ಬ್ರೇಕಿಂಗ್ ನ್ಯೂಸ್
29-02-24 06:45 pm Mangalore Correspondent ಕರಾವಳಿ
ಮಂಗಳೂರು, ಫೆ.29: ದಕ್ಷಿಣ ಕನ್ನಡ ಜಿಲ್ಲೆಗೆ 2009ರಿಂದ 2023ರ ವರೆಗಿನ ಸಂಸದ ನಳಿನ್ ಕುಮಾರ್ ಅವಧಿಯಲ್ಲಿ ಒಂದು ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಅನುದಾನ ಹರಿದು ಬಂದಿದೆ ಎಂದು ಅವುಗಳ ಅಂಕಿ ಅಂಶ ಸಹಿತ ಕಿರು ಪುಸ್ತಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮುಖಂಡರು ಬಿಡುಗಡೆ ಮಾಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಪುತ್ತಿಲ ಪುಸ್ತಕ ಬಿಡುಗಡೆಗೊಳಿಸಿ, ಸಂಸದ ನಳಿನ್ ಕುಮಾರ್ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಈ ಹಿಂದೆಂದೂ ಕಂಡಿರದಷ್ಟು ಅಭಿವೃದ್ಧಿಯಾಗಿದೆ. ನಾವು ಚುನಾವಣೆ ಹೊತ್ತಿಗೆ ಕೇಂದ್ರ ಸರಕಾರ ಜಿಲ್ಲೆಗೆ ನೀಡಿರುವ ಕೊಡುಗೆ, ಅನುದಾನಗಳ ಕುರಿತು ಜನರಿಗೆ ತಿಳಿಸುವುದು ಜವಾಬ್ದಾರಿ. ಅದನ್ನು ಮಾಡುತ್ತಿದ್ದೇವೆ. ಇಡೀ ಪುಸ್ತಕದಲ್ಲಿ ಎಷ್ಟೆಲ್ಲ ಅನುದಾನ ಬಿಡುಗಡೆ ಆಗಿದೆ ಎನ್ನುವ ಮಾಹಿತಿ ಇದೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಸಂಸದ ನಳಿನ್ ಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಜಿಲ್ಲಾ ಕಾರ್ಯದರ್ಶಿಗಳಾದ ಕಿಶೋರ್ ಪುತ್ತೂರು, ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್ ಉಪಸ್ಥಿತರಿದ್ದರು.
ಹನ್ನೆರಡು ವರ್ಷಗಳ ಹಿಂದೆ ಕಾಮಗಾರಿ ಆಗಿದ್ದ ಬಿಸಿರೋಡ್- ಸುರತ್ಕಲ್ ಹೆದ್ದಾರಿ, ಒಂಬತ್ತು ವರ್ಷಗಳ ಹಿಂದೆ ಪೂರ್ಣಗೊಂಡಿದ್ದ ಕುಂದಾಪುರ- ತಲಪಾಡಿ ರಸ್ತೆಯಿಂದ ಹಿಡಿದು ರಾಷ್ಟ್ರೀಯ ಹೆದ್ದಾರಿಗಳಿಗೆ ಬಿಡುಗಡೆಯಾದ ಅನುದಾನ(1409 ಕೋಟಿ), ಪ್ರಸ್ತಾವಿತ ಕೆಪಿಟಿ ಅಂಡರ್ ಪಾಸ್ (34 ಕೋಟಿ), ನಂತೂರು ವೆಹಿಕಲ್ ಓವರ್ ಪಾಸ್(67 ಕೋಟಿ), ಕುಳೂರಿನಲ್ಲಿ ಷಟ್ಪಥ ಸೇತುವೆ(70 ಕೋಟಿ), ಪೆರಿಯಶಾಂತಿಯಿಂದ ಬಂಟ್ವಾಳದ ಬಿಸಿ ರೋಡ್ ವರೆಗಿನ ಹೆದ್ದಾರಿ (1660 ಕೋಟಿ), ಅಡ್ಡಹೊಳೆಯಿಂದ ಪೆರಿಯಶಾಂತಿ ವರೆಗೆ ಚತುಷ್ಪಥ ರಸ್ತೆ ನಿರ್ಮಾಣ (544 ಕೋಟಿ), ಬಿಕರ್ನಕಟ್ಟೆಯಿಂದ ಕಾರ್ಕಳದ ಸಾಣೂರು ವರೆಗೆ (888 ಕೋಟಿ) ಹೀಗೆ ಹಲವು ಪ್ರಸ್ತಾವಿತ ಯೋಜನೆಗಳಿಗೆ 4711 ಕೋಟಿ ವೆಚ್ಚದ ಕಾಮಗಾರಿಗಳ ಪಟ್ಟಿ ಇದೆ.
ನವ ಮಂಗಳೂರು ಬಂದರಿನಲ್ಲಿ ಯಾಂತ್ರೀಕರಣ, ಬರ್ತ್ ನಿರ್ಮಾಣಕ್ಕೆ 4277 ಕೋಟಿ, ಬಂದರಿನಲ್ಲಿ ಪ್ರಸ್ತಾವಿತ ಗ್ಯಾಸ್ ಟರ್ಮಿನಲ್, ಅಡಿಬಲ್ ಆಯಿಲ್ ಸಂಗ್ರಹ ಟ್ಯಾಂಕ್ ಸೇರಿ ಕಾಮಗಾರಿಗಳಿಗೆ 800 ಕೋಟಿ ಯೋಜನೆಯಿದೆ. ಸಾಗರಮಾಲ ಯೋಜನೆಯಡಿ ಕುಳಾಯಿ ಜೆಟ್ಟಿ 196 ಕೋಟಿ, ಹಳೆ ಬಂದರಿನಲ್ಲಿ ಕೋಸ್ಟಲ್ ಬರ್ತ್ 65 ಕೋಟಿ, ಡ್ರೆಜ್ಜಿಂಗ್ ಕಾಮಗಾರಿಗೆ 29 ಕೋಟಿ ಸೇರಿ 290 ಕೋಟಿ ಮೊತ್ತದ ಮಂಜೂರಾದ ಯೋಜನೆ ತೋರಿಸಿದ್ದಾರೆ.
ಮೈಸೂರು – ಮಂಗಳೂರು ರೈಲು ಹಳಿ ವಿದ್ಯುದೀಕರಣ, ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಮೇಲ್ದರ್ಜೆಗೆ ಸೇರಿ 1455 ಕೋಟಿ ಮೊತ್ತದ ಯೋಜನೆ, ಎಂಆರ್ ಪಿಎಲ್ ವಿಸ್ತರಣಾ ಯೋಜನೆಗೆ 18024 ಕೋಟಿ, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಗೆ ಒಟ್ಟು 2667 ಕೋಟಿ. ಮಂಗಳೂರು ಏರ್ಪೋರ್ಟ್ ಅಭಿವೃದ್ಧಿಗೆ 5650 ಕೋಟಿ, ಗೇಲ್ ಗ್ಯಾಸ್ ಪೈಪ್ ಲೈನ್ 3 ಸಾವಿರ ಕೋಟಿ, ಗೇಲ್ ಗ್ಯಾಸ್ ಡಿಸ್ಟ್ರಿಬ್ಯೂಶನ್ 1947 ಕೋಟಿ ಹೀಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಮತ್ತು ಸರಕಾರದ ಹೂಡಿಕೆಯಲ್ಲಿ ಏನೆಲ್ಲ ಅಭಿವೃದ್ಧಿ ಕೆಲಸಗಳಾಗುತ್ತಿವೆಯೋ ಅವನ್ನೆಲ್ಲ ಸಂಸದರದ್ದೇ ಸಾಧನೆಯೆಂದು ಪುಸ್ತಕದಲ್ಲಿ ದಾಖಲಿಸಿ ಬಿಡುಗಡೆ ಮಾಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಕಂಪನಿಗೆ ವಹಿಸಿದ್ದು, ಅಲ್ಲೀಗ ಹಣದ ಹೂಡಿಕೆಯಾಗುತ್ತಿದೆ. ಉಳಿದಂತೆ ಗೈಲ್ ಪೈಪ್ ಲೈನ್ ಕೇರಳದ ಕೊಚ್ಚಿಯಿಂದ ಮಂಗಳೂರು ಮೂಲಕ ಬೆಂಗಳೂರು ಸಂಪರ್ಕ ಮಾಡುತ್ತದೆ. ಅದೊಂದು ದೂರಗಾಮಿ ಯೋಜನೆಯಾಗಿದ್ದು, ಹಲವು ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ. ಕೇಂದ್ರ ಮತ್ತು ರಾಜ್ಯದ ಜಂಟಿ ಸಹಭಾಗಿತ್ವ ಇರುವ ಆಯುಷ್ಮಾನ್ ಯೋಜನೆಯಡಿ 648 ಕೋಟಿ ಬಿಡುಗಡೆಯಾಗಿದ್ದೂ ಸಂಸದರ ಸಾಧನೆಯೆಂದು ಪುಸ್ತಕದಲ್ಲಿ ತೋರಿಸಲಾಗಿದೆ. ಸಿಎಸ್ ಆರ್ ಫಂಡ್ ನಲ್ಲಿ ಅಭಿವೃದ್ಧಿ ಮಾಡಿರುವ ಲೇಡಿಗೋಷನ್ ಮತ್ತು ವೆನ್ಲಾಕ್ ಆಸ್ಪತ್ರೆಯ ಕಟ್ಟಡದ ನವೀಕರಣ ಕಾಮಗಾರಿಯನ್ನೂ ಸಂಸದರ ಖಾತೆಗೆ ಹಾಕಲಾಗಿದೆ.
ಕೇಂದ್ರ ಸರಕಾರದ ಪಿಎಂ ಕಿಸಾನ್ ಯೋಜನೆಯಡಿ ಕೊಟ್ಟಿರುವ ದುಡ್ಡು 522 ಕೋಟಿ, ಜನರೇ ಸಾಲ ಪಡೆದು ಬ್ಯಾಂಕಿಗೆ ಮತ್ತೆ ಕಟ್ಟುವ ಮುದ್ರಾ ಸಾಲ ಯೋಜನೆ 3977 ಕೋಟಿ, ಪಿಎಂ ಆವಾಸ್ ಯೋಜನೆ 194 ಕೋಟಿ, ಕೃಷಿ ಬೆಳೆ ವಿಮಾ ಯೋಜನೆ 374 ಕೋಟಿ, ಹೀಗೆ ಎಲ್ಲವನ್ನೂ ಪುಸ್ತಕದಲ್ಲಿ ಸಂಸದರ 15 ವರ್ಷಗಳ ಅವಧಿಯಲ್ಲಾದ ಕೇಂದ್ರ ಸರಕಾರದ ಕೊಡುಗೆಯೆಂದು ತೋರಿಸಿದ್ದಾರೆ. ಮಂಗಳೂರು ಸ್ಪೆಷಲ್ ಇಕನಾಮಿಕ್ ಝೋನ್ 16962 ಕೋಟಿ, ಸ್ವಸಹಾಯ ಸಂಘಗಳಿಗೆ ನೀಡಿರುವ ಸಾಲ 3911 ಕೋಟಿಯನ್ನೂ ಪುಸ್ತಕದಲ್ಲಿ ದಾಖಲಿಸಲಾಗಿದೆ. ಈ ಪುಸ್ತಕವನ್ನು ನಿವೃತ್ತ ಸಂಸ್ಕೃತ ವಿದ್ವಾನ್ ಸೋಂದಾ ಭಾಸ್ಕರ ಭಟ್ ತಯಾರಿಸಿದ್ದು ಅವರೇ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ.
Nalin kateel highlights ongoing development works, unveils book on 15 years' achievements as MP in Mangalore. MP Nain Kumar Kateel gave information on development works in progress under his constituency and also unveiled a book on his achievements in the last 15 years as an MP.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm