ಬ್ರೇಕಿಂಗ್ ನ್ಯೂಸ್
14-02-24 04:35 pm Mangalore Correspondent ಕರಾವಳಿ
ಮಂಗಳೂರು, ಫೆ.14: ಶಾಸಕ ವೇದವ್ಯಾಸ ಕಾಮತ್ ಬೀದಿಯಲ್ಲಿ ನಿಂತು ಗೂಂಡಾಗಳಂತೆ ವರ್ತಿಸಿದ್ದು, ವಿದ್ಯಾದೇಗುಲಕ್ಕೆ ಅವಮಾನ ಮಾಡಿದ್ದಾರೆ. ಶಿಕ್ಷಕರನ್ನು ಹೊರಗೆ ಕರೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಕಾಂಗ್ರೆಸ್ ಸಹಿಸೋದಿಲ್ಲ. ಶಾಸಕ ತನ್ನ ಜವಾಬ್ದಾರಿ ಮರೆತು ಗೂಂಡಾ ರೀತಿ ವರ್ತನೆ ಮಾಡಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೆ, ಶಾಸಕ ಸ್ಥಾನದಿಂದ ಅನರ್ಹ ಮಾಡುವಂತೆ ಸ್ಪೀಕರ್ ಗೆ ದೂರು ನೀಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್ಸಿ ಐವಾನ್ ಡಿಸೋಜ ಹೇಳಿದ್ದಾರೆ.
ಜೆರೋಸಾ ಶಾಲೆಯ ಶಿಕ್ಷಕಿಯೊಬ್ಬರು ಹಿಂದು ಧರ್ಮದ ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಿಸಿ ಶಾಸಕ ವೇದವ್ಯಾಸ ಕಾಮತ್ ಶಾಲೆಯ ಹೊರಗೆ ನಿಂತು ಪ್ರತಿಭಟನೆ ನಡೆಸಿದ್ದನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಟಿ ಕರೆದು ವಾಗ್ದಾಳಿ ನಡೆಸಿದ್ದಾರೆ. ಶಾಸಕ ಭರತ್ ಶೆಟ್ಟಿ ಕ್ರಿಸ್ತಿಯನ್ ಶಾಲೆಗಳಿಗೆ ಬಹಿಷ್ಕಾರ ಹಾಕಿ ಎನ್ನುತ್ತಾರೆ. ವೇದವ್ಯಾಸ ಕಾಮತ್ ನನಗೆ ಅಸೆಂಬ್ಲಿ ಮುಖ್ಯ ಅಲ್ಲ, ಪ್ರಾಣ ಹೋದರೂ ಈ ಶಾಲೆಯನ್ನು ಬಿಡೋದಿಲ್ಲ ಎಂದು ಹೇಳುತ್ತಾರೆ. ಇವರಿಗೆಲ್ಲ ಶಾಸಕನ ಜವಾಬ್ದಾರಿ ಏನೆಂದು ತಿಳಿದಿದೆಯಾ.. ಇವರಿಗೆ ಅಧಿಕಾರಿಗಳನ್ನು ಜೊತೆಗೊಯ್ದು ಶಾಲೆಯ ಒಳಗೆ ಬಂದು ಚರ್ಚಿಸಬಹುದಿತ್ತಲ್ಲಾ.. ಬೀದಿಯಲ್ಲಿ ನಿಮ್ಮನ್ನು ನಿಲ್ಲುವಂತೆ ಮಾಡಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಮಂಗಳೂರಿನ ಗೌರವಕ್ಕೆ ಧಕ್ಕೆಯಾಗಿದೆ
ಶಾಸಕರ ವರ್ತನೆಯಿಂದ ಮಂಗಳೂರಿನ ಜನರಿಗೆ ಅವಮಾನ ಆಗಿದೆ, ಗೌರವಕ್ಕೆ ಧಕ್ಕೆಯಾಗಿದೆ. ಮಕ್ಕಳನ್ನು ಹೊರಗೆ ಕರೆದು ಘೋಷಣೆ ಕೂಗುವಂತೆ ಮಾಡಿದ್ದೀರಲ್ಲಾ.. ಆ ಮುಗ್ಧ ಮಕ್ಕಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದು ಚೈಲ್ಡ್ ಕೇರ್ ಆಕ್ಟ್ ಉಲ್ಲಂಘನೆ. ನಿಮಗೆ ಸಿನ್ಸಿಯಾರಿಟಿ ಇರುತ್ತಿದ್ದರೆ, ತನಿಖೆ ಮಾಡಿಸಬಹುದಿತ್ತು. ನಿಮಗೆ ಸಾರ್ವಜನಿಕವಾಗಿ ಹೀರೋ ಆಗಬೇಕಿತ್ತು ಅಷ್ಟೇ. ಅದಕ್ಕಾಗಿ ಮಕ್ಕಳನ್ನು ಧರ್ಮದ ಆಧಾರದಲ್ಲಿ ಎತ್ತಿಕಟ್ಟಿದ್ದೀರಿ. ಈ ಬಗ್ಗೆ ವಿಧಾನಸಭೆಯ ಸ್ಪೀಕರ್ ಗೆ ದೂರು ಕೊಟ್ಟು ಶಾಸಕ ಸ್ಥಾನದಿಂದ ಅನರ್ಹ ಮಾಡುವಂತೆ ಒತ್ತಾಯಿಸುತ್ತೇವೆ. ಹಕ್ಕುಬಾಧ್ಯತಾ ಸಮಿತಿಯಿಂದ ತನಿಖೆ ಮಾಡಿಸುತ್ತೇವೆ ಎಂದು ಐವಾನ್ ಡಿಸೋಜ ಹೇಳಿದರು.
ಇದಲ್ಲದೆ, ಕಾನೂನು ಹೋರಾಟವನ್ನೂ ಮಾಡಲಿದ್ದು, ಸೆಕ್ಷನ್ 153ಎ(ಧರ್ಮದ ಆಧಾರದಲ್ಲಿ ಎತ್ತಿಕಟ್ಟುವುದು) ಮತ್ತು 506 ಅಡಿ ಕ್ರಿಮಿನಲ್ ಅಪರಾಧ ಮಾಡಿದ್ದಾರೆ. ಮಕ್ಕಳ ಹಕ್ಕುಗಳ ಆಯೋಗ ಮತ್ತು ಮಾನವ ಹಕ್ಕು ಆಯೋಗಕ್ಕೂ ದೂರು ನೀಡುತ್ತೇವೆ. ಇವರು ಐವಾನ್ ಡಿಸೋಜನ ಅಪ್ಪನ ಶಾಲೆಯಲ್ಲ ಎಂದಿದ್ದಾರೆ. ನಾನು 21 ವರ್ಷದಲ್ಲಿದ್ದಾಗಲೇ ಚುನಾವಣೆ ಸ್ಪರ್ಧಿಸಿ ಗೆದ್ದವನು. ಹಲವಾರು ಲೇಬರ್ ಯೂನಿಯನ್ ಕಟ್ಟಿದ್ದೇನೆ. ವಿಧಾನ ಪರಿಷತ್ ಮುಖ್ಯ ಸಚೇತಕನಾಗಿ ಶಾಸಕರ ಹಕ್ಕು, ಬಾಧ್ಯತೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಇವರು ಮೊನ್ನೆ ರಾಜಕೀಯಕ್ಕೆ ಬಂದವರು. ನಮ್ಮನ್ನು ಚಾಲೆಂಜ್ ಮಾಡಬೇಡಿ, ಅದರಿಂದ ಒಳ್ಳೆದಾಗಲ್ಲ ಎಂದು ವೇದವ್ಯಾಸ ಕಾಮತ್ ಗೆ ಸವಾಲೆಸೆದರು.
ತಾವೇ ಡ್ರಾಫ್ಟ್ ಮಾಡಿ ಸಹಿ ಹಾಕಿಸಿದ್ದಾರೆ
ಮಾಜಿ ಶಾಸಕ ಜೆಆರ್ ಲೋಬೊ ಮಾತನಾಡಿ, ಮೇಲ್ನೋಟಕ್ಕೆ ಶಾಲೆಯ ಕಡೆಯಿಂದ ತಪ್ಪಾಗಿದೆ ಎಂದು ಕಂಡುಬರ್ತಾ ಇಲ್ಲ. ಆದರೆ ಶಾಸಕನಾಗಿ ಮಕ್ಕಳ ಜೊತೆಗೆ ನಡೆದುಕೊಂಡ ರೀತಿ ನಾವೆಲ್ಲ ನಾಚಿಕೆಪಡುವಂತಾಗಿದೆ. ವೇದವ್ಯಾಸ್ ಕರ್ತವ್ಯ ಚ್ಯುತಿ ಮಾಡಿದ್ದಾರೆ. ಶಾಲೆಯ ಒಳಗೆ ಹೋಗಿ ಚರ್ಚೆ ಮಾಡುವುದಕ್ಕೂ ಸೌಜನ್ಯ ಇಲ್ಲದ ವ್ಯಕ್ತಿ ಹೊರಗೆ ನಿಂತು ಬೀದಿ ರಂಪ ಮಾಡಿದ್ದಾರೆ. ಇದಲ್ಲದೆ, ಇವರ ಒತ್ತಡಕ್ಕೆ ಬಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಾವೇ ಡ್ರಾಫ್ಟ್ ಮಾಡಿ ಶಿಕ್ಷಕಿಯನ್ನು ವಜಾ ಮಾಡುವಂತೆ ಮಾಡಿದ್ದಾರೆ. ಆಮೇಲೆ ಅದಕ್ಕೆ ಒತ್ತಡ ಹೇರಿ ಸಹಿ ಹಾಕಿಸಿದ್ದಾರೆ. ಏನೇ ಪ್ರಕರಣ ಆದರೂ ಅಮಾನತು ಮಾಡುವುದು ಬಿಟ್ಟು ವಜಾ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.
ಬಹಿಷ್ಕರಿಸಲು ಭರತ್ ಶೆಟ್ಟಿ ಯಾರು ?
ಕ್ರಿಸ್ತಿಯನ್ನರ ಶಾಲೆ ಬಹಿಷ್ಕರಿಸಲು ಕರೆ ಕೊಡಲು ಭರತ್ ಶೆಟ್ಟಿ ಯಾರು.. ಇವರು ಒಂದು ಕೋಮನ್ನು ಎತ್ತಿಕಟ್ಟಿ ದೌರ್ಜನ್ಯ ಮಾಡಲು ಹೋಗಿದ್ದಾರೆ. ಇಬ್ಬರು ಶಾಸಕರ ವರ್ತನೆಯೂ ಪ್ರಶ್ನಾರ್ಹವಾಗಿದ್ದು, ಕಾನೂನು ಉಲ್ಲಂಘನೆಯಾಗಿದೆ. ಯಾವುದೇ ಶಾಲೆಯಲ್ಲಿ ಒಂದೇ ಕೋಮಿನವರಿಗೆ ಶಿಕ್ಷಣ ಕೊಡುವುದಿಲ್ಲ. ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ಸಿಗುತ್ತದೆ. ಜೆರೋಸಾ ಶಾಲೆ 60 ವರ್ಷಗಳಿಂದಿದ್ದು ಇಂತಹ ಕೆಲಸ ಈ ಹಿಂದೆ ಆಗಿಲ್ಲ. ಮಂಗಳೂರಿನಲ್ಲಿ ಮೊದಲ ಬಾರಿಗೆ ಇಂಗ್ಲಿಷ್ ಮೀಡಿಯಂ ಶುರು ಮಾಡಿದ ಶಾಲೆ. ಈ ವೇದವ್ಯಾಸ ಕಾಮತ್ ಮೊನ್ನೆ ಹುಟ್ಟಿದ ವ್ಯಕ್ತಿ ಇವರಿಗೇನು ಗೊತ್ತಿದೆ, ಶಾಲೆಯ ಕೊಡುಗೆ ಎಂದು ಪ್ರಶ್ನಿಸಿದರು.
ಇವರೆಲ್ಲ ನಳಿನ್ ಹಾಗೇ ಆಡ್ತಾರೆ, ಸುಧಾರಿಸಲ್ಲ
ಎಐಸಿಸಿ ಸದಸ್ಯ ಪಿವಿ ಮೋಹನ್ ಮಾತನಾಡಿ, ಮಂಗಳೂರಿನಲ್ಲಿ ಹಿಂದೆ ಯೋಗೀಶ್ ಭಟ್, ಧನಂಜಯ ಕುಮಾರ್ ಶಾಸಕ ಪ್ರತಿನಿಧಿಗಳಾಗಿದ್ದರು. ಯಾವತ್ತೂ ಇಂತಹ ಸ್ಥಿತಿಯಾಗಿರಲಿಲ್ಲ. ವೇದವ್ಯಾಸ ಕಾಮತ್ ಅವರು ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಏನು ಮಾಡಿದ್ದಾರೆ, ಸ್ಮಾರ್ಟ್ ಸಿಟಿಯಲ್ಲಿ ಏನು ಮಾಡಿದ್ದಾರೆಂದು ಗೊತ್ತಿದೆ. ಹೆಚ್ಚು ಹಾರಲು ಹೋಗಬೇಡಿ. ಇವರ ವರ್ತನೆಯನ್ನು ಬಿಜೆಪಿ ಒಪ್ಪುತ್ತದೆಯೇ.. ಆರೆಸ್ಸೆಸ್ ನಾಯಕರು ಒಪ್ಪುತ್ತಾರೆಯೇ, ಮುಕುಂದ್ ಹೇಳಬೇಕು. ದೇಶದಲ್ಲಿ 36 ಶೇಕಡಾ ಓಟು ಸಿಕ್ಕಿದೆಯೆಂದು ಹಿಗ್ಗಬೇಡಿ. 64 ಪರ್ಸೆಂಟ್ ಜನ ನಿಮ್ಮ ವಿರೋಧ ಇದ್ದಾರೆಂದು ತಿಳ್ಕೊಳ್ಳಿ. ಭರತ್ ಶೆಟ್ಟಿ, ಬೆಳ್ತಂಗಡಿಯ ಪೂಂಜಾ, ವೇದವ್ಯಾಸ್ ಇವರೆಲ್ಲ ತಮ್ಮ ನಾಯಕ ನಳಿನ್ ರೀತಿಯಲ್ಲೇ ಭಾಷೆ ಬಳಸುತ್ತಿದ್ದಾರೆ. ವಿದ್ಯಾವಂತರು ಹೀಗೆ ಆಡುವುದನ್ನು ಜನ ಸ್ವೀಕರಿಸುವುದಿಲ್ಲ. ಕಮ್ಯುನಲಿಸಂ ಒಂದು ಬಾರಿ ಯಶಸ್ಸು ಆಗುತ್ತೆ, ಪ್ರತಿ ಬಾರಿ ನಡೆಯುವುದಿಲ್ಲ. ಜನ ಉತ್ತರ ಕೊಡಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಎಂಜಿ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್, ನವೀನ್ ಡಿಸೋಜ ಮತ್ತಿತರರಿದ್ದರು.
Also Read:
Congress leaders criticize Vedavyas Kamath for using school children to shout slogans at Gerosa School in Mangalore. Vedavyas Kamath will face a complaint to Speaker UT Khader for dismissal The MLA has called out and criticized the school teachers. The controversy began on February 8 when a complaint was lodged at the Mangaluru South Police Station, accusing Sister Prabha of insulting the Ayodhya Sri Ram Mandir and Lord Rama while teaching the subject 'Work is Worship' at Prabha School.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm