ಬ್ರೇಕಿಂಗ್ ನ್ಯೂಸ್
03-02-24 05:03 pm Udupi Correspondent ಕರಾವಳಿ
ಉಳ್ಳಾಲ, ಫೆ.3: ಉಳ್ಳಾಲ ನಗರಸಭೆಯ ನಗರೋತ್ಥಾನ -3 ರಡಿ ತೊಕ್ಕೊಟ್ಟು ಒಳಪೇಟೆಯಲ್ಲಿ ನವೀಕರಣಗೊಂಡ ವಾಣಿಜ್ಯ ಮಾರುಕಟ್ಟೆಯ ಸಾರ್ವಜನಿಕ ಬಹಿರಂಗ ಏಲಂ ಪ್ರಕ್ರಿಯೆ ಶನಿವಾರ ನಗರಸಭೆಯಲ್ಲಿ ನಡೆದಿದೆ. ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ, ಎಸ್ಡಿಪಿಐ, ಜೆಡಿಎಸ್ ನಗರ ಸದಸ್ಯರು ಹರಾಜನ್ನ ತಡೆದಿದ್ದು ವೀಕ್ಷಕರಾಗಿದ್ದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಸೂಚನೆಯಂತೆ ಪೊಲೀಸರು ನಗರ ಸದಸ್ಯರನ್ನ ಸಭೆಯಿಂದ ಹೊರದಬ್ಬಿದ್ದು, ಆಕ್ರೋಶಿತ ಕೌನ್ಸಿಲರ್ಗಳು ಉಳ್ಳಾಲ ನಗರಸಭೆ ಪೌರಾಯುಕ್ತೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಶನಿವಾರ ಬೆಳಗ್ಗೆ ಉಳ್ಳಾಲ ನಗರಸಭೆ ಸಭಾಂಗಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಿಜೆಪಿ ನಗರಸದಸ್ಯೆ ಗೀತಾ ಭಾಯಿ ಅವರು ನನ್ನ ಕ್ಷೇತ್ರ ವ್ಯಾಪ್ತಿಯ ಮಾರುಕಟ್ಟೆಯ ದಿಢೀರ್ ಹರಾಜು ಪ್ರಕ್ರಿಯೆ ಬಗ್ಗೆ ನಿನ್ನೆ ಸಂಜೆ ವಿಚಾರ ತಿಳಿದಿದೆ. ಈ ಹರಾಜಿನಲ್ಲಿ ಪಾರದರ್ಶಕತೆ ಇಲ್ಲ. ಹಣ ನೀಡಿದವರಿಗೆ 16 ಅಂಗಡಿಗಳನ್ನ ಮೀಸಲಿರಿಸಿದ್ದು ಹರಾಜನ್ನ ತಡೆಯುವಂತೆ ಸಹಾಯಕ ಆಯುಕ್ತರಲ್ಲಿ ಆಗ್ರಹಿಸಿದರು. ಸಭೆಯಲ್ಲಿದ್ದ ಜೆಡಿಎಸ್,ಎಸ್ಡಿಪಿಐ ನಗರಸದಸ್ಯರೂ ಹರಾಜನ್ನ ತಡೆಯುವಂತೆ ಒತ್ತಾಯಿಸಿದರು. ಹರಾಜು ಪ್ರಕ್ರಿಯೆ ಮುಂದುವರಿದಾಗ ನಗರಸದಸ್ಯರು ನಗರಸಭೆಗೆ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಸಹಾಯಕ ಆಯುಕ್ತರು ಧಿಕ್ಕಾರ ಕೂಗಿದ ಕೌನ್ಸಿಲರ್ಗಳನ್ನ ಪೊಲೀಸ್ ಬಲ ಪ್ರಯೋಗಿಸಿ ಸಭೆಯಿಂದ ಹೊರದಬ್ಬಿದ್ದಾರೆ.


ಆಕ್ರೋಶಿತ ನಗರ ಸದಸ್ಯರು ನಗರಸಭೆ ಕಚೇರಿ ಗೇಟಿನ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದು ನಗರಸಭೆಯ ಪ್ರಭಾರ ಪೌರಾಯುಕ್ತೆ ವಾಣಿ ಆಳ್ವ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ನಗರ ಸದಸ್ಯರಾದ ರಮೀಝ್ ಮಾತನಾಡಿ 2023 ರ ಜನವರಿ 10 ರಂದು ಮಾರುಕಟ್ಟೆಯನ್ನ ಹರಾಜು ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಹರಾಜಲ್ಲಿ ಭಾಗವಹಿಸಲು ಅನೇಕ ಮಂದಿ ತಲಾ 500 ರೂ. ಕಟ್ಟಿದ್ದರು. ಅಂದಿನ ಹರಾಜು ತಡೆದದ್ದು ಏಕೆ?ಜನರು ಕಟ್ಟಿದ ಹಣ ಎಲ್ಲಿ ಹೋಯಿತು, ಈಗ ದಿಢೀರನೆ ಹರಾಜು ನಡೆಸಿದ ಉದ್ದೇಶ ಏನು? ಚುನಾಯಿತ ಪ್ರತಿನಿಧಿಗಳನ್ನ ಹೊರಹಾಕಿ ಹರಾಜು ನಡೆಸಿದ ಅಧಿಕಾರಿಯನ್ನ ನಾವು ಸುಮ್ನೆ ಬಿಡಲ್ಲ ಎಂದು ಎಚ್ಚರಿಸಿದರು.
ನಗರ ಸದಸ್ಯೆ ಖಮರುನ್ನೀಸಾ ಮಾತನಾಡಿ ಇದು ಅಧಿಕಾರಿಗಳ ಲಾಭಕ್ಕೋಸ್ಕರ ಮಾಡಿದ ಹರಾಜು. ಇಲ್ಲಿನ ಪೌರಾಯುಕ್ತೆ ಒಂದು ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಕೌನ್ಸಿಲರ್ಗಳನ್ನ ವಿಶ್ವಾಸಕ್ಕೆ ತೆಗೆಯದೆ ಯಾವುದೇ ಸಭೆ ಮಾಡದೆ ನಿನ್ನೆ ಸಂಜೆ ಏಕಾಏಕಿ ಹರಾಜಿನ ಸಂದೇಶವನ್ನ ವಾಟ್ಸಪ್ಪಲ್ಲಿ ಕಳುಹಿಸಿದ್ದಾರೆ ಎಂದರು.
ನಗರಸದಸ್ಯರ ವಿರೋಧ, ಪ್ರತಿಭಟನೆಯ ನಡುವಲ್ಲೂ ಹರಾಜು ಪ್ರಕ್ರಿಯೆ ನಡೆದಿದೆ.
ನಗರಸಭೆಯ ಮಾಜಿ ಉಪಾಧ್ಯಕ್ಷರೊಬ್ಬರು ಲಕ್ಷಾಂತರ ರೂಪಾಯಿಗಳನ್ನ ಪಡೆದು ಮಾರುಕಟ್ಟೆಯ ಮಳಿಗೆಗಳನ್ನ ಇಷ್ಟ ಮಿತ್ರರಿಗೆ ಮಾರಿರುವ ಆರೋಪಗಳಿವೆ. ಇದೀಗ ನಗರಸಭೆಯಲ್ಲಿ ಮೀಸಲಾತಿಯ ಕಾನೂನಿನ ತೊಡಕಿನಿಂದ ಜನರ ಆಡಳಿತ ಇಲ್ಲದೆ ಎಲ್ಲವೂ ಪ್ರಭಾರ ಪೌರಾಯುಕ್ತೆಯ ಹುಕುಮಿನಂತೆ ನಡೆಯುತ್ತಿದೆ.
Mangalore Thokottu Market sale, Fight erupts at municiapl town office during meeting.
28-05-26 06:18 pm
HK News Staffer
CM Siddaramaiah, Supporters crying, Kaveri: ಸ...
28-05-26 05:31 pm
ರಾಜ್ಯಸಭೆಗೆ ಹೋಗಲ್ಲ, ರಾಜ್ಯದಲ್ಲೇ ಸಕ್ರಿಯ ರಾಜಕಾರಣದ...
28-05-26 04:34 pm
CM Siddaramaiah resigns: ಸಿಎಂ ಸ್ಥಾನಕ್ಕೆ ಸಿದ್ದ...
28-05-26 03:24 pm
'ಮಹಾನಾಯಕ' ಸಿದ್ದರಾಮಯ್ಯ ಯುಗಾಂತ್ಯ.? ಇಂದೇ ಸಿಎಂ ಸ್...
28-05-26 10:56 am
27-05-26 09:17 pm
HK News Desk
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
28-05-26 10:43 am
HK News Staffer
ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಇಬ್ಬರು ನಟ...
27-05-26 08:34 pm
ಉರ್ವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೇರಳಕ್ಕೆ...
27-05-26 07:56 pm
ಬೈಜುಸ್ ಸಂಸ್ಥಾಪಕ ರವೀಂದ್ರನ್ಗೆ ಭಾರೀ ಆಘಾತ ; ಜೈಲ...
27-05-26 01:30 pm
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm