ಬ್ರೇಕಿಂಗ್ ನ್ಯೂಸ್
04-02-24 10:52 pm Mangalore Correspondent ಕರಾವಳಿ
ಪುತ್ತೂರು, ಫೆ.4: ಬಿಜೆಪಿ ಭದ್ರಕೋಟೆ ಎನಿಸಿರುವ ಸುಳ್ಯದಲ್ಲಿ ಮಂಡಲ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಅವರನ್ನು ನೇಮಕ ಮಾಡಿರುವ ಬಗ್ಗೆ ಅಸಮಾಧಾನ ಭುಗಿಲೆದ್ದಿದೆ. ತಾಲೂಕು ಸಮಿತಿಯಿಂದ ಕೋರ್ ಕಮಿಟಿಯಲ್ಲಿ ಚರ್ಚಿಸಿ ಜಿಲ್ಲಾ ಸಮಿತಿಗೆ ಕಳಿಸಿದ ಹೆಸರುಗಳನ್ನು ಕೈಬಿಟ್ಟು ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ ಅವರನ್ನು ಮಂಡಲಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ದಿಢೀರ್ ಆಗಿ ಬಿಜೆಪಿ ಕಚೇರಿಯಲ್ಲಿ ಒಂದಷ್ಟು ನಾಯಕರು ಸಭೆ ಸೇರಿ ವಿರೋಧ ನಿಲುವಿಗೆ ಬಂದಿದ್ದಾರೆ.
ಸಭೆ ಸೇರಿದ್ದವರಲ್ಲಿ ವೆಂಕಟ್ ದಂಬೆಕೋಡಿ, ಎವಿ ತೀರ್ಥರಾಮ, ಮಹೇಶ್ ಕುಮಾರ್ ರೈ ಮೇನಾಲ, ಕೃಷ್ಣ ಶೆಟ್ಟಿ ಕಡಬ, ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಮುಳಿಯ ಕೇಶವ ಭಟ್, ಸುಬೋದ್ ರೈ ಮೇನಾಲ, ರಾಕೇಶ್ ರೈ ಕೆಡೆಂಜಿ ಮತ್ತಿತರರು ಪ್ರಮುಖರಾಗಿದ್ದರು. ಇವರೆಲ್ಲ ಸಂಸದ ನಳಿನ್ ಕುಮಾರ್ ಆಪ್ತರಾಗಿದ್ದು, ಈ ಹಿಂದಿನ ಮಂಡಲ ಸಮಿತಿಯಲ್ಲಿ ಇವರದ್ದೇ ಕೈಮೇಲಾಗಿತ್ತು. ಹೊಸ ಜಿಲ್ಲಾ ಸಮಿತಿ ಮತ್ತು ಮಂಡಲ ಅಧ್ಯಕ್ಷ ಹುದ್ದೆಗೆ ಇಂಥವರೇ ಆಗಬೇಕೆಂದು ತಾಲೂಕು ಸಮಿತಿಯಿಂದ ಚರ್ಚಿಸಿ ಒಂದಷ್ಟು ಹೆಸರುಗಳನ್ನು ಕಳಿಸಿಕೊಡಲಾಗಿತ್ತು. ಜಿಲ್ಲಾ ಸಮಿತಿಗೆ ಮುಳಿಯ ಕೇಶವ ಭಟ್, ವಿನಯ ಕಂದಡ್ಕ, ವೆಂಕಟ್ ದಂಬೆಕೋಡಿ ಮತ್ತು ಮಂಡಲಾಧ್ಯಕ್ಷ ಹುದ್ದೆಗೆ ವಿನಯ ಮುಳುಗಾಡು ಅವರ ಹೆಸರನ್ನು ಸೂಚಿಸಲಾಗಿತ್ತು ಎನ್ನುವ ಮಾಹಿತಿ ಇದೆ.
ಆದರೆ, ಹೊಸ ಜಿಲ್ಲಾ ಸಮಿತಿಗೆ ರಾಕೇಶ್ ರೈ ಕೆಡೆಂಜಿ ಮತ್ತು ವಿನಯ ಮುಳುಗಾಡು ಅವರನ್ನು ಸೇರಿಸಿದ್ದರೆ, ಮಂಡಲಾಧ್ಯಕ್ಷ ಹುದ್ದೆಗೆ ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಭಾನುವಾರ ಮಧ್ಯಾಹ್ನ ತುರ್ತಾಗಿ ಸಭೆ ಕರೆದು ವೆಂಕಟ್ ವಳಲಂಬೆ ನೇಮಕದ ಬಗ್ಗೆ ಪ್ರಮುಖ ಮುಖಂಡರೆನಿಸಿದವರು ವಿರೋಧಿಸಿ ಮಾತನಾಡಿದ್ದಾರೆ. ಅಲ್ಲದೆ, ಅವರನ್ನು ಬದಲಾಯಿಸುವ ತನಕ ಪಕ್ಷದ ಕೆಲಸದಲ್ಲಿ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸಭೆಗೆ ಬಂದಿದ್ದವರಲ್ಲಿ ಒಂದಷ್ಟು ಮಂದಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದರೂ, ಪ್ರಮುಖರ ನಿರ್ಧಾರದ ಮುಂದೆ ಅವರ ಮಾತುಗಳಿಗೆ ಮನ್ನಣೆ ಸಿಗಲಿಲ್ಲ. ಕೊನೆಗೆ, ತಾಲೂಕು ಮಟ್ಟದ ನಾಯಕರೇ ಪಕ್ಷದ ಜಿಲ್ಲಾ ಸಮಿತಿಯ ನಿರ್ಧಾರ ವಿರೋಧಿಸಿ ಸುಳ್ಯ ಬಿಜೆಪಿ ಕಚೇರಿಗೆ ಬೀಗ ಹಾಕಿ ತೆರಳಿದ್ದಾರೆ. ಸಭೆಯಲ್ಲಿ 60-70 ಮಂದಿ ಕಾರ್ಯಕರ್ತರು ಸೇರಿದ್ದರೂ ಎಲ್ಲರ ಸಹಮತ ಇರಲಿಲ್ಲ.
ಕೋರ್ ಕಮಿಟಿಯಲ್ಲಿ ತೀರ್ಮಾನ ಆಗದವರನ್ನು ನೇಮಿಸಿದ್ದು ಯಾಕೆ ಮತ್ತು ಕಳೆದ ಚುನಾವಣೆಯಲ್ಲಿ ಶಾಸಕ ಅಂಗಾರ ಅವರಿಗೆ ಟಿಕೆಟ್ ನಿರಾಕರಿಸಿದಾಗ ತನ್ನ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ವ್ಯಕ್ತಿಯನ್ನು ಮತ್ತೆ ಅಧ್ಯಕ್ಷ ಮಾಡಿದ್ದು ಯಾಕೆ ಎಂಬ ಪ್ರಶ್ನೆಗಳನ್ನು ಪ್ರಮುಖವಾಗಿ ಎತ್ತಿದ್ದಾರೆ. ಆದರೆ, ಸುಳ್ಯದ ಪಕ್ಷದ ಮೂಲಗಳ ಪ್ರಕಾರ, ವೆಂಕಟ್ ವಳಲಂಬೆ ಪಕ್ಷ ಮತ್ತು ಆರೆಸ್ಸೆಸ್ ನಲ್ಲಿ ಶಿಸ್ತಿನ ಸಿಪಾಯಿ ಎನ್ನುವಂತಹ ವ್ಯಕ್ತಿ. ಹಿಂದಿನ ಚುನಾವಣೆಯಲ್ಲಿ ಒಂದಷ್ಟು ಮಂದಿ ಸ್ವಾಭಿಮಾನಿ ವೇದಿಕೆ ಕಟ್ಟಿಕೊಂಡಾಗಲೂ ವಿಚಲಿತರಾಗಿರಲಿಲ್ಲ. ಕಳೆದ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷದಲ್ಲಿದ್ದವರೇ ಕ್ರಾಸ್ ಓಟ್ ಮಾಡಿದಾಗ, ಅವರ ವಿರುದ್ಧ ಗಟ್ಟಿದನಿಯಲ್ಲಿ ವಿರೋಧಿಸಿದ್ದವರು ವೆಂಕಟ್ ವಳಲಂಬೆ. ಪಕ್ಷದ ಸಂಘಟನೆ ವಿಚಾರದಲ್ಲಿ ಸುಳ್ಯದಾದ್ಯಂತ ಗೌಡ ಜನಾಂಗ ಸೇರಿದಂತೆ ಎಲ್ಲರನ್ನೂ ಜೊತೆಯಾಗಿಸಿ ಒಯ್ದವರು. ಈಗ ಒಂದಷ್ಟು ದೊಡ್ಡ ನಾಯಕರ ಚೇಲಾಗಳು ಸೇರಿ ವಿರೋಧ ಮಾಡಿದ್ದಾರೆ, ಸಮಸ್ಯೆ ಎರಡು ದಿನದಲ್ಲಿ ಸರಿಯಾಗುತ್ತೆ ಎಂದಿದ್ದಾರೆ.
Bjp Sullia faces dispute within party members, Venkat Valalambe office forcefully closed by BJP nalin katel members.
12-07-25 10:47 pm
HK News Desk
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
12-07-25 11:00 pm
Mangalore Correspondent
Mangalore Accident, Bolero, Deralakatte: ದೇರಳ...
12-07-25 10:26 pm
Gas Leak at MRPL, Mangalore, death: ಎಂಆರ್ ಪಿಎ...
12-07-25 01:42 pm
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
12-07-25 11:10 pm
Mangalore Correspondent
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm