ಬ್ರೇಕಿಂಗ್ ನ್ಯೂಸ್
30-01-24 11:05 pm Mangalore Correspondent ಕರಾವಳಿ
ಮಂಗಳೂರು, ಜ.30: ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದಲ್ಲಿ ಭಾರೀ ಸ್ಫೋಟಕ್ಕೆ ಕಾರಣವಾದ ಸುಡುಮದ್ದು ದುರಂತ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದು ಬರೀಯ ಸುಡುಮದ್ದು ಅಥವಾ ಪಟಾಕಿಯಾಗಿದ್ದರೆ, ಸ್ಫೋಟಗೊಂಡಿರುವ ಪ್ರದೇಶ ಆ ಪರಿ ಸಿಡಿದು ಹೋಗಲು ಸಾಧ್ಯವಿತ್ತೇ..? ಅಲ್ಲಿದ್ದ ಇಬ್ಬರು ಕಾರ್ಮಿಕರು ಶವದ ಒಂದು ಪೀಸೂ ಸಿಗದ ರೀತಿ ಚೂರು ಚೂರಾಗಿ ಸಿಡಿದು ಹೋಗುತ್ತಿದ್ದರೇ..? ಅಲ್ಲಿದ್ದ ಭೂಮಿ ನಕ್ಸಲರು ನೆಲಬಾಂಬು ಸಿಡಿಸಿದ ರೀತಿ 2-3 ಮೀಟರ್ ಅಗಲದಲ್ಲಿ ಗುಂಡಿ ಬೀಳುತ್ತಿತ್ತೇ ಇತ್ಯಾದಿ ಪ್ರಶ್ನೆಗಳು ಎದ್ದಿವೆ.
ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಒಟ್ಟು ಪ್ರಕರಣದ ಬಗ್ಗೆ ಎಚ್ಚತ್ತುಕೊಂಡು ತನಿಖೆಗೆ ಆದೇಶ ಮಾಡಿದ್ದಾರೆ. ಪೊಲೀಸರು ಲೈಸನ್ಸ್, ಸುಡುಮದ್ದಿನ ಪ್ರಮಾಣದ ಬಗ್ಗೆಯಷ್ಟೇ ತನಿಖೆಗೆ ಮುಂದಾಗಿದ್ದಾರೆ. ರಾಜ್ಯ ಸರಕಾರ ಇನ್ನೂ ಇಷ್ಟೊಂದು ದೊಡ್ಡ ಸ್ಫೋಟ ಆಗಿದ್ದರೂ ಎಚ್ಚತ್ತುಕೊಂಡಂತೆ ಇಲ್ಲ. ಮೇಲ್ನೋಟಕ್ಕೆ ಮೈಸೂರಿನ ಯಾರೋ ದೊಡ್ಡ ಮಟ್ಟದ ಸುಡುಮದ್ದು ತಯಾರಿಸಿಕೊಡಲು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದಕ್ಕಾಗಿ ವಿಶೇಷ ಮಾದರಿಯ ಸುಡುಮದ್ದುಗಳನ್ನು ತಯಾರಿಸುತ್ತಿದ್ದರು ಅನ್ನೋದು ಮಾಹಿತಿ. ಇಷ್ಟಕ್ಕೂ ಇಡೀ ಪಟಾಕಿ ದಾಸ್ತಾನಿಗೆ ಬೆಂಕಿ ಹತ್ತಿಕೊಂಡು ಸುಟ್ಟು ಹೋದರೂ ಅದು ಬಾಂಬ್ ಬ್ಲಾಸ್ಟ್ ಆದಂತೆ ಆಗಿರಲು ಸಾಧ್ಯವಿಲ್ಲ. ಇಲ್ಲಿ ಐದು ಬಾರಿ ದೊಡ್ಡ ಸದ್ದಿನೊಂದಿಗೆ ಬ್ಲಾಸ್ಟ್ ಆಗಿದೆ ಅನ್ನೋದು ಸ್ಥಳೀಯರ ಮಾಹಿತಿ. ಅಷ್ಟರಲ್ಲೇ ಅಲ್ಲಿ ಪಟಾಕಿ ತಯಾರಿಸುತ್ತಿದ್ದ ಶೆಡ್ ಪೂರ್ತಿಯಾಗಿ ನಾಮಾವಶೇಷ ಆಗಿದೆ. ತೋಟದ ಮಧ್ಯೆ ಶೆಡ್ ಇದ್ದರೂ, ಅಲ್ಲಿ ಶೆಡ್ ಇತ್ತು ಅನ್ನೋದನ್ನೇ ನಂಬಲಾಗದ ರೀತಿ ಭೀಭತ್ಸ ದೃಶ್ಯ ಎದುರಾಗಿದೆ.
ಘಟನೆ ನಡೆದ ಪ್ರದೇಶಕ್ಕೆ ಪೊಲೀಸರು ಯಾರನ್ನೂ ಹೋಗಲು ಬಿಟ್ಟಿಲ್ಲ. ಮಾಧ್ಯಮದವರನ್ನಂತೂ ಹತ್ತಿರಕ್ಕೂ ಬಿಡುತ್ತಿಲ್ಲ. ಆದರೆ ಸ್ಫೋಟಗೊಂಡ ಪ್ರದೇಶವನ್ನು ಗಮನಿಸಿದರೆ, ಅಲ್ಲಿನ ಸ್ಥಿತಿಯನ್ನು ನೋಡಿದರೆ ಅದು ಬರೀ ಸುಡುಮದ್ದು ಅಷ್ಟೇ ಸಿಡಿದಿರಲಿಕ್ಕಿಲ್ಲ ಅನ್ನುವ ಶಂಕೆ ಮೂಡುತ್ತಿದೆ. ಇಬ್ಬರು ಕಾರ್ಮಿಕರ ಶವದ ತುಂಡುಗಳು ತೋಟದಿಂದ ನೂರು ಮೀಟರ್ ದೂರದಲ್ಲಿರುವ ರಸ್ತೆಗೆ ಬಂದು ಬಿದ್ದಿವೆ. ಕರುಳು, ಕೈಯ ಬೆರಳಿನ ಭಾಗಗಳು ಎಲ್ಲೆಲ್ಲೋ ದೂರಕ್ಕೆ ಬಿದ್ದಿದೆ. ಕೋಳಿ ಮಾಂಸದ ತುಂಡುಗಳಂತೆ ಸುತ್ತಲಲ್ಲಿ ಮಾಂಸದ ತುಣುಕುಗಳು ಸಿಕ್ಕಿವೆ. ಶೆಡ್ ಸುತ್ತಲಿದ್ದ ಎಂಟಡಿ ಎತ್ತರದ ಕಲ್ಲಿನ ಆವರಣ ಗೋಡೆ ಛಿದ್ರಗೊಂಡು ಬಿದ್ದಿದೆ. ಶೆಡ್ ಇದ್ದ ಜಾಗದಲ್ಲಿ ತಗಡಿನ ಶೀಟುಗಳು ಪುಡಿ ಪುಡಿಯಾಗಿ ಬಿದ್ದಿದ್ದರೆ, ಕಲ್ಲುಗಳು ತುಂಡು ತುಂಡಾಗಿ ದೂರ ದೂರಕ್ಕೆ ಚದುರಿ ಬಿದ್ದಿವೆ. ಪರಿಸರದಲ್ಲಿದ್ದ ಅಡಿಕೆ ಮರಗಳು ಛಿದ್ರಗೊಂಡಿದ್ದು ಅದು ಅಡಿಕೆ ಮರ ಅನ್ನುವುದನ್ನೇ ಗುರುತು ಹಿಡಿಯಲಾಗದಂತಿದೆ. ಮೊನ್ನೆ ಸ್ಥಳಕ್ಕೆ ಬಂದಿದ್ದ ಐಜಿಪಿ ಅಮಿತ್ ಸಿಂಗ್, ಸ್ಫೋಟಗೊಂಡ ಜಾಗವನ್ನು ನೋಡಿ ಹೌಹಾರಿದ್ದಾರೆ. ನಿನ್ನೆ ಸ್ಥಳಕ್ಕಾಗಮಿಸಿದ್ದ ಡಿಐಜಿ ದರ್ಜೆಯ ರವಿ ಚೆನ್ನಣ್ಣವರ್ ಅವರೂ ಸ್ಫೋಟದ ದೃಶ್ಯವನ್ನು ಗಮನಿಸಿ ಅವಾಕ್ಕಾಗಿ ನಿಂತು ಬಿಟ್ಟಿದ್ದಾರೆ.
ಇಷ್ಟಕ್ಕೂ ಅಲ್ಲಿಯೇ ಪಕ್ಕದಲ್ಲಿ ಸುಡುಮದ್ದುಗಳನ್ನು ಶೇಖರಿಸಿಟ್ಟಿದ್ದ ಶೆಡ್ಡಿಗೆ ಬೆಂಕಿ ಹತ್ತಿಕೊಂಡಿಲ್ಲ. ಅಲ್ಲಿ 300 ಕೇಜಿಗೂ ಹೆಚ್ಚು ಸುಡುಮದ್ದುಗಳಿವೆ ಎನ್ನಲಾಗುತ್ತಿದೆ. ಪಟಾಕಿ ಘಟಕದ ಮಾಲೀಕ ಸೈಯದ್ ಬಶೀರ್ ಕೇವಲ 15 ಕೇಜಿಯಷ್ಟು ಪಟಾಕಿ ಶೇಖರಿಸಿಡಲು ಲೈಸನ್ಸ್ ಹೊಂದಿದ್ದರೂ, ಪೊಲೀಸರು, ಅಧಿಕಾರಿಗಳು ಊಹಿಸಲಾಗದಷ್ಟು ಪಟಾಕಿ, ಸುಡುಮದ್ದುಗಳನ್ನು ಶೇಖರಣೆ ಮಾಡಿರುವುದು ಪತ್ತೆಯಾಗಿದೆ. ಸದ್ಯಕ್ಕೆ ಪೊಲೀಸರು ಅವನ್ನೆಲ್ಲ ಸೀಜ್ ಮಾಡಿದ್ದಾರೆ. ಮಾಲೀಕ ಸೈಯದ್ ಬಶೀರ್ ಮತ್ತು ಹಾಸನ ಜಿಲ್ಲೆಯ ವಡ್ಡರಹಳ್ಳಿ ನಿವಾಸಿ ಕಿರಣ್ ಎಂಬವರನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಐದು ದಿನಗಳಿಗೆ ಕಸ್ಟಡಿ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಅಲ್ಲಿ ಎದ್ದಿರೋ ಅನುಮಾನಗಳಿಗೆ ಪೊಲೀಸರು ಉತ್ತರ ನೀಡುವ ಗೋಜಿಗೆ ಹೋಗಿಲ್ಲ. ಪಟಾಕಿ ದಾಸ್ತಾನಿಗೆ ಬೆಂಕಿ ಬೀಳದಿದ್ದರೂ, ಒಂದೆರಡು ‘’ಸುಡುಮದ್ದು’’ ಗೋಲಿಗಳಿಗೆ ಬೆಂಕಿ ಬಿದ್ದರೆ ಇಷ್ಟೊಂದು ಅಗಾಧ ರೀತಿಯಲ್ಲಿ ಸ್ಫೋಟ ಆಗುತ್ತಿತ್ತೇ ಅನ್ನುವ ಪ್ರಶ್ನೆ ಗಂಭೀರವಾಗಿ ಕಾಡುತ್ತಿದೆ.
ಕರಾವಳಿಯಲ್ಲಿ ದೊಡ್ಡ ಮಟ್ಟದ ಜಾತ್ರೆ, ಉತ್ಸವಗಳಿಗೆ ಸುಡುಮದ್ದು ಸುಡುವುದು ಸಾಮಾನ್ಯ. ಪುತ್ತೂರು ಬೆಡಿ, ವಿಟ್ಲ ಬೆಡಿ, ಕುಂಬ್ಲೆ ಬೆಡಿ ಅನ್ನುವುದನ್ನು ಹೆಚ್ಚಿನ ಜನ ನೋಡಿದ್ದಾರೆ, ಕೇಳಿದ್ದಾರೆ. ಜನರನ್ನು ನೂರು ಮೀಟರ್ ದೂರದಲ್ಲಿ ನಿಲ್ಲಿಸಿ ಪಟಾಕಿಗಳನ್ನು ರಾಶಿ ಹಾಕಿ ಸುಡುತ್ತಾರೆ. ಒಂದಷ್ಟು ಬಣ್ಣದ ಪಟಾಕಿಗಳು ಮೇಲೆ ಹೋಗಿ ಸಿಡಿದು ಚೂರಾದರೆ, ಇನ್ನೊಂದಷ್ಟು ದೊಡ್ಡ ಸದ್ದಿನೊಂದಿಗೆ ಢಾಂ ಢೀಂ ಅನ್ನುತ್ತವೆ. ಅಷ್ಟಕ್ಕೆ ಮುಗಿದು ಹೋದರೂ, ಅದು ಯಾವತ್ತೂ ಸಿಡಿಸಿದ ಜಾಗದಲ್ಲಿ ಹೊಂಡ ಎಬ್ಬಿಸುವುದಿಲ್ಲ. ಅಪ್ಪಿ ತಪ್ಪಿ ಪಟಾಕಿ ಸಿಡಿದು ಕೆಲವೊಮ್ಮೆ ಗಾಯಗೊಂಡರೂ, ಮುಖ, ಮೈ ಕರಟಿ ಹೋಗಿದ್ದು ಬಿಟ್ಟರೆ, ಚೂರು ಚೂರಾಗುವಂತೆ ಸಿಡಿದು ಹೋಗಿದ್ದಿಲ್ಲ. ಇಲ್ಲಿ ಮಾತ್ರ ಇಷ್ಟೊಂದು ಭಯಾನಕ ರೀತಿಯಲ್ಲಿ ಬ್ಲಾಸ್ಟ್ ಯಾಕಾಯ್ತು ಅನ್ನುವ ಪ್ರಶ್ನೆಗೆ ಜಿಲ್ಲಾಡಳಿತ ಉತ್ತರ ಕೊಟ್ಟೀತೇ.. ಉತ್ತರ ನೀಡದೇ ಇದ್ದರೆ, ಅಲ್ಲಿ ನೆಲ ಬಾಂಬು ರೀತಿಯ ಸ್ಫೋಟಕಗಳನ್ನು ತಯಾರಿಸುತ್ತಿದ್ದರೇ ಅನ್ನುವ ಅನುಮಾನಗಳಿಗೆ ಕಾರಣವಾಗುತ್ತದೆ.
Mangalore Venur Blast, DIG Amit Singh visits spot, big mystery exposed. Three persons were killed in a blast at a licenced cracker manufacturing unit under Kukkedy Gram Panchayat, near Venur, of Belthangady taluk on Sunday, January 28.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm