ಬ್ರೇಕಿಂಗ್ ನ್ಯೂಸ್
22-02-24 01:08 pm Mangalore Correspondent ಕರಾವಳಿ
ಮಂಗಳೂರು, ಫೆ.22: ರಾಜ್ಯದ ಕರಾವಳಿಯ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಮೂಲದ ಬೋಟ್ ಪತ್ತೆಯಾಗಿದ್ದು, ಮಂಗಳೂರಿನ ಮೀನುಗಾರರು ಅದರ ಫೋಟೊ, ವಿಡಿಯೋ ಸೆರೆಹಿಡಿದು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
BVKV5 ಹೆಸರಿನ ಬೋಟ್ ಇದಾಗಿದ್ದು, ಚೀನಾದ ಕೆಂಪು ಬಾವುಟವನ್ನು ಹಾರಿಸಿಕೊಂಡಿದೆ. ಬೋಟ್ ನೋಡಿದ ಮಂಗಳೂರಿನ ಮೀನುಗಾರರು ಚೀನಾ ಬೋಟ್ ಎಂಬ ಶಂಕೆಯಲ್ಲಿ ಫೋಟೋ ಸೆರೆಹಿಡಿದಿದ್ದಾರೆ. ಅಲ್ಲದೆ, ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಪಡೆಯ ಗಮನಕ್ಕೆ ತಂದಿದ್ದಾರೆ. ಮೀನುಗಾರರ ಮಾಹಿತಿ ಪ್ರಕಾರ, ಇದನ್ನು ಕುಮಟಾದಿಂದ ಅಂದಾಜು 200 ಕಿಮೀ ದೂರದ ಆಳ ಸಮುದ್ರದಲ್ಲಿ ಸೆರೆಹಿಡಿಯಲಾಗಿದೆ. ಚೀನಾ ಬೋಟಿನವರು ರಾತ್ರಿ ವೇಳೆ ನಿಷೇಧಿತ ಲೈಟ್ ಫಿಶಿಂಗನ್ನೂ ನಡೆಸುತ್ತಿದ್ದರು ಎಂದವರು ತಿಳಿಸಿದ್ದಾರೆ. ಈ ವಿಡಿಯೋವನ್ನು ಮೂರು ದಿನಗಳ ಹಿಂದೆ ತೆಗೆದಿದ್ದಾರೆ ಎನ್ನಲಾಗಿದೆ.
ಬೋಟ್ ಬಗ್ಗೆ ಇಂಟೆಲಿಜೆನ್ಸ್ ಮೂಲಕ ಮಾಹಿತಿ ಪಡೆದಾಗ, ಅದು ಚೀನಾದ್ದೇ ಬೋಟ್ ಎಂದು ಖಾತರಿಯಾಗಿದೆ. ಚೀನಾದ ಫುಝು ಎನ್ನುವ ಹೆಸರಿನ ಬಂದರಿನಲ್ಲಿ ಬೋಟ್ ರಿಜಿಸ್ಟರ್ ಆಗಿದ್ದು, 25 ಮಂದಿಯಷ್ಟು ಸಿಬಂದಿ ಇದ್ದಾರೆ. ಬೋಟಿನ ಫ್ಲಾಗ್ ಚೀನಾದ್ದೇ ಎಂದು ಖಚಿತಪಡಿಸಲಾಗಿದೆ. ಬೋಟ್ ಫು ಯುವಾನ್ ಯು 676 ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ.
ಭಾರತ ಜಲಪ್ರದೇಶಕ್ಕೆ ಅತಿಕ್ರಮಣ
ಸಾಮಾನ್ಯವಾಗಿ ಹೊರದೇಶದ ಯಾವುದೇ ಬೋಟುಗಳಿಗೆ ಭಾರತೀಯ ಜಲಪ್ರದೇಶ ವ್ಯಾಪ್ತಿಯ ತೀರದಿಂದ 200 ಕಿಮೀ ಒಳಗೆ ಬರಲು ಅವಕಾಶ ಇರುವುದಿಲ್ಲ. ಅದರಲ್ಲೂ ಶತ್ರು ರಾಷ್ಟ್ರ ಚೀನಾದ ಬೋಟ್ ಸೇನೆಯ ಕಣ್ಣು ತಪ್ಪಿಸಿ ಭಾರತದ ಸಮುದ್ರ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವುದು ದೇಶದ ಭದ್ರತೆಗೆ ಸವಾಲಾಗಿದೆ. ಕಾರವಾರದಲ್ಲಿ ನೌಕಾಪಡೆಯ ಸೀಬರ್ಡ್ ನೆಲೆ ಇರುವುದರಿಂದ ಅದರ ಪರಿಸರದಲ್ಲಿಯೇ ಈ ಬೋಟ್ ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು, ಚೀನಾ ಈ ಬೋಟ್ ಮೂಲಕ ಗೂಢಚಾರಿಕೆ ನಡೆಸುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ. ಬೋಟ್ ಪತ್ತೆ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪಡೆ ಅಲರ್ಟ್ ಆಗಿದ್ದು, ಹುಡುಕಾಟದಲ್ಲಿ ತೊಡಗಿದೆ.
ತನಿಖೆಗಿಳಿದ ಕರಾವಳಿ ಪೊಲೀಸ್ ಪಡೆ
ಚೀನಾ ಬೋಟ್ ಪತ್ತೆ ಹಿನ್ನೆಲೆಯಲ್ಲಿ ಕರಾವಳಿ ಪೊಲೀಸ್ ಪಡೆ ಎಲರ್ಟ್ ಆಗಿದ್ದು, ತನಿಖೆ ಆರಂಭಿಸಿದ್ದಾರೆ. ಮೀನುಗಾರರಿಂದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಕುಮಟಾದಿಂದ ತೆರಳಿದ್ದ ಬೋಟಿನಲ್ಲಿದ್ದ ಮಂಗಳೂರು ಮೂಲದ ಮೀನುಗಾರರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎನ್ನುವ ಮಾಹಿತಿಯಿದೆ. ತನಿಖೆಗೆ ಹೊನ್ನಾವರ ಕರಾವಳಿ ಪೊಲೀಸ್ ಪಡೆ ಇನ್ಸ್ ಪೆಕ್ಟರ್ ವಿಕ್ಟರ್ ಸೈಮನ್ ಅವರನ್ನು ನೇಮಿಸಲಾಗಿದೆ.
China baot BVKV5 with flag found near Kumta near Honnavar over illegal fishing, coastal police on high alert. Honnavar coastal Inspector Victor Simon is now investigating the case of China illegal boat.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm