ಬ್ರೇಕಿಂಗ್ ನ್ಯೂಸ್
08-03-25 05:14 pm Mangalore Correspondent ಕರಾವಳಿ
ಮಂಗಳೂರು, ಮಾ.8 : ಮಂಗಳೂರು ಎಸ್‌ಇಝೆಡ್ ಪರಿಸರದ ಗ್ರಾಮಗಳಾದ ಕುತ್ತೆತ್ತೂರು, ಪೆರ್ಮುದೆ ಗ್ರಾಮಗಳಲ್ಲಿ ದಿನಾ ದುರ್ವಾಸನೆ ಬರುತ್ತಿದ್ದು, ಮಕ್ಕಳು ಮತ್ತು ಸಾರ್ವಜನಿಕರು ರೋಗ ಭೀತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು, ಕುತ್ತೆತ್ತೂರಿನ ಮಂಗಳಪೇಟೆ ಶಾರದಾ ಭಜನಾ ಮಂಡಳಿಯಲ್ಲಿ ನಡೆದ ಪೆರ್ಮುದೆ ಗ್ರಾಮ ಪಂಚಾಯತ್ ಗ್ರಾಮಸಭೆಯಲ್ಲಿ ಪಂಚಾಯತ್ ಆಡಳಿತದ ನಿರ್ಲಕ್ಷ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ಎಂಆರ್‌ಪಿಎಲ್ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳದೇ ಇರುವ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.
ಎಂಎಸ್‌ಇಝೆಡ್ ಮತ್ತು ಎಂಆರ್‌ಪಿಎಲ್ ಸಂಸ್ಥೆಗಳಿಗೆ ಗ್ರಾಮಸಭೆಯ ನೋಟೀಸು ನೀಡಲಾಗಿತ್ತು. ಅವರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿಲ್ಲ ಎಂದು ಹೇಳಿದ ಪಂಚಾಯತ್ ಅಧಿಕಾರಿಗಳು, ದುರ್ವಾಸನೆಯ ಬಗ್ಗೆ ಸಾರ್ವಜನಿಕರ ದೂರುಗಳನ್ನು ಆಧರಿಸಿ ಈ ಬಗ್ಗೆ ಎಸ್‌ಇಝೆಡ್, ಪರಿಸರ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದು ಗಮನ ಸೆಳೆಯಲಾಗಿದೆ. ಆದರೂ ಪರಿಸರದ ದುರ್ವಾಸನೆ ತೊಂದರೆಯಿಂದ ಮುಕ್ತರಾಗಿಲ್ಲ. ಎಸ್‌ಇಝೆಡ್ ಕಡೆಯಿಂದ ಕೆಲವು ಮೀನು ಸಂಸ್ಕರಣಾ ಘಟಕಗಳಿಗೆ ಪರಿಸರ ಮಾಲಿನ್ಯದ ಬಗ್ಗೆ ನೋಟೀಸನ್ನು ನೀಡಿ ಈ ಬಗ್ಗೆ ಪ್ರತಿಯನ್ನು ಪೆರ್ಮುದೆ ಪಂಚಾಯತ್‌ಗೆ ನೀಡಿದೆ ಎಂದು ತಿಳಿಸಿದರು.
ಪೆರ್ಮುದೆ ಗ್ರಾಮದ ಎಂಎಸ್‌ಇಝೆಡ್ ಒಳಗಿರುವ ಯಶವಿ ಫಿಶ್ ಮೀಲ್ ಅಂಡ್ ಆಯಿಲ್ ಕಂಪೆನಿ, ಶ್ರೀ ಅಲ್ಕಾ ಐ.ಐ.ಪಿ ಗ್ರೇಡ್, ಮೆರೈನ್ ಎಕ್ಸ್ ಪೋರ್ಟ್ಸ್ ಪ್ರೈವೇಟ್, ಅಥೆಂಟಿಕ್ ಓಷನ್ ಟ್ರೆಸರ್ ಎಂಬ ನಾಲ್ಕು ಮೀನು ಸಂಸ್ಕರಣಾ ಘಟಕಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟೀಸು ನೀಡಿದ್ದು ಏಳು ದಿನಗಳಲ್ಲಿ ಸರಿಪಡಿಸಿಕೊಳ್ಳದೇ ಇದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಆದರೆ ಪರಿಸರದಲ್ಲಿ ದುರ್ವಾಸನೆ ಮಿತಿ ಮೀರುತ್ತಿದ್ದು ಕುತ್ತೆತ್ತೂರು, ಕಾಟಿಪಳ್ಳ, ಸೂರಿಂಜೆ, ಶಿಬರೂರು ಮುಂತಾದ ಪಕ್ಕದ ಊರುಗಳಿಗೆ ವ್ಯಾಪಿಸುತ್ತಿದೆ. ಪರಿಸರದ ನಿವಾಸಿಗಳು ರೋಗ ಭೀತಿಗೆ ಒಳಗಾಗಿದ್ದಾರೆ.
ಕುತ್ತೆತ್ತೂರಿನಲ್ಲಿರುವ ಎಐಎಸ್‌ಎಫ್ ಕ್ವಾಟ್ರಸ್‌ನ ಶೌಚಾಲಯದ ತ್ಯಾಜ್ಯ ನೀರು ಸ್ಥಳೀಯ ತೋಡುಗಳಿಗೆ ಹರಿಯುತ್ತಿದ್ದು ಪ್ರದೇಶದ ಕೃಷಿ ಭೂಮಿ ಮತ್ತು ಕುಡಿಯುವ ನೀರಿಗೆ ಸಮಸ್ಯೆ ಉಂಟಾದ ಬಗ್ಗೆಯೂ ಸ್ಥಳೀಯರು ಎಂಆರ್‌ಪಿಎಲ್‌ನ ಮಾನವ ಸಂಪನ್ಮೂಲ ವಿಭಾಗದ ಮಹಾ ಪ್ರಬಂಧಕರಿಗೆ ಪತ್ರ ಬರೆದಿದ್ದಾರೆ. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಎಸ್‌ಇಝೆಡ್, ಎಂಆರ್‌ಪಿಎಲ್ ಅಧಿಕಾರಿಗಳು ಗ್ರಾಮಸಭೆಗೆ ಗೈರಾಗಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬಂತು.
ಅಕ್ಷರ ದಾಸೋಹ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕ ಪ್ರವೀಣ ರೈ ನೋಡಲ್ ಅಧಿಕಾರಿಗಳಾಗಿ ಆಗಮಿಸಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಅಧ್ಯಕ್ಷರು, ಪಿಡಿಓ, ಕಾರ್ಯದರ್ಶಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ?
ದೇಶದ ಅಭಿವೃದ್ದಿಗಾಗಿ ಅತ್ಯಾಧುನಿಕ ಕೈಗಾರಿಕೆಗಳು ಬರುತ್ತವೆ ಎಂಬ ಆಶಯದೊಂದಿಗೆ ತಮ್ಮ ಭೂಮಿಯನ್ನು ನೀಡಿದ ಜನರಿಗೆ ಮೋಸ ಮಾಡಲಾಗಿದೆ. ತೀರಾ ಕೆಟ್ಟ ರೀತಿಯಲ್ಲಿ ಅವೈಜ್ಞಾನಿಕವಾಗಿ ಕಾರ್ಯ ನಿರ್ವಹಿಸುವ ಮೀನು ಸಂಸ್ಕರಣಾ ಘಟಕಗಳಿಗೆ ಅಮೂಲ್ಯವಾದ ಜಮೀನು ನೀಡಿ ಪರಿಸರ ವ್ಯವಸ್ಥೆಯಲ್ಲಿ ಆಟವಾಡುತ್ತಾ ಸಾರ್ವಜನಿಕರಿಗೆ ಮಾರಕ ರೋಗಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ಇಲ್ಲಿನ ಶಾಸಕರು ಮತ್ತು ಸಂಸದರು ಚಕಾರ ಎತ್ತದೇ ಇರುವ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್, ಸಂಸದ ಬೃಜೇಶ್ ಚೌಟ ಕೂಡಲೇ ಇತ್ತ ಕಡೆಗೆ ಗಮನಹರಿಸಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.
Community Outcry, Foul Odor from SEZ Sparks Health Fears in Kuttethur and Permude Villages as Fishmeal Companies Ignore Official Notices.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
05-08-25 10:39 pm
Bangalore Correspondent
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm