ಬ್ರೇಕಿಂಗ್ ನ್ಯೂಸ್
17-02-24 05:56 pm Mangalore Correspondent ಕರಾವಳಿ
ಮಂಗಳೂರು, ಫೆ.17: ಸಂಸತ್ತಿನಲ್ಲಿ ನಮ್ಮ ಶಕ್ತಿ ಕಡಿಮೆಯಾಯ್ತು ಅಂದ್ರೆ ಮೋದಿ ಸರ್ವಾಧಿಕಾರಿ ಆಗ್ತಾನೆ, ಮುಂದೆ ಚುನಾವಣೆಯೇ ಆಗಲ್ಲ. ಎಲ್ಲದಕ್ಕೂ ಕಂಟ್ರೋಲ್ ತೆಗೋತಿದ್ದಾನೆ, ಮೀಡಿಯಾ, ಕೋರ್ಟ್, ಇಡಿ, ವಿಜಿಲೆನ್ಸ್ ಎಲ್ಲವನ್ನೂ ನಿಯಂತ್ರಿಸಿದ್ದು ಪೂರ್ತಿ ಅಧಿಕಾರ ತನ್ನಲ್ಲೇ ಇರಬೇಕೆಂದು ಮಾಡುತ್ತಿದ್ದಾನೆ. ಅವನಿಗೆ ಇನ್ನಷ್ಟು ಶಕ್ತಿಯನ್ನು ಕೊಡಬೇಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಪ್ರಚಾರದ ನಿಮಿತ್ತ ಕರಾವಳಿಯಲ್ಲಿ ಮೊದಲ ಬಾರಿಗೆ ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಖರ್ಗೆ ಮಾತನಾಡಿದರು. ಕಾಂಗ್ರೆಸ್ ಕೊಟ್ಟ ಯೋಜನೆಗಳಿಂದ ಲಾಭ ಪಡೆದವರು ಈಗ ಭಗವಾಧ್ವಜ ಹಿಡಿದು ನಿಂತಿದ್ದಾರೆ. ಕರಾವಳಿಯಲ್ಲಿ ಉಳುವವನೇ ಹೊಲದೊಡೆಯ ಎಂಬ ಕಾನೂನು ತಂದಿದ್ದರಿಂದ ಎಷ್ಟೋ ಬಡ ವರ್ಗದವರಿದೆ ಭೂಮಿಯ ಹಕ್ಕು ಸಿಕ್ಕಿತ್ತು. ಕಾಂಗ್ರೆಸ್ ಮಾಡಿದ ಉಚಿತ ಶಿಕ್ಷಣದ ಕಾರಣದಿಂದ ಜನರು ಕಲಿತು ಮುಂದೆ ಬಂದಿದ್ದಾರೆ. ಆದರೆ ಈಗಿನ ಜನರು ಇತಿಹಾಸವನ್ನು ಮರೆತಿದ್ದಾರೆ. ಕಾಂಗ್ರೆಸ್ ಮಾಡಿದ ಕೆಲಸವನ್ನು ಮರೆತು ಮೋದಿ ಮೋದಿ ಎನ್ನುತ್ತಿದ್ದಾರೆ. ಮೋದಿ ನಿಮಗೆ ಜಮೀನು ಕೊಟ್ನಾ.. ಮೋದಿ ಫುಡ್ ಸೆಕ್ಯುರಿಟಿ ಏಕ್ಟ್ ತಂದಿದ್ನಾ.. ಎಲ್ಲರಿಗೂ ಉದ್ಯೋಗ ಕೊಡ್ತೀವಿ ಎಂದ್ರಲ್ಲಾ.. ಯಾರಿಗೆ ಉದ್ಯೋಗ ಸಿಕ್ಕಿದೆ ಹೇಳಿ. ಹಾಗಿದ್ದರೂ ಮೋದಿ ಮೋದಿ ಘೋಷಣೆ ಕೂಗು, ಇಷ್ಟೊಂದು ಬಿಜೆಪಿ ಝಂಡಾಗಳು ಯಾಕೆ ಅಡ್ಡಾಡುತ್ತಿವೆ ಎಂದು ಪ್ರಶ್ನಿಸಿದರು.
ಆರು ಗ್ಯಾರಂಟಿಗೆ ಬಜೆಟಲ್ಲಿ ಮತ್ತೆ ದುಡ್ಡು ಇಟ್ಟು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವೆ. ನರೇಗಾ ಯೋಜನೆ, ಉಚಿತ ಶಿಕ್ಷಣ, ಆಹಾರ ಭದ್ರತೆ ಕಾಯ್ದೆ ತಂದಿದ್ದು ಕಾಂಗ್ರೆಸ್. ಜನರಿಗೆ ಉದ್ಯೋಗ ಕೊಡಿಸಿದ್ದು ಕಾಂಗ್ರೆಸ್. ಹಾಗಿದ್ರೂ ಮುಂಜಾನೆದ್ದು ಕಾಂಗ್ರೆಸಿಗೇ ಬೈಯುತ್ತಾರೆ. ನಮ್ಮ ಜಮೀನು, ನಮ್ಮದೇ ಶಿಕ್ಷಣ ಪಡೆದು ಬೈತಾರೆ, ಯಾರು ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಾರೋ, ಅತಿ ಹೆಚ್ಚು ದುಡ್ಡಿದೆಯೋ ಅವರು ಬಡವರನ್ನು ತುಳಿದು ಅಧಿಕಾರಕ್ಕೆ ಬರುತ್ತಾರೆ ಎಂಬುದನ್ನು ಜನರು ನೆನಪಿಡಬೇಕು.
ಹಿಂದೆ ಶ್ರೀನಿವಾಸ ಮಲ್ಯ ಸಂಸದರಾಗಿದ್ದಾಗ ನೆಹರು ಕಾಲದಲ್ಲಿ ಎಲ್ಲ ಇಲಾಖೆಗೆ ಹೋಗಿ ಈ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದಾರೆ. ಈ ಭಾಗದಲ್ಲಿ ನೂರಾರು ಸೇತುವೆ ಮಾಡಿದ್ದು ಕಾಂಗ್ರೆಸ್ ಕಾಲದಲ್ಲಿ. ಪೋರ್ಟ್ ಮಾಡಿದ್ದು ಕಾಂಗ್ರೆಸ್. ಏರ್ಪೋರ್ಟ್ ಮಾಡಿದ್ದು ಕಾಂಗ್ರೆಸ್. ಆದರೆ ಮೋದಿ ಬಂದು ಇಲ್ಲಿನ ಬ್ಯಾಂಕುಗಳನ್ನೆಲ್ಲ ತೆಗೆದು ದೇನಾ, ಲೇನಾ ಅಂದ್ರೆ ಸಾಲದಲ್ಲಿ ಮುಳುಗಿರುವ ಬ್ಯಾಂಕುಗಳಿಗೆ ಸೇರಿಸಿಬಿಟ್ಟಿದ್ದಾನೆ. ಕರ್ನಾಟಕದ ಗ್ಯಾರಂಟಿ ಸ್ಕೀಮ್ ನಕಲಿ ಮಾಡಿ ಮೋದಿ ಈಗ ಗ್ಯಾರಂಟಿ ಹೇಳಲು ಹೊರಟಿದ್ದಾರೆ. ನಾವು ಕಾಂಗ್ರೆಸ್ ಗ್ಯಾರಂಟಿ ಹೇಳಿದ್ದೇವೆ, ಸಿದ್ದರಾಮಯ್ಯ ಗ್ಯಾರಂಟಿ ಎಂದಿಲ್ಲ. ಈಗ ಮೋದಿ ಗ್ಯಾರಂಟಿ ಶುರು ಮಾಡಿದ್ದಾರೆ. ಬಿಜೆಪಿ ಗ್ಯಾರಂಟಿ ಅನ್ನುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ದೇವೇಗೌಡರಿಗೆ 91 ವರ್ಷಕ್ಕೆ ಕಾಲಿಡುತ್ತಿದ್ದೀರಿ. ನೀವು ಯಾಕೆ ಮೋದಿ ತೊಡೆಯಲ್ಲಿ ಕುಂತೀರಿ ಅಂತ ಕೇಳಿದ್ದೆ. ಎದುರಲ್ಲಿ ಮೋದಿ ಇರುವಾಗಲೇ ಕೇಳಿದ್ದು. ಮೋದಿ ನಗುತ್ತಾ ಇದ್ದರು. ನಿಮ್ಮ ಪಕ್ಷದಲ್ಲೇ ಸೆಕ್ಯುಲರ್ ಪಾರ್ಟಿ ಅಂತ ಹೆಸರಿದ್ಯಲ್ಲ ಎಂದೆ. ಸಿದ್ದರಾಮಯ್ಯ ಅಂತೆಲ್ಲ ಹೇಳತೊಡಗಿದರು. ಯಾರಿದ್ದರೂ ಯುದ್ಧ ಮಾಡಿದ ಮೇಲೆ ಒಂದೋ ನಾನು, ಇಲ್ಲಾ ನೀನು ಗೆಲ್ಲಲೇಬೇಕು ತಾನೇ ಎಂದು ಹೇಳಿದೆ. ಗೌಡ್ರು ಕೇಳಲಿಲ್ಲ. ಈಗಂತೂ ಅವರು ಒಂದಾಗಿದ್ದು ಜೊತೆ ಸೇರಿ ಮುದ್ದಾಡುತ್ತಿದ್ದಾರೆ.
ಕರ್ನಾಟಕದ ಗ್ಯಾರಂಟಿಗಳು, ಬಜೆಟ್ ನೋಡಿದ್ಮೇಲೆ ಕರ್ನಾಟಕದಲ್ಲಿ 20 ಸೀಟು ಗೆಲ್ಲುತ್ತೇವೆಂದು ನಂಬಿಕೆ ಹುಟ್ಟಿದೆ. ಆದರೆ ಇದನ್ನು ಜಾರಿಗೆ ತರಬೇಕಾದ್ದು ನೀವು. ಕಾರ್ಯಕರ್ತರು ನಮ್ಮ ಯೋಜನೆಗಳನ್ನು ಜನರಿಗೆ ತಿಳಿಸಿ ಮತಗಳನ್ನು ಬಾಚಬೇಕಾಗಿದೆ ಎಂದು ಹೇಳಿದ ಖರ್ಗೆ, ಮೋದಿ ಮೊನ್ನೆ ನಮ್ಮ ಪಕ್ಷದ ಅಕೌಂಟನ್ನೂ ಸೀಜ್ ಮಾಡಿದ್ದರು. ಕಾರ್ಯಕರ್ತರು ರೊಚ್ಚಿಗೆದ್ದಾಗ ಮರುದಿವಸ ಅಕೌಂಟನ್ನು ರಿಲೀಸ್ ಮಾಡಿದ್ದರು. ಜನರು ಕೊಟ್ಟ ದುಡ್ಡು ಅದು. ಅದಕ್ಕೂ ಮೋದಿ ಕೈಹಾಕಿದ್ದಾನೆ. 98 ಕೋಟಿ ಯೂತ್ ಕಾಂಗ್ರೆಸಲ್ಲಿತ್ತು. ಸಣ್ಣ ಪುಟ್ಟ ದುಡ್ಡನ್ನೂ ಕೈಹಾಕುತ್ತಿದ್ದಾರೆ. ನೀವು 6 ಸಾವಿರ ಕೋಟಿ ರೂ. ಇದ್ದ ಬಾಂಡನ್ನು ತೆಗೆದಿದ್ದೀರಿ.. ಇದ್ದ ಪಬ್ಲಿಕ್ ಸೆಕ್ಟರ್ ಸಂಸ್ಥೆಗಳನ್ನೆಲ್ಲ ಕ್ಲೋಸ್ ಮಾಡುತ್ತಿದ್ದೀರಿ ನೀವು. ಹೀಗೆಲ್ಲ ಆದರೂ ಇಲ್ಲಿ ನೀವೆಲ್ಲ ಕುಣಿಯುತ್ತೀರಿ. ದೇಶದ ಅಭಿವೃದ್ಧಿಗೆ ನಿಮ್ಮದು ಏನಿದೆ ಕಾಂಟ್ರಿಬ್ಯುಶನ್ ಅಂತ ಜನರು ಕೇಳಬೇಕಲ್ಲಾ.
ಬಡವರು, ಹಿಂದುಳಿದವರು ಎಲ್ಲರಿಗೂ ಓಟಿನ ಅಧಿಕಾರ ಸಿಕ್ಕಿದ್ದು ಕಾಂಗ್ರೆಸ್ ಕಾಲದಲ್ಲಿ. ಅಂಬೇಡ್ಕರ್ ಸಂವಿಧಾನದಿಂದ ಹೆಣ್ಮಕ್ಕಳಿಗೆ ಅಧಿಕಾರ ಸಿಕ್ಕಿದೆ. ಇವರು ಹೇಳಿದ ಪ್ರಕಾರ ಹೋಗುತ್ತಿದ್ದರೆ, ದೇಶದಲ್ಲಿ ಮನುಸ್ಮೃತಿ ಬರುತ್ತಿತ್ತು. ಮುಂದುವರಿದ ದೇಶಗಳಲ್ಲೂ ಹೆಣ್ಮಕ್ಕಳಿಗೆ ಓಟಿನ ಅಧಿಕಾರ ಇರಲಿಲ್ಲ. ಅಮೆರಿಕ, ಜಪಾನ್, ಇಂಗ್ಲೆಂಡ್, ಜರ್ಮನಿ ಎಲ್ಲ, ನಾವು ಕೊಟ್ಟ ಮೇಲೆ ಹೆಣ್ಮಕ್ಕಳಿಗೆ ಅಧಿಕಾರ ಕೊಟ್ಟಿರೋದು. ಹಾಗಾಗಿ ಕಾಂಗ್ರೆಸ್ ಈ ದೇಶದ ಭವಿಷ್ಯ, ಈ ದೇಶದ ಇತಿಹಾಸ. ಅದನ್ನು ಮರೆಯಬೇಡಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
Pm Modi dictatorship will come to an end if congress gets majority in MP electios, Mallikarjun Kharge in Mangalore Congress rally. if Modi comes to power he will have a dictatorship rule all the Machineries of India are already under his control.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm