ಬ್ರೇಕಿಂಗ್ ನ್ಯೂಸ್
03-03-25 08:49 pm Mangalore Correspondent ಕರಾವಳಿ
ಮಂಗಳೂರು, ಮಾ.3: ಶಕ್ತಿನಗರದಲ್ಲಿ ಮಂದಿರದ ಬ್ರಹ್ಮಕಲಶಕ್ಕೆ ಹೋಗಿದ್ದಾಗ ಕಾಂಗ್ರೆಸ್ಸಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಪ್ರೆಸ್ ಮೀಟ್ ನಲ್ಲಿ ಕುಳಿತು ಶಾಸಕರು ಹಲ್ಲೆ ನಡೆಸಿದ್ದಾರೆ ಎಂದು ಹೇಳುವ ಬದಲು ದೂರು ಕೊಟ್ಟ ವ್ಯಕ್ತಿಯೇ, ನಾವು ನೀವೆಲ್ಲರೂ ನಂಬುವ ಕೊರಗಜ್ಜನ ಸನ್ನಿಧಿಗೆ ಅಥವಾ ಕದ್ರಿ ದೇವಸ್ಥಾನಕ್ಕೆ ಬಂದು ಆಣೆ ಪ್ರಮಾಣ ಮಾಡಲು ಸಿದ್ಧರಿದ್ದಾರೆಯೇ ? ದೈವ, ದೇವರುಗಳ ಮೇಲೆ ನಂಬಿಕೆಯಿದ್ದರೆ ಸತ್ಯ ಪ್ರಮಾಣಕ್ಕೆ ಬರಲಿ. ನಮ್ಮ ಶಾಸಕರು ಯಾವುದೇ ಆಣೆ ಪ್ರಮಾಣಕ್ಕೆ ಸಿದ್ಧರಿದ್ದಾರೆ ಎಂದು ಬಿಜೆಪಿ ವಕ್ತಾರ ರಾಜಗೋಪಾಲ್ ರೈ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಕ್ತಿನಗರದ ಕೃಷ್ಣಮಂದಿರದಲ್ಲಿ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವಕ್ಕೆ ಶಾಸಕರು ಬಂದ ಸಂದರ್ಭದಲ್ಲಿ ಒಂದಷ್ಟು ತಮಾಷೆಯ ಮಾತುಕತೆಗಳು ಆಗಿದ್ದವು. ಶಾಸಕರು ಅದಕ್ಕೆ ನಯವಾಗಿಯೇ ಉತ್ತರಿಸಿ ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ಕೆಲವೊಂದು ಕಾಂಗ್ರೆಸ್ಸಿಗರು "ಶಾಸಕರನ್ನು ಬಿಡಬಾರದು, ಮುತ್ತಿಗೆ ಹಾಕಬೇಕು" ಎಂದು ಜನರಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಆನಂತರ, ಕಾಂಗ್ರೆಸ್ಸಿಗನೊಬ್ಬ ತನ್ನ ಶರ್ಟ್ ತಾನೇ ಹರಿದುಕೊಂಡು, ಆಸ್ಪತ್ರೆಗೆ ಹೋಗಿ ಮಲಗಿ ಶಾಸಕರ ವಿರುದ್ಧವೇ ದೂರು ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.
ಇವತ್ತು ಪ್ರೆಸ್ ಮೀಟ್ ಮಾಡಿದ ಪದ್ಮರಾಜ್, ಹರೀಶ್ ಕುಮಾರ್, ಪ್ರಕಾಶ್ ಸಾಲ್ಯಾನ್ ಯಾರೂ ಸಹ ಆ ಸಂದರ್ಭದಲ್ಲಿ ಇರಲಿಲ್ಲ. ಆದರೂ ಸಹ ಇವರೆಲ್ಲರೂ ಬಾಯಿಗೆ ಬಂದ ಹಾಗೆ ಹೇಳಿಕೆಯನ್ನು ಕೊಡುತ್ತಿದ್ದಾರೆ. ಶಾಸಕರು ತಮ್ಮ ಭಾಷಣದಲ್ಲಿ ಪ್ರಚೋದನೆ ಮಾಡಿದರು ಎಂದು ಒಬ್ಬರು ಹೇಳಿದರೆ, ಹಲ್ಲೆಗೊಳಗಾದ ಪರಿಶಿಷ್ಟ ಸಮುದಾಯದ ವ್ಯಕ್ತಿ ಅಲ್ಲಿ ಇರಲೇ ಇಲ್ಲ ಎಂದು ಇನ್ನೊಬ್ಬರು ಹೇಳುತ್ತಾರೆ. ಅವರ ಹೇಳಿಕೆಗಳಲ್ಲೇ ಗೊಂದಲ ಇಟ್ಟುಕೊಂಡು ಪ್ರೆಸ್ ಮೀಟ್ ಮಾಡುತ್ತಾರೆಂದರೆ ಇವರಿಗೆ ಮಾನ ಮರ್ಯಾದೆ ಇದೆಯಾ.?
ನಮ್ಮ ಪ್ರಶ್ನೆ ಇಷ್ಟೇ, ವಿನಾಕಾರಣ ನಮ್ಮ ಶಾಸಕರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿದ್ದು ಏಕೆ? ಇವತ್ತು ಕ್ಷೇತ್ರದ ಒಬ್ಬ ಜನಪ್ರಿಯ ಶಾಸಕರ ಮೇಲೆಯೇ ಸುಳ್ಳು ಕೇಸು ದಾಖಲಿಸುತ್ತಾರೆಂದರೆ, ಇನ್ನು ಸಾಮಾನ್ಯ ಜನರ ಗತಿ ಏನು? ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಕಾನೂನನ್ನು ಹೇಗೆ ದುರುಪಯೋಗ ಪಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಈ ಹಿಂದೆ ನಮ್ಮ ಸರ್ಕಾರವೂ ಅಧಿಕಾರದಲ್ಲಿ ಇತ್ತು. ಆದರೆ ವಿರೋಧ ಪಕ್ಷಗಳ ಯಾವ ನಾಯಕರ ಮೇಲೂ ಇಂತಹ ಕುತಂತ್ರ ಬುದ್ಧಿ ತೋರಿಸಿಲ್ಲ. ಆದರೂ ಕಾಂಗ್ರೆಸ್ಸಿನ ಇಂತಹ ಕುತಂತ್ರಗಳನ್ನು ನಾವು ಕಾನೂನು ಮೂಲಕವೇ ಎದುರಿಸುತ್ತೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮೋಹನ್ ರಾಜ್, ಅರುಣ್ ಜಿ ಶೇಟ್, ಕಿಶೋರ್ ಕೊಟ್ಟಾರಿ, ಶಕೀಲಾ ಕಾವ, ವನಿತಾ ಪ್ರಸಾದ್ ಉಪಸ್ಥಿತರಿದ್ದರು.
The Bharatiya Janata Party (BJP) has accused the Congress government in Karnataka of orchestrating false cases against BJP leaders, including MLAs, as part of a political vendetta. BJP spokesperson Raj Gopal Rai alleged that the recent case against MLA Vedavyas Kamath was fabricated with the intention of maligning him.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm