ಬ್ರೇಕಿಂಗ್ ನ್ಯೂಸ್
10-03-25 01:37 pm Mangalore Correspondent ಕರಾವಳಿ
ಮಂಗಳೂರು, ಮಾ.10 : ಫರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋಗಿದ್ದ ಎನ್ನುವುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದ ಅಂಶ. ಆದರೆ ಹುಡುಗ ದಿಗಂತ್ ಬೆಂಗಳೂರು, ಮೈಸೂರು, ಶಿವಮೊಗ್ಗ ಸುತ್ತಾಡಿದರೂ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಇಷ್ಟೆಲ್ಲ ತಂತ್ರಜ್ಞಾನ ಇದ್ದರೂ, ಆತ ಎಲ್ಲಿ ಹೋಗಿರಬಹುದೆಂದು ಸುಳಿವು ಪತ್ತೆ ಮಾಡುವುದಕ್ಕೂ ಸಾಧ್ಯವಾಗಿರಲಿಲ್ಲ. ಕೊನೆಗೆ, ಇನ್ನೇನು ಮಾಡೋದು ಅಂತ ಪೊಲೀಸರು ತಲೆಕೆಡಿಸಿಕೊಂಡಿರುವಾಗಲೇ ಉಡುಪಿಯಲ್ಲಿ ಅಚಾನಕ್ ಎನ್ನುವಂತೆ ಪ್ರತ್ಯಕ್ಷ ಆಗಿದ್ದ. ಇದೀಗ ದಿಗಂತ್ ಈ ರೀತಿ ಪ್ರತ್ಯಕ್ಷ ಆಗುವುದಕ್ಕೆ ದೈವದ ಕಾರಣಿಕವೇ ಕಾರಣ ಎನ್ನುವ ಮಾತು ಕೇಳಿಬಂದಿದೆ.
ಕಳೆದ ನಾಲ್ಕು ತಲೆಮಾರುಗಳಿಂದಲೂ ದಿಗಂತ್ ಕುಟುಂಬಸ್ಥರು ಫರಂಗಿಪೇಟೆಯ ಅರ್ಕುಳದ ಉಳ್ಳಾಕುಲು ಮೃಗಂತಾಯ ದೈವದ ಸೇವೆ ಮಾಡುತ್ತಿದ್ದಾರೆ. ದೈವಸ್ಥಾನದ ನೇಮದ ಸಂದರ್ಭದಲ್ಲಿ ದೀವಟಿಗೆ ಹಿಡಿಯುವವರು ದಿಗಂತ್ ಮನೆಯವರು. ಮೊನ್ನೆಯಷ್ಟೇ ದೈವದ ವಾರ್ಷಿಕ ಉತ್ಸವ ಆಗಿತ್ತು. ಈ ಸಂದರ್ಭದಲ್ಲಿ ದಿಗಂತ್ ನಾಪತ್ತೆ ಬಗ್ಗೆ ದೈವದಲ್ಲಿ ಅರಿಕೆ ಮಾಡಿಕೊಳ್ಳುವಂತೆ ಸ್ಥಳೀಯರು ದೀವಟಿಗೆ ಹಿಡಿಯುವ ಸೋದರ ಸಂಬಂಧಿ ರವಿಯವರಲ್ಲಿ ಹೇಳಿಕೊಂಡಿದ್ದರು.
ಆದರೆ ರವಿ ದೈವದಲ್ಲಿ ಪ್ರಶ್ನೆ ಮಾಡುವುದಕ್ಕೆ ಹೋಗಿರಲಿಲ್ಲ. ನಾವು ಇಷ್ಟು ವರ್ಷಗಳಿಂದ ದೈವದ ಸೇವೆ ಮಾಡುತ್ತಿದ್ದೇವೆ. ನಮ್ಮ ಮನೆಯ ಹುಡುಗ ನಾಪತ್ತೆಯಾದ ಬಗ್ಗೆ ದೈವದಲ್ಲಿ ನಾನು ಕೇಳಿಕೊಳ್ಳಬೇಕೇ.. ದೈವಕ್ಕೆ ಗೊತ್ತಾಗುವುದಿಲ್ಲವೇ.. ನಾವು ನ್ಯಾಯ ನಿಷ್ಠೆಯಿಂದ ದೈವದ ಸೇವೆ ಮಾಡುತ್ತಿರುವುದು ಸತ್ಯವೇ ಆಗಿದ್ದರೆ, ದೈವದ ಕೊಡಿ ಇಳಿಯುವುದರೊಳಗೆ ದಿಗಂತ್ ನನ್ನು ದೈವವೇ ಪತ್ತೆ ಮಾಡಿಕೊಡಬೇಕು ಎಂದು ರವಿ ದೈವದ ಸೇವೆ ನಡೆಯುವ ನಡೆಯಲ್ಲೇ ಹೇಳಿಕೊಂಡಿದ್ದರು. ಪ್ರಶ್ನೆ ಮಾಡುವಂತೆ ಕೇಳಿಕೊಂಡವರಿಗೂ ಅದೇ ಮಾತನ್ನು ಹೇಳಿದ್ದರು. ಶುಕ್ರವಾರ, ಶನಿವಾರ ದೈವದ ಉತ್ಸವ ನಡೆದಿದ್ದು, ಮಾ.9ರ ಭಾನುವಾರ ಬೆಳಗ್ಗೆ ಏರಿಸಿದ್ದ ಧ್ವಜಾರೋಹಣ ಇಳಿಸುವುದಾಗಿತ್ತು. ಆದರೆ ಶನಿವಾರ ಸಂಜೆಯೇ ದಿಗಂತ್ ಉಡುಪಿಯಲ್ಲಿ ಇರುವುದು ಅಚಾನಕ್ ಎನ್ನುವಂತೆ ಸುದ್ದಿ ಬಂದಿತ್ತು.
ನಮ್ಮ ಕುಟುಂಬಸ್ಥರು ತಲೆಮಾರುಗಳಿಂದ ಮಾಡಿಕೊಂಡು ಬಂದ ದೈವದ ಸೇವೆಗೆ ದೈವವೇ ಫಲ ಕೊಟ್ಟಿದೆ. ಕಷ್ಟ ಬಂದಾಗ ಕೈಬಿಡಲಿಲ್ಲ. ಮೃಗಂತಾಯಿ ದೈವದಲ್ಲಿ ನೀನೇ ಪತ್ತೆಹಚ್ಚಿ ಕೊಡಬೇಕು ಎಂದು ಸಂಕಲ್ಪ ತೊಟ್ಟಿದ್ದೆ. ಭಾನುವಾರ ಬೆಳಗ್ಗೆ ಧ್ವಜ ಇಳಿಸುವ ಮೊದಲೇ ಅಂದರೆ, ಶನಿವಾರ ಸಂಜೆಯೇ ನಮಗೆ ಸಿಹಿಸುದ್ದಿ ಸಿಕ್ಕಿದೆ. ಪೊಲೀಸರ ಕೈಗೆ ಸಿಗದ ದಿಗಂತ್ ದೈವದ ಪವಾಡದಿಂದಲೇ ಉಡುಪಿಯಲ್ಲಿ ಕಾಣಸಿಕ್ಕಿದ್ದಾನೆ ಎಂದು ಸೋದರ ಸಂಬಂಧಿ, ದೀವಟಿಗೆ ಹಿಡಿಯುವ ರವಿ ಮಾಧ್ಯಮಕ್ಕೆ ಹೇಳಿದ್ದಾರೆ.
ಫೆ.25ರಂದು ದಿಗಂತ್ ನಾಪತ್ತೆ ಬಳಿಕ ಪೊಲೀಸರಿಗೂ ಯಾವುದೇ ಸುಳಿವು ಸಿಗದೇ ಇದ್ದುದರಿಂದ ಮನೆಯವರು ತೀವ್ರ ಗಾಬರಿಗೊಂಡಿದ್ದರು. ಆತನ ತಂದೆ ಪದ್ಮನಾಭ ಅವರದ್ದು ಅಣ್ಣ, ತಮ್ಮಂದಿರೆಲ್ಲ ಒಟ್ಟಿಗೆ ವಾಸವಿರುವ ಅವಿಭಕ್ತ ಕುಟುಂಬದ ಮನೆಯಾಗಿದ್ದು, ಮನೆಯಲ್ಲಿರುವ ಎಲ್ಲರೂ ದಿಗಂತ್ ಎಲ್ಲಿ ಹೋಗಿರಬಹುದೆಂದು ಸಿಕ್ಕ ಸಿಕ್ಕವರಲ್ಲಿ ಕೇಳಿಕೊಂಡಿದ್ದರು. ಇದ್ದ ದೇವರಿಗೆಲ್ಲ ಹರಕೆ ಹೇಳಿಕೊಂಡಿದ್ದರು. ಹತ್ತು ದಿನ ಕಳೆದರೂ ದಿಗಂತ್ ಸುಳಿವು ಸಿಗದೇ ಇದ್ದುದರಿಂದ ಇನ್ನು ಜೀವಂತ ಸಿಗುವುದು ಕಷ್ಟ ಎಂದೇ ಸ್ಥಳೀಯರು ವದಂತಿ ಹರಡಿದ್ದರು. ಆದರೆ ಅಷ್ಟರಲ್ಲಿಯೇ ದಿಗಂತ್ ಮೈಸೂರಿನಿಂದ ಬಂದ ರೈಲಿನಲ್ಲಿ ಬಂದು ಉಡುಪಿಯಲ್ಲಿ ಇಳಿದು ಜನರ ಮಧ್ಯೆ ಕಾಣಸಿಕ್ಕಿದ್ದಾನೆ. ಇದೆಲ್ಲವೂ ಪವಾಡ ಎನ್ನುವಂತೆ ಆಗಿಹೋಗಿದೆ ಎನ್ನುವುದನ್ನು ಮನೆಯವರು ಮತ್ತು ಪರಿಸರದ ಜನ ಹೇಳುತ್ತಿದ್ದಾರೆ.
Diganth missing case, Daiva answered our prayers says Family on missing sons return. Diganth, a college student from Farangipete who had been missing for several days, was found in Udupi on March 8. Police teams had been searching for him for ten days before he was finally located at a shop Udupi.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 08:29 pm
Mangalore Correspondent
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am