ಬ್ರೇಕಿಂಗ್ ನ್ಯೂಸ್
17-01-25 11:10 pm Mangalore Correspondent ಕರಾವಳಿ
ಮಂಗಳೂರು, ಜ.17: ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ ವತಿಯಿಂದ ಶುಕ್ರವಾರ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ಬಹು ಸಂಸ್ಕೃತಿ ಉತ್ಸವ ಉದ್ಘಾಟನೆಯೇ ಆಗದೆ ನಾಮ್ಕೇವಾಸ್ತೆ ಎನ್ನುವ ರೀತಿ ಮುಗಿದು ಹೋಗಿದೆ. ಅಕಾಡೆಮಿಗಳ ಪದಾಧಿಕಾರಿಗಳು ಅತ್ಯಂತ ಆಸ್ಥೆಯಿಂದ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡಬೇಕೆಂದು ಮತ್ತೆ ಮತ್ತೆ ಮುಂದೂಡಿಕೆ ಆದರೂ ಆಯೋಜನೆ ಮಾಡಿದ್ದರು.
ಹೀಗಾಗಿ ಮೂರು ಬಾರಿ ದಿನಾಂಕ ನಿಗದಿಯಾದರೂ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟು ನಾಲ್ಕನೇ ಬಾರಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕೊನೆಗೂ ಮುಹೂರ್ತ ಕೂಡಿ ಬಂತು ಎಂದುಕೊಂಡು ಅಕಾಡೆಮಿ ಮುಖ್ಯಸ್ಥರು ಮುಖ್ಯಮಂತ್ರಿ ಬರುವಿಕೆಗಾಗಿ ಇಡೀ ದಿನ ಕಾದು ಕುಳಿತರು. ಆದರೆ ಉದ್ಘಾಟನೆ ಮಾಡಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಬಂದರೂ ಕಾರ್ಯಕ್ರಮ ನಡೆಯುವ ಪುರಭವನಕ್ಕೆ ಬರಲೇ ಇಲ್ಲ.
ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಪ್ರವಾಸ ಪಟ್ಟಿಯಲ್ಲೂ ಉಲ್ಲೇಖಿಸಲಾಗಿತ್ತು. ಅಲ್ಲದೆ, ಕಾರ್ಯಕ್ರಮವನ್ನು 12 ಗಂಟೆ ವೇಳೆಗೆ ಸಿಎಂ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡುತ್ತಾರೆಂದು ಆಮಂತ್ರಣ ಪತ್ರಿಕೆ ಮತ್ತು ಮಾಧ್ಯಮಗಳಲ್ಲೂ ಬಂದಿತ್ತು. ಆದರೆ ಉದ್ಘಾಟನೆಗೆ ಆಗಮಿಸಬೇಕಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಹೀಗಾಗಿ ಬಹು ಸಂಸ್ಕೃತಿ ಉತ್ಸವ ಉದ್ಘಾಟನೆಯೇ ಆಗದೆ ಮುಗಿದು ಹೋಗಿದೆ. ವಿವಿಧ ಅಕಾಡಮಿಗಳ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದರೂ, ಒಟ್ಟು ಉತ್ಸವ ಅಷ್ಟಕ್ಕೇ ಸೀಮಿತ ಆಗುವಂತಾಯ್ತು. ಸಂಜೆ ನಾಲ್ಕು ಗಂಟೆ ವರೆಗೆ ಅಧಿಕಾರಿ ವರ್ಗ, ಅಕಾಡೆಮಿ ಮುಖ್ಯಸ್ಥರು ಕಾದು ಕುಳಿತರೂ ಮುಖ್ಯಮಂತ್ರಿ ಬರಲಿಲ್ಲ. ಮೇರಿಹಿಲ್ ನಲ್ಲಿ ರಾಜೀವ ಗಾಂಧಿ ಆರೋಗ್ಯ ವಿವಿ ಕಾರ್ಯಕ್ರಮ ಮಧ್ಯಾಹ್ನ ಮುಗಿಸಿದ ಬಳಿಕ ಎಂಎಲ್ಸಿ ಐವಾನ್ ಡಿಸೋಜ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಿದ್ದರಾಮಯ್ಯ ಮತ್ತು ದಂಡು ಅಲ್ಲಿಗೆ ಹೋದವರು, ಅಲ್ಲಿರುವಾಗಲೇ ಬ್ಯಾಂಕ್ ದರೋಡೆ ಸುದ್ದಿ ಬಂದಿದ್ದರಿಂದ ಪೊಲೀಸ್ ಅಧಿಕಾರಿಗಳನ್ನು ಕರೆದು ತುರ್ತು ಸಭೆಯನ್ನೇನೋ ಮಾಡಿದರು. ತಾವು ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮ ಮರೆತೇ ಬಿಟ್ಟರು.
Chief minister Siddaramaiah, by not attending the opening ceremony of Bahusamskrithi Utsava (multicultural festival) at Kudmul Ranga Rao Town Hall on Friday, caused discomfort among representatives from six academies, performing groups from across the state, and numerous spectators who gathered for the event.
22-10-25 08:12 pm
HK News Desk
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
22-10-25 10:56 pm
HK News Desk
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
INS Vikrant in Goa, PM Narendra Modi: ಗೋವಾದಲ್...
20-10-25 08:34 pm
22-10-25 09:55 pm
Mangalore Correspondent
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
ಮೋದಿ ಸರ್ಕಾರದ ಜಿಎಸ್ಟಿ ಸುಧಾರಣೆಗಳ ಬಗ್ಗೆ ಸಿದ್ದರಾಮ...
21-10-25 09:49 pm
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
22-10-25 11:51 am
Mangalore Correspondent
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm