ಬ್ರೇಕಿಂಗ್ ನ್ಯೂಸ್
07-02-24 08:14 pm Mangalore Correspondent ಕರಾವಳಿ
ಮಂಗಳೂರು, ಫೆ.7: ಒಂದು ತಿಂಗಳ ಹಿಂದಷ್ಟೆ ಮಂಗಳೂರು- ಗೋವಾ ನಡುವೆ ಆರಂಭಗೊಂಡಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನೂ ಕೇರಳಕ್ಕೆ ವಿಸ್ತರಿಸಲು ರೈಲ್ವೇ ಇಲಾಖೆ ಮುಂದಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಎಕ್ಸ್ ಪ್ರೆಸ್ ರೈಲನ್ನು ಕೋಝಿಕ್ಕೋಡ್ ಗೆ ವಿಸ್ತರಿಸಲು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕಣ್ಣೂರು ಸಂಸದ ಎಂ.ಕೆ. ರಾಘವನ್ ಇತ್ತೀಚೆಗೆ ಕರ್ನಾಟಕದ ಮೂರು ರೈಲುಗಳನ್ನು ಕೇರಳದ ಕೋಝಿಕ್ಕೋಡ್ ಗೆ ವಿಸ್ತರಿಸಬೇಕೆಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಬೆಂಗಳೂರು- ಕೊಯಂಬತ್ತೂರು, ಗೋವಾ – ಮಂಗಳೂರು ವಂದೇ ಭಾರತ್, ಬೆಂಗಳೂರು- ಕೊಂಬತ್ತೂರು ಉದಯ್ ಎಕ್ಸ್ ಪ್ರೆಸ್ ರೈಲನ್ನು ಕೋಝಿಕ್ಕೋಡ್ ವಿಸ್ತರಿಸಲು ಕೋರಿದ್ದರು.
ಬೆಂಗಳೂರು- ಮಂಗಳೂರು- ಕಣ್ಣೂರು ರೈಲು ಕೋಝಿಕ್ಕೋಡ್ ವಿಸ್ತರಣೆಯಾದ ಬೆನ್ನಲ್ಲೇ ಮಂಗಳೂರು- ಗೋವಾ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನೂ ಕೇರಳಕ್ಕೆ ವಿಸ್ತರಿಸಲು ರೈಲ್ವೇ ಸಚಿವರು ಒಪ್ಪಿಗೆ ನೀಡಿದ್ದಾರೆ ಎನ್ನುವ ಮಾಹಿತಿ ಕೇರಳದ ಸಂಸದರ ಮೂಲಕ ಸಿಕ್ಕಿದೆ. ಕೆಲವೇ ಸಮಯದಲ್ಲಿ ಕೇರಳಕ್ಕೆ ಮತ್ತೊಂದು ವಂದೇ ಭಾರತ್ ರೈಲು ಬರಲಿದೆ ಎಂದು ರೈಲ್ವೇ ಸಚಿವರು ಕಣ್ಣೂರು ಸಂಸದ ಎಂ.ಕೆ. ರಾಘವನ್ ಅವರಿಗೆ ಮಾಹಿತಿ ರವಾನಿಸಿದ್ದಾರೆ. ಮಂಗಳೂರು ಸಂಸದ ನಳಿನ್ ಕುಮಾರ್, ಬೆಂಗಳೂರು- ಕಣ್ಣೂರು ರೈಲನ್ನು ಕೋಜಿಕ್ಕೋಡ್ ವಿಸ್ತರಿಸಬಾರದು ಎಂದು ಮನವಿ ಮಾಡಿರುವಾಗಲೇ ಮಂಗಳೂರಿನ ಮತ್ತೊಂದು ರೈಲು ಕೈತಪ್ಪಿದೆ.
ಗೋವಾ- ಮಂಗಳೂರು ವಂದೇ ಭಾರತ್ ರೈಲು ಕೋಜಿಕ್ಕೋಡ್ ವಿಸ್ತರಣೆಯಾದರೆ, ಟೂರಿಸಂ ವಲಯಕ್ಕೆ ಲಾಭ ಆಗಲಿದೆ. ಕೋಜಿಕ್ಕೋಡ್ ನಿಂದ ಬೆಳಗ್ಗಿನ ಹೊತ್ತಿಗೆ ಮಂಗಳೂರಿಗೆ ಬರಲು ರೈಲು ಸೇವೆ ಇರಲಿಲ್ಲ. ವಂದೇ ಭಾರತ್ ಕೋಜಿಕ್ಕೋಡ್ ನಿಂದ ಮಂಗಳೂರು ಮೂಲಕ ಗೋವಾಕ್ಕೆ ತೆರಳಿದರೆ, ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಸದ್ಯ ಗೋವಾ –ಮಂಗಳೂರು ವಂದೇ ಭಾರತ್ ರೈಲು ನಷ್ಟದಲ್ಲಿ ಓಡುತ್ತಿದ್ದು, ಕೇರಳಕ್ಕೆ ವಿಸ್ತರಿಸಿದಲ್ಲಿ ಲಾಭದತ್ತ ಬರಲಿದೆ ಎಂದು ಸಂಸದ ಎಂ.ಕೆ.ರಾಘವನ್, ರೈಲ್ವೇ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿದ್ದಾರೆ.
ಗೋವಾ- ಮಂಗಳೂರು ವಂದೇ ಭಾರತ್ ರೈಲು ಪ್ರಯಾಣಿಕರ ಕೊರತೆಯಿಂದಾಗಿ ನಷ್ಟದಲ್ಲಿ ಓಡುತ್ತಿದೆಯೆಂದು ಇತ್ತೀಚೆಗೆ ಕೊಂಕಣ್ ರೈಲ್ವೇ ಮಾಹಿತಿ ನೀಡಿತ್ತು. ಇದರ ಬೆನ್ನಲ್ಲೇ ಈ ರೈಲನ್ನು ಮುಂಬೈಗೆ ವಿಸ್ತರಿಸಬೇಕೆಂದು ಮಂಗಳೂರು, ಉಡುಪಿಯ ರೈಲ್ವೇ ಯಾತ್ರಿಕರು ಒತ್ತಾಯಿಸಿದ್ದರು. ಅಲ್ಲದೆ, ರೈಲ್ವೇ ಸಚಿವಾಲಯಕ್ಕೂ ಈ ಬಗ್ಗೆ ಪತ್ರ ಬರೆಯಲಾಗಿತ್ತು. ಆದರೆ, ಇದರ ನಡುವಲ್ಲೇ ಕೇರಳದ ಸಂಸದರು ಗೋವಾ ರೈಲನ್ನೂ ಆ ಕಡೆಗೆ ತಿರುಗಿಸಲು ಮುಂದಾಗಿದ್ದಾರೆ. ಮಂಗಳೂರು ರೈಲು ನಿಲ್ದಾಣ ಪಾಲ್ಘಾಟ್ ವಿಭಾಗಕ್ಕೆ ಬರುವುದರಿಂದ ಅಲ್ಲಿ ಮಲಯಾಳಿಗಳೇ ಹೆಚ್ಚು ಅಧಿಕಾರಿಗಳಿದ್ದಾರೆ. ಇದರಿಂದಾಗಿ ಕರ್ನಾಟಕದ ಸಂಸದರ ಅಸಡ್ಡೆಯ ನಡುವೆ ಕೇರಳದ ಲಾಬಿಯೇ ಹೆಚ್ಚು ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ಸತತ ಬೇಡಿಕೆಯ ಬಳಿಕ ಮಂಗಳೂರು- ಗೋವಾ ಮಧ್ಯೆ ಡಿ.30ರಂದು ವಂದೇ ಭಾರತ್ ರೈಲು ಆರಂಭಗೊಂಡಿತ್ತು.
Mangalore Goa Vande Bharat Train to extend till Kozhikode kerala says Railway Minister Ashwini. Mangalore Goa Vande Bharat Train to extend till Kozhikode kerala says Railway Minister Ashwini.
12-07-25 10:47 pm
HK News Desk
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
12-07-25 11:00 pm
Mangalore Correspondent
Mangalore Accident, Bolero, Deralakatte: ದೇರಳ...
12-07-25 10:26 pm
Gas Leak at MRPL, Mangalore, death: ಎಂಆರ್ ಪಿಎ...
12-07-25 01:42 pm
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
12-07-25 11:10 pm
Mangalore Correspondent
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm