ಬ್ರೇಕಿಂಗ್ ನ್ಯೂಸ್
08-03-25 06:37 pm Mangalore Correspondent ಕರಾವಳಿ
ಮಂಗಳೂರು, ಮಾ.8 : ದಿಢೀರ್ ನಾಪತ್ತೆಯಾಗಿ ಕುತೂಹಲ ಮೂಡಿಸಿದ್ದ ಫರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಉಡುಪಿ ಅಜ್ಜರಕಾಡಿನ ಡಿ ಮಾರ್ಟ್ ಒಂದರಲ್ಲಿ ಅಪ್ರಾಪ್ತ ಬಾಲಕ ಪತ್ತೆಯಾಗಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.





ಮನೆಯವರ ಮಾಹಿತಿ ಪ್ರಕಾರ, ಮಧ್ಯಾಹ್ನ 3.30ರ ವೇಳೆಗೆ ತಾಯಿಗೆ ಒಂದು ಫೋನ್ ಕರೆ ಬಂದಿತ್ತು. ಉಡುಪಿಯ ಡಿಮಾರ್ಟ್ ಮ್ಯಾನೇಜರ್ ಫೋನ್ ಮಾಡಿ ದಿಗಂತ್ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆನಂತರ, ಆತನೂ ತಾಯಿ ಜೊತೆಗೆ ಮಾತನಾಡಿದ್ದು ತನ್ನನ್ನು ಯಾರೋ ಎತ್ತಾಕ್ಕೊಂಡು ಹೋಗಿದ್ದರು ಎಂದು ಹೇಳಿದ್ದಾನೆ.
ನನಗೇನು ತೊಂದರೆಯಾಗಿಲ್ಲ. ನನ್ನನ್ನು ಹೊತ್ತುಕೊಂಡು ಹೋಗಿದ್ದಾರೆ, ನಾನೇ ನಾಪತ್ತೆಯಾಗುವ ಹುಡುಗ ಅಲ್ಲ. ಎಲ್ಲವನ್ನೂ ನಾನು ಬಂದು ಹೇಳುತ್ತೇನೆ ಎಂದು ದಿಗಂತ್ ತನ್ನ ತಾಯಿ ಬಳಿ ಹೇಳಿಕೊಂಡಿದ್ದಾನೆ. ಕೂಡಲೇ ಬಂಟ್ವಾಳ ಪೊಲೀಸರಿಗೆ ಮನೆಯವರು ಮಾಹಿತಿ ನೀಡಿದ್ದಾರೆ. ಆನಂತರ, ಉಡುಪಿ ಪೊಲೀಸರಿಗೆ ಮಾಹಿತಿ ಕೊಟ್ಟು ಕೂಡಲೇ ಆತನನ್ನು ಅಲ್ಲಿಂದ ವಶಕ್ಕೆ ಪಡೆದಿದ್ದಾರೆ.
12 ದಿನಗಳ ಬಳಿಕ ಶ್ವಾನ ತಂದಿದ್ದರು !
ದಿಗಂತ್ ನಾಪತ್ತೆಯಾಗಿ 12 ದಿನ ಕಳೆದರೂ ಸಿಕ್ಕಿಲ್ಲ ಎನ್ನುವುದು ಪೊಲೀಸರಿಗೆ ತೀವ್ರ ಒತ್ತಡ ಉಂಟು ಮಾಡಿತ್ತು. ವಿಚಿತ್ರ ಅಂದರೆ, 12 ದಿನ ಕಳೆದ ಶನಿವಾರ ಬೆಳಗ್ಗೆ 50ಕ್ಕೂ ಹೆಚ್ಚು ಪೊಲೀಸರು ಫರಂಗಿಪೇಟೆ ಆಸುಪಾಸಿನಲ್ಲಿ ಹುಡುಕಾಟ ನಡೆಸಿದ್ದರು. ಗುಡ್ಡದಲ್ಲಿರುವ ಪೊದೆಗಳು, ರೈಲು ಹಳಿಯ ಆಸುಪಾಸಿನಲ್ಲಿ ಹುಡುಕಾಟ ನಡೆಸಿದ್ದು ಇಷ್ಟು ದಿನಗಳ ಬಳಿಕ ಪೊಲೀಸರು ಇಲ್ಲೇನು ಮಾಡುತ್ತಿದ್ದಾರೆ ಎಂದು ಸ್ಥಳೀಯರು ತಮ್ಮಲ್ಲೇ ಪ್ರಶ್ನೆ ಮಾಡಿಕೊಂಡಿದ್ದರು. ಇದಲ್ಲದೆ, ಪೊಲೀಸ್ ನಾಯಿಯನ್ನೂ ಕರೆತಂದು ಮನೆಯಲ್ಲಿದ್ದ ದಿಗಂತ್ ಹಳೆ ಬಟ್ಟೆಯನ್ನು ಮೂಸಿ ತೋರಿಸಿ ಏನಾದರೂ ಸುಳಿವು ಸಿಗುತ್ತಾ ಎಂದು ಪ್ರಯತ್ನ ಪಟ್ಟಿದ್ದರು. ನಾಪತ್ತೆ ತಿಳಿದ ಒಂದೆರಡು ದಿನದಲ್ಲಿ ಮಾಡಬೇಕಾದ ಕೆಲಸವನ್ನು ಪೊಲೀಸರು 12 ದಿನಗಳ ಬಳಿಕ ಮಾಡಿರುವುದು, ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದ್ದನ್ನು ಎತ್ತಿತೋರಿಸಿದೆ.
Farangipete Diganth Missing Case Solved, Missing student Found Safe in Udupi After 12 Days. Diganth, a student from Kidebettu, Farangipete, who had mysteriously gone missing, was finally located in Udupi on Saturday, March 8, after nearly 10 days. Police are reportedly in the process of bringing him back to Bantwal.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm