ಬ್ರೇಕಿಂಗ್ ನ್ಯೂಸ್
13-12-20 02:35 pm Mangaluru Correspondent ಕರಾವಳಿ
ಉಳ್ಳಾಲ, ಡಿ.13: ಕುಂಪಲದಲ್ಲಿ ನಡೆಯುತ್ತಿರುವ ತಂಬೂರಿ ತುಳು ಭಜನಾ ಸ್ಪರ್ಧೆಯ ಎರಡನೇ ಸುತ್ತಿನ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗಮಿಸಿದ್ದಾರೆ. ಭಜನಾ ಸ್ಪರ್ಧೆಯಲ್ಲಿ ಭಜಕರೊಂದಿಗೆ ಕುಳಿತ ನಳಿನ್ ಕುಮಾರ್, ಭಜನೆಗೆ ತಾಳ ಹಾಕಿ ಗಮನಸೆಳೆದರು.
ಕುಂಪಲ ಬಾಲಕೃಷ್ಣ ಮಂದಿರದ ನೆರಳಲ್ಲಿ ದ.ಕ. ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ಜಿಲ್ಲಾ ಮಟ್ಟದ ತಂಬೂರಿ ತುಳು ಭಜನಾ ಸ್ಫರ್ಧೆಯ ಎರಡನೇ ಸುತ್ತನ್ನು ಅವರು ಉದ್ಘಾಟಿಸಿ ಮಾತನಾಡಿದರು. ತುಳು ಭಜನೆ ಕೇಳಲೆಂದೇ ರಾಯಚೂರಿನಿಂದ ಇಲ್ಲಿಯವರೆಗೆ ಬಂದಿದ್ದೇನೆ. ಬಾಲಕೃಷ್ಣ ಮಂದಿರದ ಪ್ರತಿಯೊಂದು ಕಾರ್ಯಕ್ರಮಗಳು ಇತಿಹಾಸ ಸೃಷಿಸಲು ಇಲ್ಲಿನ ಸಂಸ್ಕಾರ, ಬದ್ಧತೆ, ಶಿಸ್ತೇ ಕಾರಣವಾಗಿದೆ. ತಂಬೂರಿ ಎಂಬುದೇ ಭಜನೆಯತ್ತ ಆಕರ್ಷಿತವನ್ನಾಗಿಸುವ ಹೆಸರಾಗಿದೆ. ಭಜನೆಗೆ ಭಾವ, ಸಂಗೀತ, ಲಯಗಳ ಅಗತ್ಯವಿರುವುದಿಲ್ಲ. ಹೃದಯದೊಳಗಿನ ಭಕ್ತಿಯ ಭಾವನೆಗಳೇ ಹೊರಬಂದು ಭಜನೆಯಾಗಬೇಕೆಂದರು.


ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಈ ಭಜನಾ ಸ್ಫರ್ಧೆಯು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಭಜನಾ ಮಂಡಳಿ ಮಾಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯಲ್ಲಿ ಪ್ರಸ್ತಾಪನೆ ಇದೆ. ತಕ್ಷಣ ಆ ಪ್ರಸ್ತಾಪಕ್ಕೆ ಸ್ವರೂಪ ಕೊಡುವ ಕಾರ್ಯಕ್ಕೆ ಮುಂದಾಗಲು ಈ ಕಾರ್ಯಕ್ರಮ ಪ್ರೇರಣೆ ನೀಡಿದೆ ಎಂದರು.
ಕಳೆದ ವಾರ ನಡೆದ ಪುರುಷರ ಭಜನಾ ಸ್ಪರ್ಧೆಯಲ್ಲಿ ವಿಜೇತರಾದ ತಂಡದವರಿಗೆ ನಳಿನ್ ಕುಮಾರ್ ಕಟೀಲ್ ಪ್ರಶಸ್ತಿ ವಿತರಿಸಿದರು. ಕಾರ್ಯಕ್ರಮದ ಯಶಸ್ಸಿನ ಮುಖ್ಯ ರೂವಾರಿ ಪ್ರವೀಣ್ ಎಸ್. ಕುಂಪಲ ಅವರನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಅಭಿನಂದಿಸಿದರು.
ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ರಾಜ್ಯ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, MEIL ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮುಖಂಡರಾದ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ವೀಣಾ ಮಂಗಳ, ಚಂದ್ರಹಾಸ್ ಉಳ್ಳಾಲ್, ಉದ್ಯಮಿ ನಿಶಾಂತ್ ಮೊದಲಾದವರು ಇದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಸ್ವಾಗತಿಸಿದರು. ಪ್ರವೀಣ್ ಕುಂಪಲ ನಿರೂಪಿಸಿದರು.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
10-10-26 10:31 pm
HK News Staffer
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿಗೆ ಭರ್ಜರಿ ಜಯ ;...
09-10-26 11:04 pm
ಸರ್ಕಾರಿ ಸಂಸ್ಥೆಯಿಂದ ಕೋಟ್ಯಂತರ ದೇಣಿಗೆ ; ಪಿಣರಾಯಿ...
09-10-26 05:40 pm
Prakash Raj, Dhruv Rathee: SIR ರದ್ದತಿಗೆ ಬೆಂಗಳ...
08-10-26 08:03 pm
10-10-26 09:27 pm
HK News Staffer
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
ಮೂಡುಶೆಡ್ಡೆ ; ಮುಸ್ಲಿಮರ ದಫನಕ್ಕೆ 2 ಎಕರೆ ಪಿಲಿಕುಳದ...
10-10-26 03:21 pm
Nana patekar: ಮಂಗಳೂರು, ಉಡುಪಿಯೊಂದಿಗೆ ನಾನಾ ಪಾಟೇ...
08-10-26 04:30 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm