ಬ್ರೇಕಿಂಗ್ ನ್ಯೂಸ್
13-12-20 07:55 pm Mangaluru Correspondent ಕರಾವಳಿ
ಸುಳ್ಯ, ಡಿ.12: ಶಾಲಾ ಮೈದಾನಕ್ಕೆ ಸೈಕಲ್ ಕಲಿಯಲು ಬಂದಿದ್ದ ಎಂಟು ವರ್ಷದ ಬಾಲಕಿಯನ್ನು ಕೊಠಡಿಗೆ ಕರೆದೊಯ್ದ ಶಾಲೆಯ ಆಡಳಿತಾಧಿಕಾರಿ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ. ಸುಳ್ಯದ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು ಹೆತ್ತವರ ದೂರಿನ ಮೇರೆಗೆ ಆಡಳಿತಾಧಿಕಾರಿಯನ್ನು ವಜಾಗೊಳಿಸಿದ್ದಾರೆ ಎನ್ನಲಾಗುತ್ತಿದೆ.
ದೇವಚಳ್ಳ ಗ್ರಾಮದ ಎಲಿಮಲೆಯ ಖಾಸಗಿ ಶಾಲೆಯಲ್ಲಿ ಘಟನೆ ನಡೆದಿದೆ. ಬಾಲಕಿ ತನ್ನ ಗೆಳತಿಯರೊಂದಿಗೆ ಸೈಕಲ್ ಕಲಿಯುತ್ತಿದ್ದ ವೇಳೆ ಶಾಲೆಯ ಆವರಣದಲ್ಲಿದ್ದ ಆಡಳಿತಾಧಿಕಾರಿ ಬಾಲಕಿಯನ್ನು ಕರೆದು ಸೈಕಲ್ ಕೊಡಿಸುವುದಾಗಿ ಹೇಳಿದ್ದಾನೆ. ಈ ವೇಳೆ ಆಕೆಯನ್ನು ಪುಸಲಾಯಿಸಿ ತನ್ನ ಕೊಠಡಿಗೆ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಹೇಳಲಾಗುತ್ತಿದೆ. ನಂತರ ಮನೆಗೆ ತೆರಳಿದ ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.
ಘಟನೆಯ ಕುರಿತು ಆರೋಪಿ ವ್ಯಕ್ತಿಯನ್ನು ಆಡಳಿತ ಮಂಡಳಿಯವರು ವಿಚಾರಿಸಿದ್ದು, ಆತನನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಮನೆಯವರು ಪೊಲೀಸ್ ದೂರು ನೀಡದಂತೆ ಶಾಲೆಯ ಆಡಳಿತ ಮಂಡಳಿ ಮನವೊಲಿಸಿದ್ದಾರೆ. ಹೀಗಾಗಿ ಸುಬ್ರಹ್ಮಣ್ಯ ಠಾಣೆಯಲ್ಲಿ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಈ ವಿಚಾರ ಮಾಧ್ಯಮದಲ್ಲಿ ಬರುತ್ತಿದ್ದಂತೆ, ಬಿಇಓ ಕಚೇರಿಯಿಂದ ಚೈಲ್ಡ್ ಲೈನ್ ಸಂಸ್ಥೆಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಚೈಲ್ಡ್ ಲೈನ್ ಸಂಸ್ಥೆಯವರು ಸಂತ್ರಸ್ತ ಬಾಲಕಿಯನ್ನು ಪರೀಕ್ಷೆಗೊಳಪಡಿಸಿ ವರದಿ ನೀಡಲಿದ್ದು ಕಿರುಕುಳ ಕಂಡುಬಂದರೆ ಪೊಲೀಸ್ ದೂರು ದಾಖಲಾಗುವ ಸಾಧ್ಯತೆ ಇದೆ.
ಇದು ಮೂರನೇ ಪ್ರಕರಣ !!
ಇದೇ ಶಾಲೆಯಲ್ಲಿ ಈ ಹಿಂದೆಯೂ ಇದೇ ರೀತಿಯದ್ದೇ ಪ್ರಕರಣ ನಡೆದಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಎರಡು ವರ್ಷಗಳ ಹಿಂದೆ ಇದೇ ಶಾಲೆಯ ಶಿಕ್ಷಕರಾಗಿದ್ದವರು ಸುಳ್ಯದಲ್ಲಿ ಬಾತ್ ರೂಮ್ ಒಂದರಲ್ಲಿ ಫೋಟೊ ಕ್ಲಿಕ್ಕಿಸಿ ಸಿಕ್ಕಿಬಿದ್ದಿದ್ದರು. ಆನಂತರ ಅವರನ್ನು ವಜಾ ಮಾಡಲಾಗಿತ್ತು. ಐದು ವರ್ಷಗಳ ಹಿಂದೆ ಶಿಕ್ಷಕಿಯೊಬ್ಬರು ಬೇರೊಬ್ಬರ ಜೊತೆ ಹೋಗಿದ್ದರೆಂದು ವಿವಾದ ಆಗಿತ್ತು. ಸಂಸ್ಕಾರದ ಶಿಕ್ಷಣ ನೀಡುವ ಶಾಲೆಯೊಂದು ಈ ರೀತಿಯ ಪ್ರಕರಣಗಳಿಂದ ಸುದ್ದಿಯಾಗಿರುವುದು ವಿಪರ್ಯಾಸ.
Eight-year-old Girl has been sexually Harassed by the School Administrator in Sullia, Dakshina Kannada. It is said the cruel act was done while the girl was cycling in the school ground.
25-05-25 08:48 pm
Bangalore Correspondent
Mysuru Suicide, Lake, Three Dead: ಪ್ರಿಯಕರನ ಜೊ...
24-05-25 07:45 pm
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
25-05-25 04:29 pm
HK News Desk
Mangalore Ship, Container: ಕೊಚ್ಚಿ ಬಳಿಯಲ್ಲಿ ಬೃ...
25-05-25 02:14 pm
Drone Attack, Russia, Brijesh Chowta: ಪಾಕ್ ಭಯ...
23-05-25 08:08 pm
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
25-05-25 10:27 pm
Mangalore Correspondent
MFC Hotel, Arrest, Black Moon Resto Mangalore...
25-05-25 07:57 pm
Mangalore Rain, Flood, Pumpwell: ಪಂಪ್ವೆಲ್ ಹೆ...
25-05-25 04:19 pm
Mangalore CCB, MFC Hotel Owner Siddique Arres...
25-05-25 02:46 pm
ಕೇರಳಕ್ಕೆ ಮುಂಗಾರು ಎಂಟ್ರಿ ; 16 ವರ್ಷಗಳ ಬಳಿಕ ಎಂಟು...
24-05-25 04:29 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm