ಬ್ರೇಕಿಂಗ್ ನ್ಯೂಸ್
23-04-25 09:45 pm Mangalore Correspondent ಕರಾವಳಿ
ಮಂಗಳೂರು, ಎ.23 : ಬಾಂಗ್ಲಾದೇಶದಲ್ಲಿ ಹಿಂದುಗಳನ್ನು ಓಡಿಸಿದ್ರು, ಮೊನ್ನೆ ಪಶ್ಚಿಮ ಬಂಗಾಳದಲ್ಲಿ ಓಡಿಸಿದ್ದು ನೋಡಿದ್ದೇವೆ. ದೇಶದ ಎಲ್ಲ ಕಡೆಯೂ ಮುಸ್ಲಿಂ ಬಾಹುಳ್ಯ ಇರುವಲ್ಲಿ ಇಂಥಹ ಸ್ಥಿತಿಗಳನ್ನು ನೋಡುತ್ತಿದ್ದೇವೆ. ಇವತ್ತು ಕಾಶ್ಮೀರದಲ್ಲಿ ಉಗ್ರರು ನೀನು ಹಿಂದೂನಾ ಎಂದು ಕೇಳಿ ಗುಂಡಿಕ್ಕಿದ್ದಾರೆ. ನಾಳೆ ನಮ್ಮ ನಡುವೆಯೂ ಇದೇ ಸ್ಥಿತಿ ಬರಬಹುದು. ಇದನ್ನು ನೋಡಿಯೂ ಹಿಂದುವಿನ ರಕ್ತ ಕುದಿಯದೇ ಇದ್ದರೆ ಅದು ರಕ್ತವೇ ಅಲ್ಲ. ಕಾಶ್ಮೀರದ ಘಟನೆ ನಂತರ ನಮ್ಮ ಪಾಲೇನು ಎಂಬುದು ನಮ್ಮನ್ನು ಕಾಡಬೇಕು ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನ ಕ್ಲಾಕ್ ಟವರ್ ವೃತ್ತದ ಮುಂಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಜಮ್ಮು ಕಾಶ್ಮೀರದ ಭಯೋತ್ಪಾದಕ ದಾಳಿ ಘಟನೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭರತ್ ಶೆಟ್ಟಿ ಮಾತನಾಡಿದರು. ಜಾತ್ಯತೀತರು ಭಯೋತ್ಪಾದಕರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು. ಈಗ, ಉಗ್ರರೇ ಹಿಂದುಗಳನ್ನು ಗುರಿಯಾಗಿಸಿ ತಮ್ಮ ಧರ್ಮವನ್ನು ಹೇಳಿಕೊಂಡಿದ್ದಾರೆ. ಕಾಶ್ಮೀರದ ಘಟನೆ ಕೇವಲ ಪ್ರವಾಸಿಗರ ಮೇಲಾದ ಕೃತ್ಯವಲ್ಲ. ಇಡೀ ದೇಶದ ಹಿಂದು ಸಮಾಜಕ್ಕಾದ ದಾಳಿಯಾಗಿದೆ. ಹಿಂದುಗಳು ತಮ್ಮ ಅಸ್ತಿತ್ವಕ್ಕಾಗಿ ರಸ್ತೆಗಿಳಿಯಬೇಕಾದ ದಿನ ದೂರವಿಲ್ಲ. ಆದರೆ ಹಿಂದುಗಳ ಒಗ್ಗಟ್ಟಿನ ಎದುರು ಮಾತ್ರ ಜಿಹಾದಿಗಳು ಶಕ್ತಿ ಕಳಕೊಳ್ಳುತ್ತಾರೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಕಾಶ್ಮೀರದಲ್ಲಿ ನಡೆದ ದಾಳಿ ನಾಳೆ ಮಂಗಳೂರಿನ ಡೊಂಗರಕೇರಿಯಲ್ಲಿ ನಡೆಯಲಿಕ್ಕೆ ಹೆಚ್ಚು ದಿನ ಬೇಡ. ಇದೊಂದು ಮಾನಸಿಕತೆಯಾಗಿದ್ದು, ಜಿಹಾದಿ ಮನಸ್ಥಿತಿಗಳು ಪೋಷಿಸುತ್ತಿವೆ. ಸಿಎಎ ಕಾಯ್ದೆ ಬಂದಾಗ ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿ ಕೇಂದ್ರ ಸರಕಾರದ ವಿರುದ್ಧ ಹೇಳಿಕೆ ನೀಡಿ ಸರಕಾರಿ ವ್ಯವಸ್ಥೆಯಿಂದ ಹೊರಬಂದಿದ್ದರು. ಇಂತಹ ಮಾನಸಿಕತೆಯೇ ದೇಶ ವಿರೋಧಿ ಶಕ್ತಿಗಳಿಗೆ ಪೋಷಣೆ ನೀಡುತ್ತಿವೆ. ಇಂತಹ ಸ್ಥಿತಿಯಲ್ಲಿ ಪ್ರತಿ ವ್ಯಕ್ತಿಯೂ ಸೈನಿಕನ ಭಾವನೆ, ಮಾನಸಿಕತೆ ಬೆಳೆಸಿಕೊಳ್ಳಬೇಕು. ಜಿಹಾದಿ ಮಾನಸಿಕತೆಗೆ ತಕ್ಕ ಶಾಸ್ತಿ ಮಾಡಬೇಕು. ಕಾಶ್ಮೀರದ ದಾಳಿಗೆ ಪ್ರತಿಯಾಗಿ ಮೋದಿ ಸರಕಾರ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ಹೇಳಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ರಾಹುಲ್ ಗಾಂಥಿಯ ಭಾವ ರಾಬರ್ಟ್ ವಾದ್ರಾ ಕಾಶ್ಮೀರದಲ್ಲಿ ಹಿಂದು- ಮುಸ್ಲಿಂ ಮಾಡಿದ್ದರಿಂದ ಭಯೋತ್ಪಾದಕ ಕೃತ್ಯ ಆಗಿದೆ, ಹಿಂದುಗಳನ್ನು ಟಾರ್ಗೆಟ್ ಮಾಡಿದ್ದಾರೆ, ಇದಕ್ಕೆ ಮೋದಿ ಸರಕಾರ ಕಾರಣ ಎಂದಿದ್ದಾನೆ. ಒಬ್ಬ ಸಂಸದೆಯ ಪತಿಯಾಗಿರುವ ವಾದ್ರಾ ಹೀಗನ್ನಬೇಕಿದ್ದರೆ ಕಾಂಗ್ರೆಸಿಗರ ಮಾನಸಿಕತೆ ಏನು. ಈ ದೇಶದಲ್ಲಿ ಕಾಂಗ್ರೆಸ್ ಸರ್ವನಾಶ ಆದರೆ ಮಾತ್ರ ಜಿಹಾದಿ ಮಾನಸಿಕತೆ ಸಾಯಬಹುದು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಎಂಎಲ್ಸಿ ಗಣೇಶ್ ಕಾರ್ಣಿಕ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಪ್ರೇಮಾನಂದ ಶೆಟ್ಟಿ ಮತ್ತಿತರರಿದ್ದರು.
In a powerful address during the recent BJP protests in Mangalore, MLA Bharat Shetty commented on the implications of the recent Kashmir incident, asserting that it represents a direct attack on Hindu society. He emphasized the need for society to recognize the religious motivations claimed by terrorists, which he believes challenges long-held secular perspectives.
12-07-25 10:47 pm
HK News Desk
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
12-07-25 11:00 pm
Mangalore Correspondent
Mangalore Accident, Bolero, Deralakatte: ದೇರಳ...
12-07-25 10:26 pm
Gas Leak at MRPL, Mangalore, death: ಎಂಆರ್ ಪಿಎ...
12-07-25 01:42 pm
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
12-07-25 11:10 pm
Mangalore Correspondent
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm