ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಪಾಣೆಮಂಗಳೂರಿನ ಈ ಯುವಕರ ಹುಚ್ಚಾಟಕ್ಕೆ ಏನೆನ್ನಬೇಕು ?

09-08-20 11:27 am       Mangalore Reporter   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿ ಉಕ್ಕಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಈ ನಡುವೆ ಬಂಟ್ವಾಳ ಬಳಿ ನೇತ್ರಾವತಿ‌ ನದಿಯಲ್ಲಿ ಯುವಕರು ಮೋಜು ಮಸ್ತಿಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

ಬಂಟ್ವಾಳ ಆಗಸ್ಟ್ 09: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿ ಉಕ್ಕಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಜಿಲ್ಲೆಯಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಿದ್ದರೂ ನದಿಗಳಲ್ಲಿ ನೀರಿನ‌ ಹರಿವು ಹೆಚ್ಚಾಗಿದೆ. ಈ ನಡುವೆ ಬಂಟ್ವಾಳ ಬಳಿ ನೇತ್ರಾವತಿ‌ ನದಿಯಲ್ಲಿ ಯುವಕರು ಮೋಜು ಮಸ್ತಿಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

ಬಂಟ್ವಾಳದ ಪಾಣೆಮಂಗಳೂರಿನಲ್ಲಿ ಸ್ಥಳೀಯ ಯುವಕರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಈಜಾಡಿ‌ ಜಲ‌ ಸಾಹಸ ನಡೆಸಿದ್ದಾರೆ.

ಇಲ್ಲಿಯ ಪಾಣೆಮಂಗಳೂರಿನ ಹಳೇ ಉಕ್ಕಿನ  ಸೇತುವೆಯ ಮೇಲಿನಿಂದ ಈ ಯುವಕರು ನದಿಗೆ ದುಮುಕುತ್ತಿದ್ದಾರೆ. ಭಯಹುಟ್ಟಿಸುವ ರೀತಿಯಲ್ಲಿ ಯುವಕರು ನದಿ ನೀರಿಗೆ ಧುಮುಕುವ ಹುಚ್ಚು ಸಾಹಸದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬ್ರಿಟಿಷ್ ಕಾಲದ ಲೋಹದ ಹಳೆ ಸೇತುವೆಯೊಂದು ಪಾಣೆಮಂಗಳೂರಿನಲ್ಲಿದೆ. ಈ ಹಳೇ ಸೇತುವೆಯ ಮೇಲೆ ನಿಂತು ನೇರವಾಗಿ ಅಪಾಯದಮಟ್ಟದಲ್ಲಿ ಹರಿಯುವ  ನೇತ್ರಾವತಿ ನದಿ ನೀರಿಗೆ ಈ ಯುವಕರು ಧುಮುಕುತ್ತಿದ್ದಾರೆ. ನದಿಗೆ ಹಾರಿ ಈಜಾಡುವ, ನೀರಾಟ ಆಡುವ ಮೂಲಕ ಸಾಹಸ ಪ್ರದರ್ಶಿಸುವ ದೃಶ್ಯ ವನ್ನು ಮೊಬೈಲ್ ನಲ್ಲಿ ದಾರಿ ಹೋಕ ರೊಬ್ಬರು ಸೆರೆಹಿಡಿದಿದ್ದಾರೆ. ಯುವಕರ ಈ ಹುಚ್ಚಾಟದ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದ್ದು .ಈ ರೀತಿಯ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Video