ಬ್ರೇಕಿಂಗ್ ನ್ಯೂಸ್
04-02-24 01:15 pm Mangalore Correspondent ಕರಾವಳಿ
ಮಂಗಳೂರು, ಫೆ.4: ರೈಲ್ವೇ ನಿಲ್ದಾಣದಲ್ಲಿ ಏಳು ತಿಂಗಳ ಮಗುವನ್ನು ಅಪಹರಿಸಿ, ಮೈಸೂರಿಗೆ ಒಯ್ದು ಭಿಕ್ಷಾಟನೆ ನಡೆಸುತ್ತಿದ್ದ ಪ್ರಕರಣದಲ್ಲಿ ಆರೋಪಿ ಮಹಿಳೆಗೆ ಮಂಗಳೂರಿನ 2ನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ 4 ವರ್ಷ ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡ ವಿಧಿಸಿದೆ.
ರುಬಿಯಾ ಯಾನೆ ಫಾತಿಮಾ(44) ಅಪರಾಧ ಸಾಬೀತಾಗಿ ಶಿಕ್ಷೆಗೊಳಗಾದ ಮಹಿಳೆ. 2016ರ ಡಿಸೆಂಬರ್ ತಿಂಗಳಿನಲ್ಲಿ ರುಬಿಯಾ ಭಿಕ್ಷಾಟನೆಗೆಂದು ಬಂದು ಕಂಕನಾಡಿ ರೈಲ್ವೇ ನಿಲ್ದಾಣದಲ್ಲಿ ತನ್ನನ್ನು ಫಾತಿಮಾ ಎಂದು ಇತರರಿಗೆ ಪರಿಚಯಿಸಿಕೊಂಡಿದ್ದಳು. 2017ರ ಜನವರಿ 12ರಂದು ರೈಲ್ವೇ ಜಂಕ್ಷನ್ ಪಾರ್ಕಿಂಗ್ ಸ್ಥಳದ ಬಳಿ ಇನ್ನೊಬ್ಬ ಮಹಿಳೆ ತನ್ನ ಏಳು ತಿಂಗಳ ಹಸುಗೂಸನ್ನು ಮಲಗಿಸಿ ಭಿಕ್ಷಾಟನೆ ನಡೆಸುತ್ತಿದ್ದಳು. ಈ ವೇಳೆ, ಮಗುವನ್ನು ಫಾತಿಮಾ ಅಪಹರಿಸಿದ್ದು ಭಿಕ್ಷಾಟನೆ ಉದ್ದೇಶಕ್ಕಾಗಿ ಕಳ್ಳ ಸಾಗಾಟ ಮಾಡಿದ್ದಳು. ಆನಂತರ, ಮಗುವಿನ ತಾಯಿ ಜೊತೆ ಸೇರಿ ಹುಡುಕಾಟದ ನಾಟಕವಾಡಿದ್ದಳು.
ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಫಾತಿಮಾ ಅದೇ ಮಗುವಿನ ಜೊತೆಗೆ ಭಿಕ್ಷಾಟನೆ ಮಾಡುತ್ತಿದ್ದಳು. 2020 ಜನವರಿ 22ರಂದು ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಹಲ್ಲಾ ಗ್ರಾಮದ ಅಶೋಕ ರಸ್ತೆಯಲ್ಲಿರುವ ಮಸೀದಿ ಎದುರಿನಲ್ಲಿ ಮಗುವಿನ ಜತೆ ಭಿಕ್ಷಾಟನೆ ಮಾಡುತ್ತಿದ್ದಾಗ, ಮಗುವನ್ನು ಕಳಕೊಂಡಿದ್ದ ಮಹಿಳೆ ಗಮನಿಸಿ ಮಂಗಳೂರಿನ ಕಂಕನಾಡಿ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಕಂಕನಾಡಿ ಠಾಣೆಯ ಇನ್ಸ್ ಪೆಕ್ಟರ್ ರಾಮಕೃಷ್ಣ ಕೆ.ಕೆ. ಹಾಗೂ ಎಸ್ಐ ಪ್ರದೀಪ್ ಟಿಆರ್ ಸಮಗ್ರ ತನಿಖೆ ನಡೆಸಿ ಒಟ್ಟು 20 ಮಂದಿ ಸಾಕ್ಷಿದಾರರನ್ನು ತನಿಖೆಗೊಳಪಿಸಿ ಐಪಿಸಿ 363(2) ಮತ್ತು 370ರಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ.ಪಿ ಅವರು, ಅಪರಾಧ ಸಾಬೀತುಗೊಂಡಿದ್ದರಿಂದ ಆರೋಪಿಗೆ ನಾಲ್ಕು ವರ್ಷ ಶಿಕ್ಷೆ ಹಾಗೂ ಹತ್ತು ಸಾವಿರ ದಂಡ ವಿಧಿಸಿದ್ದಾರೆ. ಮಗುವಿನ ತಾಯಿ ತಾನೇ ಎಂದು ಇಬ್ಬರೂ ಮಹಿಳೆಯರು ವಾದಿಸಿದ್ದರಿಂದ ಕೊನೆಗೆ ನ್ಯಾಯಾಲಯ ಡಿಎನ್ಎ ಪರೀಕ್ಷೆಗೆ ಮುಂದಾಗಿತ್ತು. ಪರೀಕ್ಷಾ ವರದಿಯಲ್ಲಿ ಮಗುವಿನ ಜೈವಿಕ ತಾಯಿ ದೂರುದಾರ ಮಹಿಳೆ ಎಂಬುದು ತಿಳಿದುಬಂದಿತ್ತು.
Bengalore resident sentenced to four years jail for kidnapping baby from Mangalore Railway Station in 2017. A Mangaluru court sentenced a 40-year-old resident of Malleshwaram in Bengaluru to four years of simple imprisonment on finding her guilty of kidnapping a seven-month-old baby boy from Mangaluru Junction Railway Station in 2017. The second Additional District and Sessions Judge Preethi K.P. sentenced 40-year-old Rabiya alias Fathima to undergo four-year simple imprisonment for the offence punishable under Section 363 of the Indian Penal Code (IPC).
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm