ಬ್ರೇಕಿಂಗ್ ನ್ಯೂಸ್
02-03-25 06:10 pm Udupi Correspondent ಕರಾವಳಿ
ಉಡುಪಿ, ಮಾ.2: ಕುಂಭಮೇಳ ನಡೆದ ತ್ರಿವೇಣಿ ಸಂಗಮದಲ್ಲಿ ನೀರಿಗೇನಾದರೂ ಜಾತಿ ಇದೆಯಾ. ಪಾರ್ಟಿ ಇದೆಯಾ.. ಮೂರು ನದಿಗಳು ಸೇರುವಂತಹ ಪವಿತ್ರ ಜಾಗದಲ್ಲಿ ಮುಳುಗು ಹಾಕಿ ಬಂದಿದ್ದೇನೆ. ಅದೇ ದಿನ ರಾತ್ರಿ 12 ಗಂಟೆಗೆ ಮೈಸೂರಿನ ಟಿ ನರಸೀಪುದರಲ್ಲಿ ಕಪಿಲಾದ ನದಿಯಲ್ಲಿ ಕುಂಭಮೇಳದಲ್ಲಿ ಭಾಗಿಯಾಗಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಕೆ ಶಿವಕುಮಾರ್, ಹಿಂದೆ ನಮ್ಮ ಕ್ಷೇತ್ರದಲ್ಲಿ ಏಸು ಶಿಲುಬೆಗೆ ಪ್ರೋತ್ಸಾಹ ಕೊಟ್ಟೆ ಅಂತ ನನ್ನನ್ನು ಈ ಭಾಗದವರು ಏಸು ಕುಮಾರ ಎಂದು ಕರೆದಿದ್ದರು. ಸಂಸದರೊಬ್ಬರು ಮುಸ್ಲಿಮರನ್ನು ಪಂಚರ್ ಹಾಕಲು ಲಾಯಕ್ಕು ಎಂದು ಹೇಳಿದಾಗ, ಅವರನ್ನು ಬ್ರದರ್ಸ್ ಎಂದು ಹೇಳಿದ್ದೆ. ಚಿಕನ್, ಮಟನ್ ಕಡಿಯಲು ಅವರೇ ಬೇಕಲ್ವಾ. ಬೇರೆಯವರು ಕಡಿಯುತ್ತಾರೆಯೇ ಎಂದು ಕೇಳಿದ್ದೆ.
ನಾನು ಶಿವನ ಮಗ, ಶಿವಕುಮಾರ್ ಅಂತ ಹೆಸರಿಟ್ಟಿದ್ದಾರೆ. ಶಿವನ ಆರಾಧನೆಗೆಂದು ಹೋಗಿದ್ದೇನೆ. ಅದರಲ್ಲೇನು ವಿಶೇಷ ಇಲ್ಲ. ಯಾರು ಏನು ಬೇಕಾದರೂ ಲೆಕ್ಕಾಚಾರ ಹಾಕಿಕೊಳ್ಳಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಬಿಜೆಪಿಯವರು ಅವರ ಮನೇನಾ ಸರಿ ಮಾಡಿಕೊಳ್ಳಲಿ ಎಂದು ಹೇಳಿದರು.
ಕಾಪು ದೇವಿಯ ಅನುಗ್ರಹದಿಂದ ದೇವಸ್ಥಾನವನ್ನು ವಿಶೇಷವಾಗಿ ಮಾಡಿದ್ದಾರೆ. ಇಲ್ಲಿಗೆ ಬಂದಿದ್ದು ಭಾಗ್ಯ ಅಂದುಕೊಳ್ಳುತ್ತೇನೆ. ಸರ್ಕಾರದ ಹಣವೇ ಇಲ್ಲದೆ ಭಕ್ತರು ಸ್ವಇಚ್ಛೆಯಿಂದ ಇಷ್ಟೊಂದು ಅದ್ಭುತವಾಗಿ ಮಾಡಿದ್ದಾರೆ. ಯಾರೆಲ್ಲ ಈ ಕೆಲಸ ಮಾಡಿದ್ದಾರೋ ಅವರಿಗೆಲ್ಲ ದೇವಿಯ ಅನುಗ್ರಹ ಸಿಗಲಿ. ಬಾಗಲಕೋಟೆಯ ಶಿಲೆಯನ್ನು ಬಳಸಿ ಅದ್ಭುತವಾಗಿ ಮಾಡಿಸಿದ್ದಾರೆ ಎಂದು ಹೇಳಿದರು.
Karnataka Deputy Chief Minister DK Shivakumar on Sunday, March 2 said that his visits to temples often stir controversies. He made these remarks while addressing a gathering at the consecration ceremony of the Kaup Sri Hosa Marigudi temple
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm