ಬ್ರೇಕಿಂಗ್ ನ್ಯೂಸ್
23-04-25 09:23 pm Mangalore Correspondent ಕರಾವಳಿ
ಉಳ್ಳಾಲ, ಎ.23 : ಶೈಕ್ಷಣಿಕ, ಉನ್ನತ ಶಿಕ್ಷಣ ಹಾಗೂ ರಿಯಲ್ ಎಸ್ಟೇಟ್ ನಲ್ಲಿ ಇಕೋ ಫ್ರೆಂಡ್ಲೀ ಸ್ಟ್ರಕ್ಚರ್ ಮೂಲಕ ಖ್ಯಾತಿ ಗಳಿಸಿರುವ ಬ್ಯಾರೀಸ್ ಗ್ರೂಪ್ ನ ನೂತನ ವೈಶಿಷ್ಟ್ಯ ಪೂರ್ಣ ಅಪಾರ್ಟ್ ಮೆಂಟ್, ಶಾಪಿಂಗ್ ಮಾಲ್, ರೀಟೈಲ್ ಮಳಿಗೆಗಳನ್ನು ಒಳಗೊಂಡಿರುವ ದೇರಳಕಟ್ಟೆ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ನ ಉದ್ಘಾಟನಾ ಸಮಾರಂಭವು ಎ.26 ರ ಸಂಜೆ 4.30ಕ್ಕೆ ನಡೆಯಲಿದೆ. 4 ಪರದೆಗಳ ಮಲ್ಟಿಫ್ಲೆಕ್ಸ್ ಥಿಯೇಟರ್, ಫುಡ್ ಕೋರ್ಟ್ ಹಾಗೂ ಗೇಮ್ಸ್ ಇಲ್ಲಿನ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದು, ಉದ್ಘಾಟನಾ ದಿನದಂದು ಎಳೆಯರಿಂದ ವಯಸ್ಕರ ವರೆಗೂ ಗೇಮ್ಸ್ ಗಳನ್ನ ಸಂಪೂರ್ಣ ಉಚಿತವಾಗಿ ಆರಂಭದ ಆಫರ್ ಆಗಿ ನೀಡಲಾಗಿದೆ ಎಂದು ಸಂಸ್ಥೆಯ ರಿಟೈಲ್ ಹೆಡ್ ಕೆ.ನಂದಕುಮಾರ್ ಹೇಳಿದರು.
ದೇರಳಕಟ್ಟೆಯ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಬ್ಯಾರೀಸ್ ಸಿಟಿ ಸೆಂಟರ್ ಮಾಲ್ ನಲ್ಲಿ ಯಶಸ್ಸು ಸಾಧಿಸಿದ ಬಳಿಕ ಇದೀಗ ದೇರಳಕಟ್ಟೆಯಲ್ಲಿ ನಗರ ಜೀವನ ಶೈಲಿಯ ಈ ವಿಶಿಷ್ಟ ಯೋಜನೆ ಶುಭಾರಂಭವಾಗುತ್ತಿದೆ. ಯೋಜನೆಯ ಹೃದಯ ಭಾಗದಲ್ಲಿ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸೆಂಟರ್, ಆಧುನಿಕ ನಾಲ್ಕು ಪರದೆಗಳ ಮಲ್ಟಿಪ್ಲೆಕ್ಸ್, ವಿವಿಧ ಪಾಕ ವಿಧಾನಗಳನ್ನು ಒಳಗೊಂಡ ಸೊಗಸಾದ ಫುಡ್ ಕೋರ್ಟ್, ಜತೆಗೆ ಇಂಟರಾಕ್ಟಿವ್ ಆಟಗಳು, ನಾಲ್ಕು ಲೇನ್ ಬೌಲಿಂಗ್ ಅಲೆ, ದೊಡ್ಡ ಕ್ಲೈಂಬಿಂಗ್ ವಾಲ್, ಬಂಪರ್ ಕಾರುಗಳು, ಇಂಡೋರ್ ಕ್ರಿಕೆಟ್, ಮಕ್ಕಳಿಗಾಗಿ ಸಾಫ್ಟ್ ಏರಿಯಾ ಹಾಗೂ ಇತರ ವೈವಿಧ್ಯಮಯ ಆಟ ಹಾಗೂ ಮನೋರಂಜನೆಗಳು ಲಭ್ಯ ಇವೆ. ಗ್ರಾಹಕರು ಈ ಆಟಗಳಲ್ಲಿ ಭಾಗವಹಿಸಿ ಫುಡ್ ಕೋರ್ಟ್ ನಲ್ಲಿ ಆಹಾರ ಖಾದ್ಯಗಳನ್ನು ಸವಿದು ಖುಷಿ ಪಡೆಯಲು ಶೀಘ್ರ ಅವಕಾಶ ಸಿಗಲಿದೆ.
ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ಮಾಲ್ ನ ಮನೋರಂಜನಾ ಪ್ರದೇಶವು ವಿಶಿಷ್ಟ ಹಾಗೂ ನೈಸರ್ಗಿಕ ವಿನ್ಯಾಸದೊಂದಿಗೆ ರೂಪುಗೊಂಡಿದೆ. ಮಲ್ಟಿಪ್ಲೆಕ್ಸ್, ಎಂಟರ್ ಟೈನ್ಮೆಂಟ್ ಸೆಂಟರ್ ಹಾಗೂ ಫುಡ್ ಕೋರ್ಟ್ ಒಂದೇ ಜಾಗದಲ್ಲಿ ಸಂಯೋಜನೆ ಆಗಿದೆ. ಎತ್ತರದ ಇಂಟೀರಿಯರ್ ಗಳು ಮತ್ತು ಗಾಜಿನ ಭಿತ್ತಿಗಳ ಮೂಲಕ ಆಂತರಿಕ ಹಾಗೂ ಬಾಹ್ಯ ಭಾವವನ್ನು ಒದಗಿಸುತ್ತದೆ. ಪ್ರತಿದಿನ ಬೆಳಗ್ಗಿನಿಂದ ರಾತ್ರಿ ವರೆಗೆ ವಿಭಿನ್ನ ವಾತಾವರಣವನ್ನು ಗ್ರಾಹಕರು ಇಲ್ಲಿ ಅನುಭವಿಸಬಹುದು. ಇಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಐದು ಬಾರಿ ನಮಾಝ್ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಇಂಟೀರಿಯರ್ ಮತ್ತು ಫಿಟ್ ಔಟ್ಸ್ ನ ಸೀನಿಯರ್ ಮೆನೇಜರ್ ಕೋಡಿ ಮೊಹಮ್ಮದ್ ಇಕ್ಬಾಲ್, ಮಾರ್ಕೆಟಿಂಗ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಪ್ರಫುಲ್ಲಾ ಪುಷ್ಪರಾಜ್, ಪಬ್ಲಿಕ್ ರಿಲೇಷನ್ಸ್ ಆಫೀಸರ್ ಬಾಬು ನಯನಾರ್ ಉಪಸ್ಥಿತರಿದ್ದರು.
The Bearys Group has officially announced the grand launch of its much-awaited mixed-use development project, 'Bearys Turning Point', in Deralakatte, Mangalore. The announcement was made at a press conference held in the city, where Nand Kumar (Retail Head, Bearys Group), Bapu Nainar (PRO), Kodi Mohammed Iqbal, and Prafulla (Assistant Marketing) shared details about the landmark project.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 11:26 am
Mangalore Correspondent
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm