ಬ್ರೇಕಿಂಗ್ ನ್ಯೂಸ್
17-02-24 07:50 pm Mangalore Correspondent ಕರಾವಳಿ
ಮಂಗಳೂರು, ಫೆ.17: ನಾನು ಮುತ್ತಿಗೆ ಹಾಕಿದವರನ್ನು ನೋಡಿಲ್ಲ. ನಾನು ಬರೋದಕ್ಕೆ ಮೊದಲೇ ಪ್ರತಿಭಟನೆ ನಡೆಸಿದ್ದಾರೆ. ಹಾಗಾಗಿ ಆ ಮುತ್ತಿಗೆ ನನಗೆ ಆಗಿರೋದಲ್ಲ. ಅವರು ಬೇರೆ ಯಾರಿಗೋ ಮುತ್ತಿಗೆ ಹಾಕಿರಬಹುದು. ನನಗೇ ಆಗುತ್ತಿದರೆ ನನ್ನ ಕಾರಿಗೆ ಮುತ್ತಿಗೆ ಹಾಕುತ್ತಿದ್ರು.. ಹೀಗೆಂದು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಮುತ್ತಿಗೆ ಯತ್ನವನ್ನು ಸಿಎಂ ಸಿದ್ದರಾಮಯ್ಯ ಛೇಡಿಸಿದ್ದಾರೆ.
ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ಕೇಳಿದಾಗ ಸಿದ್ದರಾಮಯ್ಯ ಮೇಲಿನಂತೆ ಉತ್ತರಿಸಿದರು. ಬಜೆಟಲ್ಲಿ ಮುಸ್ಲಿಮರಿಗೆ ಹೆಚ್ಚು ನೀಡಿದ್ದೀರಂತೆ ಎಂದು ಕೇಳಿದ್ದಕ್ಕೆ, ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಪಾಯಿಂಟ್ ಎಂಟರಷ್ಟು ಮಾತ್ರ ನೀಡಿದ್ದೇವೆ. ಬಿಜೆಪಿಯವರಿಗೆ ಮುಸ್ಲಿಮರನ್ನು ಕಂಡ್ರೆ ಆಗೋದಿಲ್ಲ. ಹಾಗಾಗಿ ಅವರಿಗೆ ಏನು ಕೊಟ್ರೂ ಆಗೋದಿಲ್ಲ. ಅಲ್ಪಸಂಖ್ಯಾತರು ಒಟ್ಟು ಜನಸಂಖ್ಯೆಯ ಎಷ್ಟಿದ್ದಾರೆ ?ಅವರಿಗೆ ನೀಡಿದ ಅನುದಾನ ಏನು ಎಂದು ಲೆಕ್ಕ ಹಾಕಿ ಅಂತ ಹೇಳಿದ್ದಾರೆ.
ಬಜೆಟ್ ನಲ್ಲಿ ಮೀನುಗಾರರಿಗೆ ಬಹಳಷ್ಟು ಕೊಟ್ಟಿದ್ದೇವೆ. ಮೊದಲ ಬಾರಿ ಬೋಟ್ ಅಂಬ್ಯುಲೆನ್ಸ್ ನೀಡಿದ್ದೇವೆ. ಮೀನುಗಾರರಿಗೆ ನೀಡುತ್ತಿದ್ದ ಅನುದಾನವನ್ನು ಮೂರೂವರೆ ಸಾವಿರಕ್ಕೆ ಏರಿಸಿದ್ದೇವೆ. ಮೀನುಗಾರರಿಗೆ ಬಜೆಟ್ ನಲ್ಲಿ ಬಂಪರ್ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯಿಂದ ಧರ್ಮ ಅವಹೇಳನ ವಿಚಾರದಲ್ಲಿ ಕೇಳಿದ್ದಕ್ಕೆ, ಬಿಜೆಪಿ ಈ ಬಗ್ಗೆ ಹೋರಾಟ ಮಾಡಲಿ, ಯಾರ ತಕರಾರು ಇರೋದಿಲ್ಲ. ಘಟನೆಯಲ್ಲಿ ಕೆಲವರ ವಿರುದ್ಧ ಎಫ್ಐಆರ್ ಆಗಿದೆ. ತನಿಖೆಯಲ್ಲಿ ಏನು ರಿಪೋರ್ಟ್ ಬರುತ್ತೆ ನೋಡೋಣ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಕಮಲನಾಥ್ ಬಿಜೆಪಿ ಸೇರ್ಪಡೆ ಕುರಿತ ಪ್ರಶ್ನೆಗೆ, ಬಿಜೆಪಿ ಸೇರ್ಪಡೆ ಅವರ ವೈಯಕ್ತಿಕ. ಬಿಜೆಪಿ ಬೆದರಿಸಿ ಅಪರೇಷನ್ ಕಮಲ ಮಾಡುತ್ತಾರೆ. ನಮ್ಮ MLA ಗಳಿಗೆ 50 ಕೋಟಿ ನೀಡುತ್ತೇವೆ ಅಂದಿದ್ರು. ಆಪರೇಷನ್ ಕಮಲ ಯಡಿಯೂರಪ್ಪ ಕಾಲದಲ್ಲಿ ಶುರುವಾಗಿದ್ದು. ಬಿಜೆಪಿ ಸೇರದೇ ಹೋದ್ರೆ ಇಡಿ ಮೂಲಕ ಹೆದರಿಸುತ್ತಾರೆ ಎಂದರು.
Mangalore BJP Protest, No gherao by BJP to my car says CM Siddaramaiah, may be it was someone elses car. Bjp workers held protest by showing black flag near bondel in Mangalore while cm and kharge was on thier way to adyar.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm