ಬ್ರೇಕಿಂಗ್ ನ್ಯೂಸ್
30-01-24 09:07 pm Mangalore Correspondent ಕರಾವಳಿ
ಬೆಳ್ತಂಗಡಿ, ಜ.30 : ಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ತುಷ್ಟೀಕರಣವೇ ಮುಖ್ಯ ಎಂಬುದನ್ನು ಅದು ಆಗಾಗ್ಗೆ ಸಾಬೀತು ಮಾಡುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಆದ ಘಟನೆಯೇ ಇದಕ್ಕೊಂದು ತಾಜಾ ಉದಾಹರಣೆ. ಹಿಂದೂ ವಿರೋಧಿ ಕೃತ್ಯಗಳನ್ನು ಬೆಂಬಲಿಸುವರಿಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಡ್ಯದ ಕೆರೆಗೋಡುವಿನಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದು ಖಂಡನೀಯ. ಅಲ್ಲಿ ಅಧಿಕಾರಿಗಳಿಂದ ಅನುಮತಿ ಪಡೆದು 108 ಅಡಿ ಎತ್ತರದ ಧ್ವಜ ಹಾಕಿದ್ದಾರೆ. ಆದರೆ ಅಲ್ಪಸಂಖ್ಯಾತರಿಗೆ ಹೆದರಿ ಸರಕಾರ ಧ್ವಜವನ್ನು ಕೆಳಗಿಳಿಸಿದೆ. ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಕರಸೇವಕರೊಬ್ಬರನ್ನು ಹಳೇ ಪ್ರಕರಣದ ನೆಪದಲ್ಲಿ ಬಂಧಿಸಿರುವುದು, ವಾರದ ಹಿಂದೆ ಚಿಕ್ಕಮಗಳೂರಿನ ಕನ್ನಡ ಅರ್ಚಕ ಹಿರೇಮಗಳೂರು ಕಣ್ಣನ್ ಅವರಿಗೆ ಅರ್ಚಕ ಸಂಭಾವನೆಯನ್ನು ವಾಪಸು ಮಾಡುವಂತೆ ಸರಕಾರ ಆದೇಶ ಮಾಡಿರುವುದು ಅವರ ಹಿಂದೂ ವಿರೋಧಿ ಕೆಲಸಕ್ಕೆ ಸಾಕ್ಷಿಗಳಾಗಿವೆ. ಒಂದೆಡೆ ಕಾಂಗ್ರೆಸ್‌ನವರು ನಾವೂ ಹಿಂದೂಗಳೇ ಎಂದು ಹೇಳುತ್ತಾ ಹಿಂದೂ ವಿರೋಧಿ ಕೃತ್ಯಗಳನ್ನು ಮಾಡುತ್ತಿದ್ದಾರೆ. ಅನುಮತಿ ಪಡೆದು ಹಾಕಿದಂತಹ ಹನುಮ ಧ್ವಜವನ್ನು ಜನಾಭಿಪ್ರಾಯಕ್ಕೆ ವಿರುದ್ಧವಾಗಿ, ಬಲಾತ್ಕಾರವಾಗಿ ತೆಗೆದಿರುವುದು ಸರಿಯಲ್ಲ ಇವರ ಹಿಂದು ವಿರೋಧಿ ನೀತಿಯಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಸಣ್ಣ ಬ್ಯಾನರ್, ಫ್ಲೆಕ್ಸ್ ಹಾಕಬೇಕಾದರೂ ಪೋಲಿಸರ ಅನುಮತಿ ಬೇಕು. ಅದನ್ನು ಹಾಕಿದವರು ಕಾನೂನು ಬಾಹಿರ ಕೃತ್ಯ ಮಾಡಿದಂತೆ ಪರಿಗಣಿಸುತ್ತಾರೆ. ಆದರೆ ಒಂದು ಕೋಮಿನ ಎಷ್ಟು ದೊಡ್ಡ ಬ್ಯಾನರ್ ಇದ್ದರೂ ಅದು ಸರಕಾರಕ್ಕೆ ಮಾನ್ಯ. ಅವರು ದೊಡ್ಡ ಧ್ವಜಗಳನ್ನು, ಕತ್ತಿ, ತಲವಾರುಗಳನ್ನು ಹಿಡಿದು ಮೆರವಣಿಗೆ ಹೋರಟರೆ( ಶಿವಮೊಗ್ಗದಲ್ಲಿ ಮಾಡಿದಂತೆ) ಅವರು ಮುಗ್ದರು, ಅಮಾಯಕರು, ದಾರಿತಪ್ಪಿರುವ ನಮ್ಮ ಸಹೋದರರು ಎಂದು ಸಮರ್ಥನೆ ಕೊಟ್ಟು ಅವರಿಗೆ ವಿನಾಯಿತಿ ನೀಡುತ್ತದೆ. ಇಂತಹ ಹಿಂದೂ ವಿರೋಧಿ ಸರಕಾರ ನಮಗೆ ಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸಿಗರು ಭಾರತ ಜೋಡೋ ಅಂತ ಮತ್ತೆ ಹೊರಟಿದ್ದಾರೆ. ಆದರೆ ಇವರ ಐ.ಎನ್.ಡಿ.ಐ.ಎ. ಒಕ್ಕೂಟ ಛಿದ್ರವಾಗಿದೆ. ಅಧಿಕಾರದ ಲಾಲಸೆಗಾಗಿ ಹಾಗೂ ಕುಟುಂಬ ರಾಜಕಾರಣ ಮುಂದುವರಿಸಲು ಇವರು ಮಾಡುತ್ತಿರುವ ನಾಟಕ ಇದು ಎಂದು ಜನರು ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ಅಭಿವೃದ್ಧಿ, ಸ್ಥಿರ ಮತ್ತು ಸುಭದ್ರ ಸರಕಾರವನ್ನು ಕೊಡುವುದಕ್ಕೆ ಬಿಜೆಪಿಯಿಂದ ಮಾತ್ರ ಸಾಧ್ಯ. ಅಧಿಕಾರದ ಲಾಲಸೆಗಾಗಿ, ಸ್ವಾರ್ಥಕ್ಕಾಗಿ ಕುಟುಂಬವಾದಿಗಳು ಒಟ್ಟಾಗಿ ಹೊರಟರೆ ಅದಕ್ಕೆ ಬಲ ಇರುವುದಿಲ್ಲ. ದೇಶದ ದೃಷ್ಟಿಯಲ್ಲಿ ಒಂದಾದರೆ ಅದಕ್ಕೊಂದು ಅರ್ಥ, ಶಕ್ತಿ ಇರುತ್ತಿತ್ತು ಎಂದಿದ್ದಾರೆ.
ವೇಣೂರು ಸನಿಹದ ಕುಕ್ಕೇಡಿ ಗ್ರಾಮ ಪಂಚಾಯತಿನ ಗೋಳಿಯಂಗಡಿಯ ಕಡ್ತ್ಯಾರು ಎಂಬಲ್ಲಿ ಸುಡುಮದ್ದು ತಯಾರಿ ಘಟಕದಲ್ಲಿ ರವಿವಾರ ಸಂಭವಿಸಿದ ಸ್ಫೋಟ ಭೀಕರವಾದದ್ದು. ಘಟನೆಯಲ್ಲಿ ಮೂವರು ಪ್ರಾಣ ತೆತ್ತಿರುವುದು ವಿಷಾದನೀಯ. ಈ ಸ್ಫೋಟದ ಹಿಂದೆ ಸಮಗ್ರ ತನಿಖೆ ನಡೆಸಬೇಕು ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
The Congress has often proved that minority appeasement is the key to it. The incident in Mandya district is the latest example of this. MLC Pratapsinh Nayak said in a press statement that the people will teach a lesson to those who support anti-Hindu activities.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm