ಹಿಂದು ಹುಡುಗಿಯರನ್ನು ಬ್ಲಾಕ್ಮೇಲ್ ಮಾಡಿ ಮದುವೆಯಾಗುತ್ತಾರೆ. ದಿನೇಶ್ ಗುಂಡೂರಾವ್ ಉಲ್ಟಾ ಲವ್ ಜಿಹಾದಿಗೆ ಒಳಗಾದವರು. ಹಾಗಾಗಿ, ಅವರಿಗೆ ಹಿಂದುಗಳ ಬಗ್ಗೆ, ಹಿಂದು ಶ್ರದ್ಧಾಬಿಂದುಗಳ ಬಗ್ಗೆ ನಂಬಿಕೆ ಇಲ್ಲ. ಹಿಂದುಗಳ ಬಗ್ಗೆ ತಾತ್ಸಾರ ಭಾವನೆ ಇದೆ, ಮುಸ್ಲಿಮರ ಮೇಲೆ ಪ್ರೀತಿ ಇದೆ‌. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ತಿಳಿದುಕೊಂಡು ಅವರು ಮಾತನಾಡಲಿ ಎಂದು ಟಾಂಗ್ ನೀಡಿದ್ದಾರೆ. 

ನನ್ನ ಬಗ್ಗೆ ಸೀರಿಯಲ್ ಒಫೆಂಡರ್ ಅಂತ ಗುಂಡೂರಾವ್ ಹೇಳುತ್ತಾರೆ.‌ ಹಿಂದು ಸಮಾಜಕ್ಕಾಗಿ ಎಷ್ಟು ಕೇಸು ಹಾಕಿದರೂ ತೊಂದರೆ ಇಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಒಂಬತ್ತು ಕೇಸನ್ನು ಹಾಕಿದೆ, ಎದುರಿಸುತ್ತಿದ್ದೇನೆ. ತೆಕ್ಕಾರಿನಲ್ಲಿ ಹಿಂದು ಸಮಾಜದ ಜಾಗೃತಿಗಾಗಿ ಮಾತನಾಡಿದ್ದೇನೆ. ಪೊಲೀಸರು ಎಫ್ಐಆರ್ ಮಾಡಿದ್ದಾರೆ. ನನ್ನ ಮಾತನ್ನು ಹಿಂದು ಸಮಾಜ ಒಪ್ಪಿಕೊಂಡಿದೆ. ಬೇರೆಯವರ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ ಎಂದರು. 

ನನ್ನನ್ನು ಕ್ಷೇತ್ರದ ಎರಡು ಲಕ್ಷ ಜನರು ಮತ ಕೊಟ್ಟು ಆಯ್ಕೆ ಮಾಡಿದ್ದಾರೆ. ಕಾಂಗ್ರೆಸಿಗರು ಹಕ್ಕುಚ್ಯುತಿ ದೂರು ಕೊಟ್ಟಿದ್ದಾರೆ, ಹಿಂದು ಸಮಾಜಕ್ಕಾಗಿ ಶಾಸಕ ಸ್ಥಾನ ಹೋದರೂ ಚಿಂತೆ ಇಲ್ಲ‌. ನಾನು ಸಮಾಜದ ಪರ ನಿಲ್ಲುತ್ತೇನೆ ಎಂದು ಮಂಗಳೂರಿನಲ್ಲಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯೆ ನೀಡಿದ್ದಾರೆ. 

ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಹರೀಶ್ ಪೂಂಜ, ಮುಸ್ಲಿಮರ ಬಗ್ಗೆ ಅಪಮಾನಕರ ಮಾತು ಆಡಿರುವ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

Dinesh Gundu Rao a Victim of Reverse Love Jihad by a Burqa Clad Woman, Claims MLA Harish Poonja, Says He’s in Love with Muslims.