ಬ್ರೇಕಿಂಗ್ ನ್ಯೂಸ್
11-02-24 09:42 pm Mangalore Correspondent ಕರಾವಳಿ
ಮಂಗಳೂರು, ಫೆ.11: ಬೈಕೊಂದು ಹೆದ್ದಾರಿ ದಾಟುತ್ತಿದ್ದಾಗ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಫರಂಗಿಪೇಟೆ ಬಳಿಯ ಅರ್ಕುಳ ಕ್ರಾಸ್ ನಲ್ಲಿ ನಡೆದಿದೆ. ಭಾನುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳೀಯರು ರೊಚ್ಚಿಗೆದ್ದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಅರ್ಕುಳದ ಅಬ್ಬೆಟ್ಟು ನಿವಾಸಿ ಚರಣ್ ರಾಜ್ (34) ಸಾವನ್ನಪ್ಪಿದ ಯುವಕ. ಚರಣ್ ಬೆಳಗ್ಗೆ ಅಡ್ಯಾರಿಗೆಂದು ಬರುತ್ತಿದ್ದಾಗ ಅರ್ಕುಳ ಕ್ರಾಸ್ ನಲ್ಲಿ ಹೆದ್ದಾರಿಗೆ ತಿರುವು ಪಡೆಯುತ್ತಿದ್ದಾಗಲೇ ಮಂಗಳೂರಿನಿಂದ ಪುತ್ತೂರಿನತ್ತ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಯಮದೂತನಂತೆ ಬಂದು ಅಪ್ಪಳಿಸಿದೆ. ಚಾಲಕನ ಅತಿವೇಗದಿಂದಾಗಿ ಬಸ್ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರಿನ ಇನ್ನೊಂದು ಬದಿಗೆ ಹೋಗಿದ್ದರೆ, ಬೈಕ್ ಕೂಡ ರಸ್ತೆಯ ಇನ್ನೊಂದು ಬದಿಗೆ ಹೋಗಿ ಬಿದ್ದಿದೆ. ಸವಾರನೂ ರಸ್ತೆಯ ಇನ್ನೊಂದು ಕಡೆಗೆ ಹೋಗಿ ಬಿದ್ದಿದ್ದು, ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಅರ್ಕುಳ ಕ್ರಾಸ್ ನಲ್ಲಿ ನಿರಂತರ ಅಪಘಾತ ಆಗುತ್ತಿರುವುದರಿಂದ ಬ್ಯಾರಿಕೇಡ್ ಹಾಕಲಾಗಿದೆ. ಭಾನುವಾರ ಆಗಿದ್ದರಿಂದ ಹೆದ್ದಾರಿಯಲ್ಲಿ ವಾಹನ ಕಡಿಮೆ ಇದ್ದುದರಿಂದ ಬಸ್ ಅತಿ ವೇಗದಿಂದ ಧಾವಿಸಿ ಬಂದಿತ್ತು. ಇದೇ ವೇಳೆ, ಸವಾರ ಹೆದ್ದಾರಿ ಕ್ರಾಸ್ ಮಾಡಲು ರಸ್ತೆಯ ಮಧ್ಯಕ್ಕೆ ಬಂದಿದ್ದು, ಬಸ್ ನೇರವಾಗಿ ಬೈಕಿಗೆ ಡಿಕ್ಕಿಯಾಗಿದೆ. ಇದರಿಂದ ಸಿಟ್ಟುಗೊಂಡ ಸ್ಥಳೀಯರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಬಂದ್ ಆಗಿದ್ದು, ಎರಡು ಕಡೆಯಲ್ಲೂ ನಾಲ್ಕೈದು ಕಿಮೀ ಉದ್ದಕ್ಕೆ ಬ್ಲಾಕ್ ಆಗಿತ್ತು.
ಮೂರು ತಿಂಗಳಲ್ಲಿ ಮೂರನೇ ಸಾವು
ಅರ್ಕುಳ ಹೆದ್ದಾರಿ ಕ್ರಾಸ್ ಮಾಡುವ ಸ್ಥಳದಲ್ಲಿ ಯಮರಾಯನೇ ಅವಿತು ಕುಳಿತಿರುವಂತಿದೆ. ಹೆದ್ದಾರಿಯ ಅವೈಜ್ಞಾನಿಕ ತಿರುವುನಿಂದಾಗಿ ಸರಣಿಯಾಗಿ ಅಪಘಾತ ನಡೆಯುತ್ತಿದ್ದು, ಮೂರು ತಿಂಗಳಲ್ಲಿ ಮೂರನೇ ಸಾವಾಗಿದೆ. ಡಿಸೆಂಬರ್ ನಲ್ಲಿ ಕ್ರಿಸ್ತಿಯನ್ ವ್ಯಕ್ತಿಯೊಬ್ಬರು ಇದೇ ರೀತಿ ಬೈಕಿನಲ್ಲಿದ್ದಾಗ ವಾಹನ ಬಡಿದು ಸಾವು ಕಂಡಿದ್ದರೆ, ಜನವರಿ ತಿಂಗಳಲ್ಲಿ ಮುಸ್ಲಿಂ ವ್ಯಕ್ತಿ ಸಾವು ಕಂಡಿದ್ದರು. ಇದೀಗ ಮತ್ತೊಬ್ಬರು ಸಾವು ಕಂಡಿದ್ದಾರೆ. ಕಳೆದ ನಾಲ್ಕೈದು ವರ್ಷದಲ್ಲಿ ಕನಿಷ್ಠ 15 ಮಂದಿ ಇದೇ ಸ್ಥಳದಲ್ಲಿ ಸಾವು ಕಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹೆದ್ದಾರಿಯನ್ನು ಕ್ರಾಸ್ ಮಾಡುವಲ್ಲಿ ಹೆಚ್ಚುವರಿ ಜಾಗ ಇಲ್ಲದಿರುವುದು, ಬೈಕ್ ಸವಾರರು ನೇರವಾಗಿ ಅರ್ಕುಳ ಕಡೆಯಿಂದ ಬಂದು ಹೆದ್ದಾರಿಗೆ ನುಗ್ಗುವುದು, ರಸ್ತೆಯ ಮಧ್ಯದಲ್ಲಿ ಜಾಗ ಇಲ್ಲದಿರುವುದರಿಂದ ಹೆದ್ದಾರಿಯಲ್ಲಿ ನುಗ್ಗಿ ಬರುವ ಬೃಹತ್ ವಾಹನಗಳು ದ್ವಿಚಕ್ರ ವಾಹನ ಸವಾರರ ಪ್ರಾಣವನ್ನು ಆಹುತಿ ಪಡೆಯುತ್ತಿವೆ. ಈ ಬಗ್ಗೆ ಹೆದ್ದಾರಿ ಅಧಿಕಾರಿಗಳಿಗೆ ಸಮಸ್ಯೆ ಸರಿಪಡಿಸಲು ಹೇಳಿದ್ದರೂ ಕ್ಯಾರೆಂದಿಲ್ಲ. ಇಂದು ಸ್ಥಳೀಯರು ಪೊಲೀಸರು ಮತ್ತು ಹೆದ್ದಾರಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದು, ಸರಣಿ ಅಪಘಾತ ಆಗುವುದನ್ನು ಏನಾದ್ರು ಮಾಡಿ ತಪ್ಪಿಸಿ ಎಂದು ಆಗ್ರಹ ಮಾಡಿದ್ದಾರೆ. ಪೊಲೀಸರು ಕೊನೆಗೆ ಆ ಜಾಗದಲ್ಲಿ ಹೆದ್ದಾರಿ ಕ್ರಾಸ್ ಮಾಡುವ ಡಿವೈಡರ್ ಬಂದ್ ಮಾಡುವ ಬಗ್ಗೆ ತಿಳಿಸಿದ್ದಾರೆ.
ಮೇರಮಜಲು ನಿವಾಸಿ ಚರಣ್ ರಾಜ್ ಸೆಂಟ್ರಿಂಗ್ ಕಂಟ್ರಾಕ್ಟ್ ತೆಗೆದು ಕೆಲಸ ಮಾಡುತ್ತಿದ್ದರು. ಮದುವೆಯಾಗಿ ಎರಡೂವರೆ ವರ್ಷದ ಮಗುವನ್ನು ಹೊಂದಿದ್ದರು. ಕುಟುಂಬದ ಯಾವುದೋ ಕೆಲಸಕ್ಕಾಗಿ ಭಾನುವಾರ ಬೆಳಗ್ಗೆ ಅಡ್ಯಾರಿಗೆ ಹೋಗಿ ಬರುವುದಾಗಿ ಹೊರಟಿದ್ದರು. ಅಷ್ಟರಲ್ಲೇ ಕೆಎಸ್ಸಾರ್ಟಿಸಿ ಬಸ್ ಯಮದೂತನಂತೆ ಬಂದು ಅಪ್ಪಳಿಸಿದ್ದು ಪ್ರಾಣ ಕಸಿದಿದೆ.
Mangalore Arkula accident, Ksrtc bus rams bike, 34 year old killed on spot. The diseased as been identified as Charan Raj. Angry public closed the highway for a while and staged protest as this was the third death in just span of 3 months.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 10:14 pm
Mangalore Correspondent
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm