ಬ್ರೇಕಿಂಗ್ ನ್ಯೂಸ್
13-12-20 03:15 pm Mangaluru Correspondent ಕರಾವಳಿ
ಬಂಟ್ವಾಳ, ಡಿ.13: ತಾಲೂಕಿನ ನಂದಾವರ ಅರಮನೆ ಹಿತ್ಲುವಿನಲ್ಲಿ ರಾತ್ರೋರಾತ್ರಿ ಚುನಾವಣಾ ಬಹಿಷ್ಕಾರ ಬ್ಯಾನರ್ ಕಂಡುಬಂದಿದ್ದು ಯಾವುದೇ ರಾಜಕೀಯ ಪಕ್ಷಗಳ ವ್ಯಕ್ತಿಗಳಿಗೆ ಪ್ರವೇಶ ಇಲ್ಲ ಎಂದು ಬರೆದಿದ್ದಾರೆ.
ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶನಿವಾರ ರಾತ್ರಿ ಚುನಾವಣಾ ಬಹಿಷ್ಕಾರ ಬ್ಯಾನರ್ ಹಾಕಲಾಗಿದೆ. ರಾಜಕೀಯ ಪ್ರೇರಿತ ವ್ಯಕ್ತಿಗಳು ಒಳಗೆ ಬರಲು ಅವಕಾಶ ಇಲ್ಲ ಎಂದು ಬ್ಯಾನರ್ ಹಾಕಿದೆ. ಅಲ್ಲದೆ, ನಂದಾವರದಿಂದ ಅರಮನೆಹಿತ್ಲು ವರೆಗೆ ರಸ್ತೆ ಕಾಮಗಾರಿಗೆ ಅನುದಾನ ದೊರೆತಿದ್ದರೂ ಯಾವುದೇ ಕೆಲಸ ನಡೆಯದ ಕಾರಣ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಬ್ಯಾನರ್ ನಲ್ಲಿ ನಮೂದಿಸಲಾಗಿದೆ.
ಇಲ್ಲಿ ಸುಮಾರು 800 ನಷ್ಟು ಮತದಾರರಿದ್ದು, ಇನ್ನೇನು ಗ್ರಾಮ ಪಂಚಾಯತ್ ಚುನಾವಣಾ ದಿನ ಹತ್ತಿರ ಬರುತ್ತಿದ್ದು , ರಸ್ತೆ ಆಗುವವರೆಗೆ ಈ ಬ್ಯಾನರ್ ತೆಗೆಯೋದಿಲ್ಲ ಎಂದು ಆ ಗ್ರಾಮದ ಜನರು ಎಚ್ಚರಿಕೆ ನೀಡಿದ್ದಾರೆ. ಬ್ಯಾನರ್ ಕಂಡ ತಕ್ಷಣ ಸ್ಥಳಕ್ಕೆ ಪಿ.ಡಿ.ಓ, ಪೋಲಿಸರು ಆಗಮಿಸಿ ಬ್ಯಾನರ್ ತೆಗೆಯಿರಿ ಎಂದು ಸೂಚನೆ ನೀಡಿದ್ದಾರೆ. ಆದರೆ ಗ್ರಾಮದ ಜನರು ಯಾವುದೇ ಕಾರಣಕ್ಕೂ ರಸ್ತೆ ಆಗುವವರೆಗೆ ಬಹಿಷ್ಕಾರದ ಬ್ಯಾನರ್ ತೆಗೆಯೋದಿಲ್ಲ ಎಂದು ಹಠ ಹಿಡಿದ್ದಾರೆ. ಬಳಿಕ ಗ್ರಾಮಕ್ಕೆ ಸ್ಥಳೀಯ ಶಾಸಕರಾದ ರಾಜೇಶ್ ನಾಯಕ್ ಆಗಮಿಸಿ, ಆದಷ್ಟು ಬೇಗ ರಸ್ತೆ ಕೆಲಸ ಮಾಡಿಸುತ್ತೇನೆ. ಸಮಸ್ಯೆಗೆ ಪರಿಹಾರ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
As a result of Upcoming Mangalore panchayat election 2020, Villagers of Nandavara, Bantwal place "No Entry" board for election campaigns by a warning not to enter the village.
25-05-25 08:48 pm
Bangalore Correspondent
Mysuru Suicide, Lake, Three Dead: ಪ್ರಿಯಕರನ ಜೊ...
24-05-25 07:45 pm
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
25-05-25 04:29 pm
HK News Desk
Mangalore Ship, Container: ಕೊಚ್ಚಿ ಬಳಿಯಲ್ಲಿ ಬೃ...
25-05-25 02:14 pm
Drone Attack, Russia, Brijesh Chowta: ಪಾಕ್ ಭಯ...
23-05-25 08:08 pm
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
25-05-25 10:27 pm
Mangalore Correspondent
MFC Hotel, Arrest, Black Moon Resto Mangalore...
25-05-25 07:57 pm
Mangalore Rain, Flood, Pumpwell: ಪಂಪ್ವೆಲ್ ಹೆ...
25-05-25 04:19 pm
Mangalore CCB, MFC Hotel Owner Siddique Arres...
25-05-25 02:46 pm
ಕೇರಳಕ್ಕೆ ಮುಂಗಾರು ಎಂಟ್ರಿ ; 16 ವರ್ಷಗಳ ಬಳಿಕ ಎಂಟು...
24-05-25 04:29 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm