ಬ್ರೇಕಿಂಗ್ ನ್ಯೂಸ್
07-08-20 07:03 pm Headline Karnataka News Network ಕರಾವಳಿ
ಮಂಗಳೂರು, ಆಗಸ್ಟ್ 7: ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಿಂದಾಗಿ ಮಂಗಳೂರು - ಬೆಂಗಳೂರು ಸಂಚಾರದ ರೈಲ್ವೇ ಮಾರ್ಗದಲ್ಲೂ ಭೂಕುಸಿತ ಸಂಭವಿಸಿದೆ.
ಹಾಸನ - ಮಂಗಳೂರು ವಿಭಾಗದ ಸಕಲೇಶಪುರದಿಂದ ಸುಬ್ರಹ್ಮಣ್ಯ ಮಧ್ಯದ ಹಲವು ಕಡೆ ಭೂಕುಸಿತಗಳಾಗಿವೆ. ದೋಣಿಗಲ್ ಮತ್ತು ಕಡಗರವಳ್ಳಿ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಆಗಿದ್ದು ಅಲ್ಲಿಂದ ಹರಿದು ಬರುವ ಕೆಸರು ನೀರು ಕಡಗರವಳ್ಳಿ ಮೂಲಕ ಹಾದು ಹೋಗುವ ರೈಲ್ವೇ ಹಳಿಗೆ ಬೀಳುತ್ತಿದೆ. ಇದರಿಂದಾಗಿ ರೈಲು ಹಳಿಯ ಉದ್ದಕ್ಕೂ ಒಂದು ಪಾರ್ಶ್ವ ಕುಸಿದಿದೆ. ಎರಡು ಕಡೆ 15 ಮೀಟರ್ ಉದ್ದಕ್ಕೆ ಕುಸಿದು ನಿಂತಿದ್ದು ಅಪಾಯಕ್ಕೀಡಾಗಿದೆ. ಈ ಭಾಗದಲ್ಲಿ ಹಳಿಯ ಅಡಿ ಭಾಗದ ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದೆ. ಸಕಲೇಶಪುರದಿಂದ ಆಗಮಿಸಿದ ತಂತ್ರಜ್ಞರು ಕುಸಿತದ ಅಪಾಯ ಇರುವಲ್ಲಿ ಕಲ್ಲು ಮತ್ತು ಹೊಯಿಗೆ ಚೀಲಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಸಕಲೇಶಪುರದಿಂದ ಗೂಡ್ಸ್ ರೈಲಿನಲ್ಲಿ ಮರಳು ಚೀಲ ಮತ್ತು ಸಲಕರಣೆಗಳನ್ನು ತರಲಾಗಿದ್ದು ಮಣ್ಣು ಬಿದ್ದಿರುವ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.
ಲಾಕ್ ಡೌನ್ ಕಾರಣ ಸ್ಥಗಿತಗೊಂಡ ಮಂಗಳೂರು - ಬೆಂಗಳೂರು ನಡುವಿನ ಪ್ಯಾಸೆಂಜರ್ ರೈಲು ಸಂಚಾರ ಇನ್ನೂ ಆರಂಭಗೊಂಡಿಲ್ಲ. ಹೀಗಾಗಿ ಪ್ಯಾಸೆಂಜರ್ ರೈಲಿಗೆ ಸದ್ಯಕ್ಕೆ ಅಪಾಯ ಇಲ್ಲ. ಕಳೆದ ವರ್ಷವೂ ಇದೇ ರೀತಿ ಹಾಸನ - ಮಂಗಳೂರು ರೈಲು ಹಳಿ ಈ ಭಾಗದಲ್ಲಿ ಕುಸಿದು ಬಿದ್ದಿತ್ತು. ಗುಡ್ಡ ಕುಸಿದು ರೈಲು ಸಂಚಾರ ವ್ಯತ್ಯಯವಾಗಿತ್ತು.
01-08-25 09:09 pm
Bangalore Correspondent
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
ಕೆಆರ್ ಐಡಿಎಲ್ ನಿಗಮವನ್ನೇ ಗುಡಿಸಿ ಹಾಕಿದ ಗುಮಾಸ್ತ !...
01-08-25 11:47 am
ಪಾಕಿಸ್ತಾನದಿಂದಲೇ ಭಾರತವನ್ನು ಸ್ಫೋಟಿಸುತ್ತೇನೆ ! ಗೋ...
31-07-25 11:20 pm
01-08-25 11:44 am
HK News Desk
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
01-08-25 10:02 pm
Mangalore Correspondent
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm