ಬ್ರೇಕಿಂಗ್ ನ್ಯೂಸ್
12-04-25 10:13 pm Mangalore Correspondent ಕರಾವಳಿ
ಮಂಗಳೂರು, ಎ.12 : ನಾನು ಮತ್ತು ಸಿದ್ದರಾಮಯ್ಯ ಒಟ್ಟಿಗೆ ಮಂತ್ರಿಯಾಗಿ ಕೆಲಸ ಮಾಡಿದ್ದೀವಿ. ಆದರೆ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ವರದಿ ಮುಂದಿಟ್ಟು ಅಪಚಾರದ ಕೆಲಸ ಮಾಡುತ್ತಿದ್ದಾರೆ. ಒಂದು ಸಮಾಜವನ್ನ ಇನ್ನೊಂದು ಸಮಾಜದ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವ ವಿ ಸೋಮಣ್ಣ ಟೀಕಿಸಿದ್ದಾರೆ.
ಮಂಗಳೂರು - ಸುಬ್ರಹ್ಮಣ್ಯ ರೈಲಿಗೆ ಚಾಲನೆ ನೀಡಲು ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಸೋಮಣ್ಣ ಅವರಲ್ಲಿ ಜಾತಿಗಣತಿ ವರದಿ ಜಾರಿಗೆ ಸಿಎಂ ವಿಶೇಷ ಸಂಪುಟ ಸಭೆ ಕರೆದ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಸಿದ್ದರಾಮಯ್ಯ ಕೇವಲ ತಮ್ಮ ಕುರ್ಚಿಯನ್ನ ಉಳಿಸಿಕೊಳ್ಳಬೇಕು ಎಂದು ಈ ವರದಿ ಜಾರಿ ಮಾಡಲು ಮುಂದಾಗಿದ್ದಾರೆ. ನಾನು ಸಿದ್ದರಾಮಯ್ಯನವರಿಗೆ ವಿನಂತಿ ಮಾಡುತ್ತೇನೆ. ನಿಮ್ಮ ಗೌರವದ ನಡವಳಿಕೆ ಏನಾಯ್ತು? ಎಲ್ಲೋ ಕುಳಿತುಕೊಂಡು ಮಕ್ಕಿ ಕಾ ಮಕ್ಕಿ ವರದಿ ಮಾಡೋದು ಸರಿಯಲ್ಲ.
ಒಂದು ವರದಿ ಮಾಡಿಸಿ, ಅದನ್ನು ನಿಮಗೆ ಬೇಕಾಗುವ ಹಾಗೆ ವರದಿ ಬರೆಸಿಕೊಳ್ಳೋದು ಸರಿಯಲ್ಲ. ಇದು ನಿಮಗೆ ಗೌರವ ತರುವ ವಿಚಾರವಲ್ಲ. ನೀವೇ ಮೂರು ವರುಷ ಇರುತ್ತಿರ ಎಂದು ಈಗಾಗಲೇ ಹೇಳಿಕೊಂಡಿದ್ದೀರಿ. ಈ ವರದಿಯನ್ನ ರಿಜೆಕ್ಟ್ ಮಾಡಿ ಹೊಸ ವರದಿ ಮಾಡಿ. ಹೇಗೂ ಭಾರತ ಸರಕಾರ ಜನಗಣತಿ ಶುರು ಮಾಡಿದೆ. ಹಾಗಾಗಿ ನಿಮ್ಮ ಜಾತಿ ಗಣತಿಯನ್ನ ತಿರಸ್ಕಾರ ಮಾಡಿ. ಇನ್ನೊಂದು ಸಲ ಸರಿಯಾಗಿ ಸಮಯ ತೆಗೆದುಕೊಂಡು ವರದಿ ತಯಾರು ಮಾಡಿ. ಇವಾಗಿನ ವರದಿ ಕೇವಲ ಮಕ್ಮಾಲ್ ಟೋಪಿ ವರದಿ.
ಜನರನ್ನ ತುಂಬಾ ದಿನ ಯಾಮಾರಿಸೋದಕ್ಕೆ ಆಗೋದಿಲ್ಲ ಸಿದ್ದರಾಮಯ್ಯನವರೇ.. ಕೆಟ್ಟ ಚಾಳಿಯ ವ್ಯವಸ್ಥೆ ಮಾಡಿ ನಾನು ಬಾರಿ ಒಳ್ಳೆಯವನು ಎಂದು ಹೇಳಿಕೊಳ್ಳುತ್ತಿದ್ದೀರಿ. ನಿಮ್ಮ ಸಂಪುಟದ ಬಹುತೇಕ ಮಂತ್ರಿಗಳು ಇದರ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ. ಯಾಕೆ ಇದನ್ನೆಲ್ಲ ತಂದಿದ್ದಾರೆ ಎಂದು ನಿಮ್ಮ ಮಂತ್ರಿಗಳು ನಮ್ಮಲ್ಲೇ ಮಾತನಾಡಿದ್ದಾರೆ. ಭಾರತ ಸರ್ಕಾರ ಇಂತಹ ಒಂದು ಸಣ್ಣ ಅಪಚಾರವನ್ನೂ ಮಾಡೋದಿಲ್ಲ. ಯಾರಿಗೂ ಗೊತ್ತಿಲ್ಲದೇ ನಾಲ್ಕು ಗೋಡೆಗಳ ನಡುವೆ ನಿಮಗೆ ಬೇಕಾದ ಹೆಬ್ಬೆಟ್ಟು ಇರಿಸಿಕೊಂಡು ಬರೆಸೋದು ಸರಿಯಲ್ಲ. ಜಾತಿ ಗಣತಿ ಮಾಡಲೇಬೇಕು ಎಂದರೆ ಮತ್ತೊಂದು ವರದಿ ಮಾಡಿ.
ಇದು ಕುರ್ಚಿಯನ್ನ ಉಳಿಸಿಕೊಳ್ಳೋ ಕುತಂತ್ರ ಅಷ್ಟೆ. ನಿಮ್ಮತ್ರ ದುಡ್ಡಿಲ್ಲ ಅಷ್ಟೆ. ಅಭಿವೃದ್ಧಿಗೆ ಏನು ಮಾಡೋಕೆ ಆಗುತ್ತಿಲ್ಲ. ಅನೇಕ ಬಿಲ್ ಗಳನ್ನ ಕೊಡಲು ಸಾಧ್ಯವಾಗದೆ ಒದ್ದಾಡುತ್ತಿದ್ದೀರಾ.. ಈ ತಪ್ಪು ಮಾಡಿ ಖಳನಾಯಕರಾಗಬೇಡಿ. ಇದರಿಂದ ಸಾವಿರಾರು ಕುಟುಂಬಗಳಿಗೆ ಅನ್ಯಾಯವಾಗುತ್ತದೆ ಎಂದು ಕೇಂದ್ರ ಸಚಿವ ಸೋಮಣ್ಣ ಹೇಳಿದರು.
ಪಾಪದ ಕೆಲಸಕ್ಕೆ ಕೈ ಹಾಕಿದ್ರೆ ಸುಟ್ಟು ಹೋಗ್ತಾರೆ !
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹತ್ಯೆಗೆ ಸಂಚು ವಿಚಾರದ ಪ್ರಶ್ನೆಗೆ, ಆತಂಕ ವ್ಯಕ್ತಪಡಿಸಿದ ಸೋಮಣ್ಣ ಯತ್ನಾಳ್ ಗೆ ಆ ತರಹ ಯಾರಾದ್ರು ಮಾಡಿದ್ರೆ ಅದಕ್ಕಿಂತ ಪಾಪದ ಕೆಲಸ ಇನ್ನೊಂದಿಲ್ಲ. ಇನ್ನೊಬ್ಬನ ಜೀವ ತೆಗೆಯೋ ಅಧಿಕಾರ ಯಾರಿಗೂ ಇಲ್ಲ. ಈ ಪಾಪದ ಕೃತ್ಯಕ್ಕೆ ಯಾರು ಕೈ ಹಾಕದ ರೀತಿ ಸರಕಾರ ಕ್ರಮ ಕೈಗೊಳ್ಳಬೇಕು. ಅವರು ಎಷ್ಟೇ ದೊಡ್ಡವರಾದರೂ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಯತ್ನಾಳ್ ಅವರು ನುರಿತ ಹಿಂದುತ್ವದ ಪರವಾದ ನಾಯಕರು. ನನಗೂ ಆತ್ಮೀಯರು, ಪಾಪದ ಕೆಲಸಕ್ಕೆ ಕೈ ಹಾಕಿದ್ರೆ ಸುಟ್ಟು ಹೋಗ್ತಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಚಾರದಲ್ಲಿ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪಕ್ಷ ಹೆಮ್ಮರವಾಗಿ ಬೆಳೆದಿದೆ. ನಮ್ಮ ರಾಷ್ಟ್ರೀಯ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದೇ ಅಂತಿಮ. ಸಣ್ಣ ಪುಟ್ಟ ವಿಚಾರಗಳನ್ನ ನಮ್ಮ ರಾಷ್ಟ್ರೀಯ ನಾಯಕರು ಸರಿ ಮಾಡ್ತಾರೆ ಎಂದು ಹೇಳಿದರು.
State government must reject the caste census report. If necessary, Chief Minister Siddaramaiah can conduct a fresh caste census in the next one and a half years and implement that report," Union Minister of State for Railways V Somanna said on Saturday.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 11:26 am
Mangalore Correspondent
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm